newsfirstkannada.com

ದುರಂತ ನಾಯಕಿ.. 10 ದಿನದ ಹಿಂದೆ ಪಾರಾಗಿದ್ದ ಶಾಸಕಿ ಲಾಸ್ಯ ನಂದಿತಾ 2ನೇ ಅಪಘಾತದಲ್ಲಿ ಸಾವು

Share :

Published February 23, 2024 at 1:48pm

    ಜಸ್ಟ್ 10 ದಿನಗಳ ಹಿಂದೆ ಕೂಡ ಶಾಸಕಿಗೆ ಭೀಕರ ಕಾರು ಅಪಘಾತ

    ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆ

    ಲಾಸ್ಯ ನಂದಿತಾ ಅವರ ತಂದೆ ಜಿ.ಸಾಯಣ್ಣ ಕೆಸಿಆರ್‌ ಅತ್ಯಾಪ್ತರಾಗಿದ್ದರು

ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಪಕ್ಷದ ಯುವ ಶಾಸಕಿ ಲಾಸ್ಯ ನಂದಿತಾ ಅವರ ಬದುಕು ದುರಂತವಾಗಿ ಅಂತ್ಯವಾಗಿದೆ. 37 ವರ್ಷದ ಶಾಸಕಿ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗಿನ ಜಾವ ಭೀಕರ ಅಪಘಾತಕ್ಕೀಡಾಗಿದ್ದು, ಲಾಸ್ಯ ನಂದಿತಾ ಸಾವನ್ನಪ್ಪಿದ್ದಾರೆ. ಲಾಸ್ಯ ನಂದಿತಾ ಅವರ ಸಾವಿಗೆ ತೆಲಂಗಾಣದಲ್ಲಿ ಕುಟುಂಬಸ್ಥರು, ಬಿಆರ್‌ಎಸ್‌ ಪಕ್ಷದ ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿದೆ.

ಹೈದರಾಬಾದ್‌ನಿಂದ SUV ಕಾರಿನಲ್ಲಿ ತೆರಳುತ್ತಿದ್ದ ಲಾಸ್ಯ ನಂದಿತಾ ಅವರ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನ ಆಸ್ಪತ್ರೆ ಶಿಫ್ಟ್ ಮಾಡಿದ್ರೂ ಅಷ್ಟರಲ್ಲೇ ಅವರ ಪ್ರಾಣ ಹೋಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ದುರಂತವೇ ಒಂದು ಶಾಕಿಂಗ್ ಸುದ್ದಿಯಾದ್ರೆ, ಶಾಸಕಿ ಲಾಸ್ಯ ನಂದಿತಾ ಅವರು ಹಿಂದೆ ಕೂಡ 2 ಬಾರಿ ಅಪಘಾತದಿಂದ ಪಾರಾಗಿದ್ದರು ಅನ್ನೋ ಬೆಚ್ಚಿ ಬೀಳಿಸುವ ಅಂಶ ಬಯಲಾಗಿದೆ.

ಶಾಸಕಿ ಲಾಸ್ಯ ನಂದಿತಾ ಅವರು ಜಸ್ಟ್ 10 ದಿನಗಳ ಹಿಂದೆ ಕೂಡ ಭೀಕರ ಅಪಘಾತಕ್ಕೆ ಗುರಿಯಾಗಿದ್ದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಱಲಿಗೆ ಭಾಗಿಯಾಗಲು ನಾರ್ಕಟ್ಪಲ್ಲಿಗೆ ತೆರಳಿದ್ದ ಲಾಸ್ಯ ಅವರ ಕಾರಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಕುಡಿದು ವಾಹನ ಚಲಾಯಿಸುತ್ತಿದ್ದ ಸವಾರನೊಬ್ಬ ಶಾಸಕಿಯ ಕಾರಿಗೆ ಗುದ್ದಿದ್ದ. ಈ ಅಪಘಾತದಲ್ಲಿ ಲಾಸ್ಯ ನಂದಿತಾ ಅವರ ಹೋಮ್ ಗಾರ್ಡ್‌ ಸಾವನ್ನಪ್ಪಿದ್ದು, ಶಾಸಕಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಇಂದು ಮತ್ತೆ ಲಾಸ್ಯ ನಂದಿತಾ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಂದು ವರ್ಷದಲ್ಲೇ ತಂದೆ, ಮಗಳು ಸಾವು!
37 ವರ್ಷದ ಲಾಸ್ಯ ನಂದಿತಾ ಹುಟ್ಟಿದ್ದು ಹೈದರಾಬಾದ್‌ನಲ್ಲಿ. ಕಾರ್ಪೊರೇಟರ್ ಆಗಿದ್ದ ಲಾಸ್ಯ ಅವರು ಸಿಕಂದರಾಬಾದ್ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಬಾರಿಗೆ ಶಾಸಕಿಯಾಗಿದ್ದರು. ಶಾಸಕಿ ನಿಧನಕ್ಕೆ ಬಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ಸೇರಿದಂತೆ ಪಕ್ಷದ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. MLA ಲಾಸ್ಯ ನಂದಿತಾ ಸ್ಥಳದಲ್ಲೇ ಸಾವು

ಲಾಸ್ಯ ನಂದಿತಾ ಅವರ ತಂದೆ ಜಿ.ಸಾಯಣ್ಣ ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಅತ್ಯಾಪ್ತರಾಗಿದ್ದರು. ಲಾಸ್ಯ ತಂದೆ ಸಾಯಣ್ಣ ಅವರು 2023 ಫೆಬ್ರವರಿಯಲ್ಲೇ ಸಾವನ್ನಪ್ಪಿದ್ದರು. ತಂದೆ ಸತ್ತ ಒಂದು ವರ್ಷದಲ್ಲೇ ಲಾಸ್ಯ ನಂದಿತಾ ಅವರು ಕೂಡ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುರಂತ ನಾಯಕಿ.. 10 ದಿನದ ಹಿಂದೆ ಪಾರಾಗಿದ್ದ ಶಾಸಕಿ ಲಾಸ್ಯ ನಂದಿತಾ 2ನೇ ಅಪಘಾತದಲ್ಲಿ ಸಾವು

https://newsfirstlive.com/wp-content/uploads/2024/02/BRS-MLA-Death.jpg

Load More