newsfirstkannada.com

ಪಾದಚಾರಿಗಳ ಮೇಲೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ; ಸ್ಥಳದಲ್ಲೇ ಮೂವರು ಸಾವು

Share :

Published February 4, 2024 at 4:12pm

Update February 4, 2024 at 4:08pm

    ಕಬ್ಬು ತುಂಬಿದ ಟ್ರ್ಯಾಕ್ಟರ್​ ಟ್ರ್ಯಾಲಿ‌ಯ ಗಾಲಿ ಲೂಸ್​​ ಆಗಿ ಅಪಘಾತ

    ಶೇಡಬಾಳ ಗ್ರಾಮದಿಂದ ಕೆಲಸಕ್ಕೆ ಹೊರಟ್ಟಿದ್ದ ಮೂವರು ದುರ್ಮರಣ

    ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕಾಗವಾಡ ಶಾಸಕ ರಾಜು‌ ಕಾಗೆ

ಚಿಕ್ಕೋಡಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರ್ಯಾಲಿ‌ ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರೋ ದಾರುಣ ಘಟನೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಬಳಿ ನಡೆದಿದೆ.

ಶೇಡಬಾಳದ ನಿವಾಸಿಗಳಾದ ಚಂಪಾ ಲಕ್ಕಪ್ಪ ತಳಕ್ಕಟಿ (45), ಭಾರತಿ ವಡ್ಡಾಳೆ (30). ಮಾಲು ರಾವಸಾಬ ಐನಾಪೂರ (55) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಶೇಕವ್ವ ನರಸಪ್ಪ ಸರಸಾಯಿ (38) ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದು ಕೂಡಲೇ ಅವರನ್ನು ಮಹಾರಾಷ್ಟ್ರದ ಮಿರಜ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಭೀಕರ ಅಪಘಾತ.. ಸೈನಿಕರಾಗಬೇಕು ಅಂತ ತರಬೇತಿ ಪಡೆಯುತ್ತಿದ್ದ ಜೀವದ ಗೆಳೆಯರು ಸಾವು

ನಾಲ್ಕು ಪಾದಚಾರಿಗಳು ಶೇಡಬಾಳ ಗ್ರಾಮದಿಂದ ಕೆಲಸಕ್ಕೆ ಹೊರಟ್ಟಿದ್ದರು. ಇದೇ ವೇಳೆ ಉಗಾರ ಕಡೆಗೆ ಹೊರಟ್ಟಿದ್ದ ಟ್ರ್ಯಾಕ್ಟರ್ ಟ್ರ್ಯಾಲಿ ಏಕಾಏಕಿ ಬಿದ್ದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ‌ಟ್ರ್ಯಾಕ್ಟರ್ ಟ್ರ್ಯಾಲಿ‌ಯ ಗಾಲಿ ಬಿಚ್ಚಿದ್ದಕ್ಕೆ ಈ ದುರ್ಘಟನೆ ಸಂಭವಿಸಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕಾಗವಾಡ ಶಾಸಕ ರಾಜು‌ ಕಾಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕಾಗವಾಡ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾದಚಾರಿಗಳ ಮೇಲೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ; ಸ್ಥಳದಲ್ಲೇ ಮೂವರು ಸಾವು

https://newsfirstlive.com/wp-content/uploads/2024/02/accident-2024-02-04T153911.971.jpg

Load More