newsfirstkannada.com

ಕಿಟಕಿಯಿಂದ ಜಂಪ್ ಮಾಡಿದ ಪ್ರಯಾಣಿಕರು.. ಇಂಡಿಗೋ ವಿಮಾನದ ಬಾಂಬ್ ಬೆದರಿಕೆಗೆ ಹೊಸ ಟ್ವಿಸ್ಟ್‌; ಆಗಿದ್ದೇನು?

Share :

Published May 28, 2024 at 1:04pm

Update May 28, 2024 at 1:13pm

    ಬೆಳ್ಳಂಬೆಳಗ್ಗೆ ದೆಹಲಿಯಿಂದ ವಾರಾಣಸಿಗೆ ತೆರಳಲು ರೆಡಿಯಾಗಿದ್ದ ವಿಮಾನ

    ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಸಂದೇಶ ಕೊಟ್ಟಿದ್ಯಾರು?

    ಜೀವ ಭಯಕ್ಕೆ ಪ್ರಯಾಣಿಕರು ಕಿಟಕಿ ಮತ್ತು ತುರ್ತು ಬಾಗಿಲಿನ ಮೂಲಕ ಜಂಪ್

ನವದೆಹಲಿ: ಇಂದು ಬೆಳ್ಳಂಬೆಳಗ್ಗೆ ದೆಹಲಿಯಿಂದ ವಾರಾಣಸಿಗೆ ತೆರಳಲು ವಿಮಾನ ಹತ್ತಿದ್ದ 176 ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಸಂದೇಶ ಬಂದಿತ್ತು. ಕೂಡಲೇ ಎಚ್ಚೆತ್ತುಕೊಂಡ ಇಂಡಿಗೋ ಸಿಬ್ಬಂದಿ ವಿಮಾನ ಹಾರಾಟ ರದ್ದು ಮಾಡಿ ಎಮರ್ಜೆನ್ಸಿ ದ್ವಾರದ ಮೂಲಕ ಪ್ರಯಾಣಿಕರನ್ನು ಇಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಮನೆಯಲ್ಲಿ ಮೂವರ ನಿಗೂಢ ಸಾವು; ತಾಯಿ, ಮಗಳು, ಮೊಮ್ಮಗನ ಕೊಲೆ ಮಾಡಿದ್ಯಾರು? 

ಇಂಡಿಗೋ ವಿಮಾನ 6E2211 ವಿಮಾನದಲ್ಲಿ ಬಾಂಬ್ ಇಟ್ಟಿರುವ ಸಂದೇಶ ಬಂದಿದೆ. ಬೆಳಗ್ಗೆ 5.35ಕ್ಕೆ ಬಾಂಬ್ ಬೆದರಿಕೆ ಕೇಳಿ ಬರುತ್ತಿದ್ದಂತೆ ವಿಮಾನವನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ನಿರ್ಜನ ಪ್ರದೇಶಕ್ಕೆ ವಿಮಾನವನ್ನು ಲ್ಯಾಂಡ್ ಮಾಡಿಸಿ ವಿಮಾನದಲ್ಲಿದ್ದ ಪ್ರಯಾಣಿಕರೆನ್ನು ಕೆಳಗಿಳಿಸಲಾಯಿತು. ವಿಮಾನದಲ್ಲಿದ್ದ 176 ಪ್ರಯಾಣಿಕರು ತುರ್ತು ನಿರ್ಗಮನ ದ್ವಾರದ ಮೂಲಕ ಇಳಿಸೋ ಪ್ರಯತ್ನ ಮಾಡಲಾಗಿದೆ. ಜೀವ ಭಯಕ್ಕೆ ಪ್ರಯಾಣಿಕರು ವಿಮಾನದ ಕಿಟಕಿ ಮತ್ತು ತುರ್ತು ಬಾಗಿಲಿನ ಮೂಲಕ ಹೊರಗೆ ಜಂಪ್ ಮಾಡಿದ್ದಾರೆ.

ವಿಮಾನದಿಂದ ಪ್ರಯಾಣಿಕರು ಕೆಳಗಿಳಿದ ಕೂಡಲೇ ವಿಮಾನವನ್ನು ಬಾಂಬ್ ನಿಷ್ಕ್ರಿಯ ದಳದಿಂದ ಶೋಧ ನಡೆಸಲಾಗಿದೆ. ಆದರೆ ಯಾವುದೇ ಸ್ಫೋಟಕಗಳು ವಿಮಾನದಲ್ಲಿ ಕಂಡು ಬಂದಿಲ್ಲ. ಬೆದರಿಕೆ ಸಂದೇಶ‌ ಹೇಗೆ ಬಂತು. ಎಲ್ಲಿಂದ ಯಾರು ಕಳುಹಿಸಿದ್ದಾರೆ ಎಂದು ವಿಚಾರಣೆ ನಡೆಸಿದಾಗ ರೋಚಕ ಮಾಹಿತಿ ಹೊರ ಬಂದಿದೆ.

ಇದನ್ನೂ ಓದಿ: ಭಾರೀ ಮಳೆಗೆ ದುರಂತ.. 10 ಮಂದಿ ಒಂದೇ ಸ್ಥಳದಲ್ಲಿ ದಾರುಣ ಸಾವು, ಹಲವರು ನಾಪತ್ತೆ 

ಟಿಶ್ಯೂ ಪೇಪರ್‌ನಲ್ಲಿ ‘ಬಾಂಬ್‌@5.30’ ಬರಹ!
ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಒಂದು ಟಿಶ್ಯೂ ಪೇಪರ್‌ನಿಂದ. ಇಂಡಿಗೋ ವಿಮಾನದ ಟಾಯ್ಲೆಟ್‌ನಲ್ಲಿ ಯಾರೋ ಬಾಂಬ್ ಇದೆ ಎಂದು ಬರೆದಿದ್ದಾರೆ. [email protected] ಅಂತ ಟಿಶ್ಯೂ ಪೇಪರ್‌ನಲ್ಲಿ ಬರೆದಿದ್ದು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇತ್ತೀಚೆಗೆ ದೆಹಲಿಯ ಶಾಲೆ ಮತ್ತು ಆಸ್ಪತ್ರೆಯಲ್ಲಿ ಬಾಂಬ್ ಇಟ್ಟಿರೋ ಬೆದರಿಕೆ ಸಂದೇಶ ಬಂದಿತ್ತು. ಇದೀಗ ಈ ಹುಸಿ ಬಾಂಬ್ ಬೆದರಿಕೆ ಪ್ರಯಾಣಿಕರು ಪರದಾಡುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಟಕಿಯಿಂದ ಜಂಪ್ ಮಾಡಿದ ಪ್ರಯಾಣಿಕರು.. ಇಂಡಿಗೋ ವಿಮಾನದ ಬಾಂಬ್ ಬೆದರಿಕೆಗೆ ಹೊಸ ಟ್ವಿಸ್ಟ್‌; ಆಗಿದ್ದೇನು?

https://newsfirstlive.com/wp-content/uploads/2024/05/Indigo-Flight-Emergency-Exit.jpg

Load More