newsfirstkannada.com

ಒಂದೇ ಮನೆಯಲ್ಲಿ ಮೂವರ ನಿಗೂಢ ಸಾವು; ತಾಯಿ, ಮಗಳು, ಮೊಮ್ಮಗನ ಕೊಲೆ ಮಾಡಿದ್ಯಾರು?

Share :

Published May 28, 2024 at 12:08pm

    ಇಂದು ಬೆಳಗಿನ ಜಾವ ಮನೆಯಲ್ಲಿ ತಾಯಿ, ಮಗಳು, ಮೊಮ್ಮಗನ ಸಾವು

    ಮೊದಲನೇ ಗಂಡನಿಗೆ ವಿಚ್ಛೇದನ ನೀಡಿದ್ದ ಮೃತಪಟ್ಟ ಮಗಳು ವಸಂತಾ

    ಸ್ಥಳಕ್ಕೆ ಪೊಲೀಸ್ ವಿಶೇಷ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

ಕೊಪ್ಪಳ: ಒಂದೇ ಮನೆಯಲ್ಲಿ ತಾಯಿ, ಮಗಳು, ಮೊಮ್ಮಗ ನಿಗೂಢವಾಗಿ ಸಾವನ್ನಪ್ಪಿರೋ ಘಟನೆ ಕೊಪ್ಪಳದ ಹೊಸಲಿಂಗಾಪುರದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಈ ದಾರುಣ ಘಟನೆ ನಡೆದಿದ್ದು, ಮುನಿರಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವನ್ನಪ್ಪಿರುವ ಮೂವರು ಹೊಸಲಿಂಗಾಪುರ ಗ್ರಾಮದ ಯಾದವ್ ಕುಟುಂಬದವರಾಗಿದ್ದಾರೆ. ಮೃತರನ್ನು ರಾಜೇಶ್ವರಿ ( 50), ವಸಂತಾ (32), ಸಾಯಿಧರ್ಮ ತೇಜ (5) ಎಂದು ಗುರುತಿಸಲಾಗಿದೆ. ರಾಜೇಶ್ವರಿ ಮಗಳು ವಸಂತಾ ಹಾಗೂ ವಸಂತಾ ಮಗ ಸಾಯಿಧರ್ಮ ಸಾವನ್ನಪ್ಪಿರುವ ನತದೃಷ್ಟರು.

ಹೊಸಲಿಂಗಾಪುರ ಗ್ರಾಮಕ್ಕೆ ಕೊಪ್ಪಳ ಪೊಲೀಸ್ ವಿಶೇಷ ತಂಡದ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯ ಸಿಪಿಐ ಸುರೇಶ್ ಚವ್ಹಾಣ, ಪಿಎಸ್‌ಐ ಸುನೀಲ್ ಕುಮಾರ್ ಅವರು ಭೇಟಿ ನೀಡಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಿಕಿತ್ಸೆಗಾಗಿ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಯುವಕ.. ಈತನ ಗುಂಡಿಗೆ ನೋಡಿ ತಬ್ಬಿಬ್ಬಾದ ಸಿಬ್ಬಂದಿ 

ಸದ್ಯಕ್ಕೆ ಒಂದೇ ಕುಟುಂಬದ ಮೂರು ಜನರ ಸಾವಿಗೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ. ಆದರೆ ಮನೆಯಲ್ಲಿ ಅಮ್ಮ, ಮಗಳು, ಮೊಮ್ಮೊಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಕುಟುಂಬಸ್ಥರು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಎರಡನೇ ಮದುವೆಯಾಗಿದ್ದ ವಸಂತಾ!
ಮೃತಪಟ್ಟ ವಸಂತಾ ಮೊದಲನೇ ಗಂಡನಿಗೆ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ಮತ್ತೊಂದು ಮದುವೆಯಾಗಿದ್ದಳು. ವಸಂತಾ ತನ್ನ ಮಗನ ಜೊತೆ ಕಳೆದ 7 ತಿಂಗಳಿಂದ ಹೊಸಲಿಂಗಾಪುರದ ತಾಯಿ ಮನೆಯಲ್ಲೇ ವಾಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೂವರ ಸಾವು ಆತ್ಮಹತ್ಯೆ ಅಲ್ಲ ಇದು ಕೊಲೆಯಾಗಿರಬಹುದು ಎಂದು ರಾಜೇಶ್ವರಿಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಮನೆಯಲ್ಲಿ ಮೂವರ ನಿಗೂಢ ಸಾವು; ತಾಯಿ, ಮಗಳು, ಮೊಮ್ಮಗನ ಕೊಲೆ ಮಾಡಿದ್ಯಾರು?

https://newsfirstlive.com/wp-content/uploads/2024/05/Koppal-Death-Case-1.jpg

Load More