ಮಳೆಗೆ ನೀರು ತರಲು ಹೋದ ಮಹಿಳೆಗೆ ಮೃತ್ಯಕೂಪವಾದ ಮರ.. ಇದೆಂಥಾ ದುರಾದೃಷ್ಟ

author-image
AS Harshith
Updated On
ಮಳೆಗೆ ನೀರು ತರಲು ಹೋದ ಮಹಿಳೆಗೆ ಮೃತ್ಯಕೂಪವಾದ ಮರ.. ಇದೆಂಥಾ ದುರಾದೃಷ್ಟ
Advertisment
  • ಮಳೆ ಅವಾಂತರದಿಂದ ಸಾವನ್ನಪ್ಪಿದ 21 ವರ್ಷದ ಮಹಿಳೆ
  • ಬಿರುಗಾಳಿ ಸಹಿತ ಮಳೆ ಹಿನ್ನಲೆ ನೀರು ತರಲು ಹೋದ ಮಹಿಳೆ
  • ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಹಿಳೆ ಸಾವು

ಯಾದಗಿರಿ: ಮಳೆ ಅವಾಂತರದಿಂದ ಮಹಿಳೆ ಸಾವನ್ನಪ್ಪಿದ ಘಟನೆ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ನೀರು ತರಲು ಹೋದ ಮಹಿಳೆ ಮೇಲೆ ಮರ ಬಿದ್ದು ಸಾವನ್ನಪ್ಪಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಬಿರುಗಾಳಿ ಸಹಿತ ಮಳೆ ಹಿನ್ನಲೆ ನೀರು ತರಲು ಹೋದ ಶ್ವೇತಾ ರಾಠೋಡ ಮೇಲೆ ಮರ ಬಿದ್ದಿದೆ.

ಇದನ್ನೂ ಓದಿ: ಭೀಕರ ಪ್ರವಾಹ, ಮನೆಗಳು ಸರ್ವನಾಶ.. ಮಕ್ಕಳು ಸೇರಿ 16 ಜನರು ಸಾವು

ಗಂಭೀರ ಗಾಯಗೊಂಡ ಶ್ವೇತಾ ಅವರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಶ್ವೇತಾ ರಾಠೋಡ (21) ಸಾವನ್ನಪ್ಪಿದ್ದಾರೆ. ನಾರಾಯಣಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment