newsfirstkannada.com

ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದವರಿಗೆ ಕಾರು ಡಿಕ್ಕಿ; ಬೆಂಗಳೂರಲ್ಲಿ ಮಹಿಳೆ ದಾರುಣ ಸಾವು

Share :

Published May 28, 2024 at 1:49pm

Update May 28, 2024 at 1:50pm

  ದಿನನಿತ್ಯ ಹೂವು ಮಾರಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆ ಸಾವು

  ಕಾರು ಡಿಕ್ಕಿಯಾದ ರಭಸಕ್ಕೆ ಪಾದಾಚಾರಿ ಮಹಿಳೆ ಗಂಭೀರವಾಗಿ ಗಾಯ

  ಮಾರತ್‌ಹಳ್ಳಿ ಬೋರ್‌ವೆಲ್ ಜಂಕ್ಷನ್ ಬಳಿ ಬೆಳ್ಳಂಬೆಳಗ್ಗೆ ಕಾರು ಅಪಘಾತ

ಬೆಂಗಳೂರು: ಕಾರು ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಮಾರತ್‌ಹಳ್ಳಿ ಸಮೀಪದ ಬೋರ್‌ವೆಲ್ ಜಂಕ್ಷನ್‌ನಲ್ಲಿ ನಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾದ್ರೂ ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ ಮಹಿಳೆಯನ್ನು 47 ವರ್ಷದ ರತ್ನಮ್ಮ ಎಂದು ಗುರುತಿಸಲಾಗಿದೆ. ರತ್ನಮ್ಮ ದಿನನಿತ್ಯ ಹೂವು ಮಾರಿಕೊಂಡು ಜೀವನ ನಡೆಸ್ತಿದ್ದರು. ಬೋರ್‌ವೆಲ್ ಜಂಕ್ಷನ್ ಬಳಿ ರತ್ನಮ್ಮ ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ಬರುತ್ತಿದ್ದರು.

ಇದನ್ನೂ ಓದಿ: ಮಗಳನ್ನು ಶಾಲೆಗೆ ಬಿಡುವ ವೇಳೆ ಭೀಕರ ಅಪಘಾತ.. ಇಬ್ಬರು ಸಾವು, ಮೂವರು ಗಂಭೀರ

ಇಂದು ಬೆಳಗ್ಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರತ್ನಮ್ಮ ಅವರಿಗೆ ಮುಂಭಾಗದಿಂದ ನೆಕ್ಸಾನ್ ಕಾರು ಬಂದು ಡಿಕ್ಕಿಯಾಗಿದೆ. KA 03 NL 2547 ನೋಂದಣಿ ಸಂಖ್ಯೆಯ ಕಣಿ ಎಂಬುವವರ ಕಾರು ಅಪಘಾತಕ್ಕೆ ಕಾರಣವಾಗಿದೆ.

ಕಾರು ಚಾಲಕ ಕಿಣಿ ಅವರು HAL ಹೆಲಿಕಾಪ್ಟರ್ ಡಿವಿಷನ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಪಘಾತದ ಬಳಿಕ ಮಹಿಳೆಯನ್ನು ಅದೇ ಕಾರಿನಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಗಾಯಗೊಂಡ ರತ್ನಮ್ಮ ಅವರನ್ನು ಆಸ್ಪತ್ರೆಗೆ ರವಾನಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್‌ಎಎಲ್ ಏರ್‌ಪೋರ್ಟ್‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದವರಿಗೆ ಕಾರು ಡಿಕ್ಕಿ; ಬೆಂಗಳೂರಲ್ಲಿ ಮಹಿಳೆ ದಾರುಣ ಸಾವು

https://newsfirstlive.com/wp-content/uploads/2024/05/Bangalore-Accident-Death.jpg

Load More