newsfirstkannada.com

ಮಗಳನ್ನು ಶಾಲೆಗೆ ಬಿಡುವ ವೇಳೆ ಭೀಕರ ಅಪಘಾತ.. ಇಬ್ಬರು ಸಾವು, ಮೂವರು ಗಂಭೀರ

Share :

Published May 28, 2024 at 1:28pm

  ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು

  ಮಗಳನ್ನು ಶಾಲೆಗೆ ಬಿಡುವ ವೇಳೆ ನಡೆದ ದುರ್ಘಟನೆ

  ಮಗಳ ಮುದ್ದಿನ ಅಪ್ಪ ಕಾರು ಅಪಘಾತದಲ್ಲಿ ಸಾವು

ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಳವಿಬಾಗಿ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ವಿಶಾಲಾಕ್ಷಮ್ಮ (75), ನಾಗರಾಜ್ ಶೆಟ್ಟಿ (55) ಮೃತ ದುರ್ದೈವಿಗಳು. ಮೃತಪಟ್ಟ ಇಬ್ಬರು ತುಮಕೂರು ಮೂಲದವರು.

ಮೃತ ನಾಗರಾಜ್ ಶೆಟ್ಟಿ ಮಗಳನ್ನ ಶಾಲೆಗೆ ಬಿಟ್ಟು ಬರಲು ತುಮಕೂರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಗಳು ಬಿಂದು, ಪತ್ನಿ ಭಾಗ್ಯಲಕ್ಷ್ಮಿ, ಸಂಬಂಧಿ ಗೀತಾಗೆ ಗಂಭೀರ ಗಾಯವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಅಂಗಾಂಗ ದಾನ ಮಾಡಿದ 21 ತಿಂಗಳ ಮಗು! 2 ಜೀವ ಉಳಿಸಿತು ಈ ಪುಟ್ಟ ಕಂದಮ್ಮ

ಸ್ಥಳಕ್ಕೆ PSI ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳನ್ನು ಶಾಲೆಗೆ ಬಿಡುವ ವೇಳೆ ಭೀಕರ ಅಪಘಾತ.. ಇಬ್ಬರು ಸಾವು, ಮೂವರು ಗಂಭೀರ

https://newsfirstlive.com/wp-content/uploads/2024/05/Tumkur-Accident-3.jpg

Load More