newsfirstkannada.com

8 ಗಂಡಂದಿರಿಗೆ ಒಬ್ಬಳೇ ಮಡದಿ.. ಒಬ್ಬೊಬ್ಬರಿಗೂ ಒಂದೊಂದು ರೀತಿ ಮಕ್ಮಲ್​ ಟೋಪಿ; ಅಸಲಿ ಕಹಾನಿ ಇಲ್ಲಿದೆ ನೋಡಿ!

Share :

Published August 30, 2024 at 8:12pm

    ಒಬ್ಬಳಿಗೆ 8 ಮದುವೆಗಳನ್ನು ಮಾಡಿಸಿದ್ದು ಒಬ್ಬನೇ ಒಬ್ಬ ಗುರು

    ದಾಖಲೆ ಇಲ್ಲದೆ 15-20 ಮದುವೆ ಆಗಿದ್ದಾಳಾ ಈ ಖತರ್ನಾಕ್ ಲೇಡಿ?

    ಮದುವೆ ಆಗಿದ್ದ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದ ಮಹಿಳೆ

ಸಿಂಗಲ್ ಆಗಿರೋ ಹುಡುಗಿ- ಹುಡುಗಿಯರು ಅಯ್ಯೋ ಏಜ್ ಆಗ್ತಿದೆ ಮದುವೆ ಆಗುತ್ತಿಲ್ಲ ಅಂತ ಗೋಳಾಡ್ತಿದ್ದಾರೆ. ಅದ್ಯಾವಾಗ ನಮ್ಮನ್ನ ಮಿಂಗಲ್ ಮಾಡ್ತಿಯಪ್ಪ ದೇವರೇ ಅಂತ ತಲೆ ಮೇಲೆ ಕೈ ಹೊತ್ಕೊಂಡು ಕೂತಿದ್ದಾರೆ. ಆದ್ರೆ ಇಲ್ಲೊಬ್ಬ ಐನಾತಿ ಲೇಡಿ ಒಂದಲ್ಲ ಎರಡಲ್ಲ ಮೂರೂ ಅಲ್ಲ. 10ಕ್ಕೂ ಹೆಚ್ಚು ಮದುವೆಯಾಗಿದ್ದಾಳೆ. ಈಕೆ ಮದ್ವೆ ಕಹಾನಿ ಯಾವ ಹನಿಟ್ರ್ಯಾಪ್​​ಗೂ ಕಮ್ಮಿಯಿಲ್ಲ. ಮದುವೆಯಾದ ಪುರುಷರಾದರೇನು ಈ ಲೇಡಿ ಕೈಗೆ ಸಿಕ್ರೆ ಮಕ್ಮಲ್ ಟೋಪಿ ಪಕ್ಕಾ ಅಂತನೇ ಲೆಕ್ಕ! ಹೀಗೆ ಈ ಖತರ್ನಾಕ್ ಲೇಡಿ 10 ಜನರಿಗೆ ಪಂಗನಾಮ ಹಾಕಿದ್ದಾಳೆ. ಈಕೆ ಮದುವೆಯ ಕಹಾನಿ ಕೇಳಿದ್ರೆ ನೀವು ಕೂಡ ತಬಸುಮಾ ಇದೇನಮ್ಮಾ ಅಂತ ಬಾಯ್​ ಮೇಲೆ ಬೆರಳಿಟ್ಟುಕೊಳ್ಳುವುದು ಗ್ಯಾರಂಟಿ. ಅಷ್ಟಕ್ಕೂ ಏನಿದು ಎಂಟು ಗಂಡಂದಿರ ಮೋಸದ ಮಡದಿ ಕತೆ?

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

ಸಿಂಗಲ್ ಆಗಿರೋ ಹುಡುಗರೆಲ್ಲ ದುರ್ಬಿನ್ ಹಾಕೊಂಡು ಹುಡುಕಿದ್ರೂ ಹುಡುಗಿಯರು ಸಿಗ್ತಾನೆ ಇಲ್ಲ. ಅದ್ರಲ್ಲೂ 90s ಹುಡುಗರ ಗೋಳಂತು ಕೇಳೋರೇ ಇಲ್ಲ. ಏಜ್ ಬಾರ್ ಆಗೋಗ್ತಿದೆ ಅಂತ ಹುಡುಗರು ಮದುವೆ ಬೇಡ ಮಠ ಸೇರೋಣ ಅನ್ನೋ ಲೆಕ್ಕಚಾರದಲ್ಲಿದ್ದಾರೆ. ಆದ್ರೆ, ನಾವು ಇವತ್ತು ತೋರಿಸುವ ಐನಾತಿ ಲೇಡಿ ಒಂದು ಅಲ್ಲ, ಎರಡು ಅಲ್ಲ, ಮೂರಂತ ಅಲ್ವೇ ಅಲ್ಲ.. ಬರೋಬ್ಬರಿ 10 ಕ್ಕೂ ಹೆಚ್ಚು ಮದುವೆಯಾಗಿರುವ ಕಿ‘ಲೇಡಿ’.

ಇದು ಸಾಮಾನ್ಯದ ವಿಷ್ಯ ಅಲ್ವೆ ಅಲ್ಲ..!

10 ಮದುವೆ ಅಂದ ತಕ್ಷಣ ನೀವು ಶಾಕ್ ಆಗ್ತೀರಾ ಅಂತ ನಮಗೆ ಗೊತ್ತು.. ಆದ್ರೆ ಇದಕ್ಕಿಂತ ಶಾಕಿಂಗ್ ವಿಚಾರ ಮುಂದೆ ಇದೆ. ಆದ್ರೆ ಅದಕ್ಕೂ ಮುಂಚೆ ಹನಿಟ್ರ್ಯಾಪ್​​ನ್ನ ಮೀರಿಸೋ ಮದುವೆ ಕಹಾನಿಯ ರೂವಾರಿ ಜಾತಕವನ್ನ ಬಿಚ್ಚಿಡ್ತೀವಿ ನೋಡಿ. ಮಹಾಭಾರತದಲ್ಲಿ ದ್ರೌಪದಿ ಪಂಚ ಪಾಂಡವರನ್ನ ಕಟ್ಕೊಂಡಿದ್ದು ನಿಮಗೆ ಗೊತ್ತೆ ಇದೆ. ಆ ವಿಚಾರ ಸೈಡಗಿರಲಿ. ಆದ್ರೆ ಈ ಐನಾತಿ ಲೇಡಿ 10 ಜನರನ್ನ ಮದುವೆಯಾಗಿದ್ದಾಳೆ ಅಂದ್ರೆ ಸಾಮಾನ್ಯದ ವಿಷ್ಯ ಅಲ್ವೆ ಅಲ್ಲ. ಅಷ್ಟಕ್ಕೂ ಈಗ ದಶಲಗ್ನವಾಗಿರುವ ಮಹಿಳೆಯ ಇಂಟ್ರಡಕ್ಷನ್ ಇಲ್ಲಿದೆ.

ಮಣಿ.. ಮಣಿ ಕನ್ಯಾಮಣಿ.. ಒಬ್ಬರ ಇಬ್ಬರಲ್ಲ 10 ಜನರನ್ನ ವರಿಸಿರುವ ಈ ಜಂಗಲಕ್ಕಿಯ ಹೆಸರು ತಬಸುಮಾ ಅಂತ. ಉಡುಪಿ ನಿವಾಸಿ.. ಆದ್ರೆ ಈಕೆ ಮಾಡಿರುವ ಘನಂದಾರಿ ಕೆಲಸ ಮಾತ್ರ ಕರ್ನಾಟಕದ ತುಂಬಾ ವ್ಯಾಪಿಸಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ತಬಸುಮಾ ಗಂಡಂದಿರಿದ್ದಾರೆ. ಅಷ್ಟಕ್ಕೂ ಏನಿದು ಖತರ್ನಾಕ್ ತಬಸುಮಾ ಮದುವೆ ಕಹಾನಿ ಏನು? ಕರ್ನಾಟಕದ ತುಂಬ ತುಂಬಿರುವ ಈಕೆ ಗಂಡಂದಿರ ಲಿಸ್ಟ್​.

ಗಂಡ ನಂ- 01 ಮಹ್ಮದ ಹುಸೇನ್​, ಶಿವಮೊಗ್ಗ
ಈ ಐನಾತಿ ಲೇಡಿಯ ಮೊದಲ ಗಂಡ ಹೆಸರು ಮಹ್ಮದ ಹುಸೇನ್​. 2004ರಲ್ಲಿ ತಬಸುಮಾ ಈ ಮಹ್ಮದ್ ಹುಸೇನರ್​ನ್ನ ಮದುವೆಯಾಗಿದ್ಳು. ಶಿವಮೊಗ್ಗ ಜಿಲ್ಲೆಯ ಹೊಳೆ ಹೊನ್ನೂರ ಗ್ರಾಮದಲ್ಲಿ ಜಾಮೀಯಾ ಮಸ್ಜೀದ್ ಜಮಾತ್ ಸಮ್ಮುಖದಲ್ಲಿ ಈ ಮಹ್ಮದ್ ಹುಸೇನ್​ರನ್ನ ತಬಸುಮಾ ವರಿಸಿದ್ಳು. ಒಂದು 12 ವರ್ಷ ಈ ಮಹ್ಮದ್ ಜೊತೆ ಇದ್ಳೇನೋ. 12 ವರ್ಷದ ಬಳಿಕ ಮೊದಲ ಗಂಡನಿಂದ ದೂರಾಗಿದ್ದಳು.

ಗಂಡ ನಂ- 02 ಅನ್ವರ್, ಉಡುಪಿ
ಮೊದಲ ಮದುವೆ ಮಹ್ಮದ್ ಹುಸೇನ್​ ಜೊತೆ ನಡೆದಿದ್ರೆ.. ಈಕೆ ಮೋಸದ ಮದುವೆಗೆ ಬಲಿಯಾಗೋದು ಉಡುಪಿ ನಿವಾಸಿ ಅನ್ವರ್​. ಈ ಅನ್ವರ್​ನನ್ನ ತಬಸುಮಾ 2016ರಲ್ಲಿ ಮದುವೆಯಾಗಿದ್ಳು. ದುರಂತ ಏನಂದ್ರೆ ಎರಡನೇ ಗಂಡನ ಜೊತೆಯೂ ತಬಸುಮಾ ನೆಟ್ಟಗೆ ಸಂಸಾರ ಮಾಡಿರಲಿಲ್ಲ. 2019 ರಲ್ಲಿ ಅನ್ವರ್ ಮೇಲೂ ಕೇಸ್ ಹಾಕಿ ಅವನಿಂದ ದೂರ ಆಗಿದ್ಳು. ಆ ಕೇಸ್​ 2022 ರ ವರೆಗೆ ನಡೆದಿರುತ್ತೆ. ಹಾಗಂತ ತಬಸುಮಾ ಮದುವೆ ಕಹಾನಿ ಇಲ್ಲಿಗೆ ನಿಂತಿಲ್ಲ..

ಇದನ್ನೂ ಓದಿ: Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ? 

ಗಂಡ ನಂ- 03 ಅಪ್ಸರ್ ಪಾಷಾ, ಬೆಂಗಳೂರು
ಒಂದಾಯ್ತು.. ಎರಡಾಯ್ತು.. ಮುಂದೆ ಮೂರನೇ ಮದುವೆ ಕತೆನೂ ಇದೆ. ಮೊದಲ ಗಂಡನಿಂದ ದೂರಾಗಿ.. ಎರಡನೇ ಗಂಡನ ಮೇಲೆ ಕೇಸ್ ಹಾಕಿ.. ಬಳಿಕ ಈ ತಬಸುಮಾ ಮೂರನೇ ಮದುವೆಯಾಗಿದ್ದು ಬೆಂಗಳೂರಿನ ಅಪ್ಸರ್ ಪಾಷಾ ಅನ್ನೊರನ್ನ. ದುರಂತ ಏನಂದ್ರೆ ಎರಡನೇ ಗಂಡನ ಕೇಸ್​ ಇನ್ನೂ ಕೋರ್ಟ್​ನಲ್ಲೇ ಇರುತ್ತೆ.. ಅಷ್ಟರಲ್ಲೇ ಅಂದ್ರೆ 2020 ರಲ್ಲಿ ತಬಸುಮಾ ಈ ಅನ್ವರ್​ ಪಾಷಾ ಎಂಬಾತನನ್ನ ಬಲೆಗೆ ಹಾಕೊಂಡು ಮದುವೆಯಾಗಿ ಬಿಟ್ಟಿರ್ತಾಳೆ. ವಿಚಿತ್ರ ಮೂರನೇ ಮದುವೆಯಾದ 6 ತಿಂಗಳಿಗೆ ಈ ಅನ್ವರ್ ಪಾಷಾ ದಾವಣಗೆರೆಯ ಚನ್ನಗಿರಿ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. ಅವನ ಹೆಸರಲ್ಲಿ ಈ ಐನಾತಿ ಇನ್ಶೂರೆನ್ಸ್ ಕೂಡ ಮಾಡಿಸಿದ್ಳು ಅನ್ನೋ ಮಾಹಿತಿಯಿದೆ.

ಗಂಡ ನಂ- 04 ಮಹ್ಮದ್ ರಫಿಕ್‌, ತುಮಕೂರು
ಐನಾತಿ ತಬಸುಮಾ ಮೂರಕ್ಕೆ ಮುಕ್ತಾಯ ಮಾಡ್ತಾಳೆ ಅಂದುಕೊಂಡಿದ್ರೆ ನಿಮ್ಮ ಊಹೆ ಪಕ್ಕಾ ರಾಂಗ್.. ಯಾಕಂದ್ರೆ ಮದುವೆ ಮಸಲತ್ತಿನ ಮಡದಿ ತಬಸುಮಾ ಅಪ್ಸರ್ ಪಾಷಾ ಸಾವನ್ನಪ್ಪಿದ 6 ತಿಂಗಳಿಗೆ ಮತ್ತೆ ನಾಲ್ಕನೇ ಮದುವೆಯಾಗ್ತಾಳೆ. ತುಮಕೂರು ಮೂಲದ ಮಹ್ಮದ್ ರಫಿಕ್​ನನ್ನ ಬುಟ್ಟಿಗೆ ಹಾಕೊಂಡು ಉಡುಪಿಯ ವಕ್ಫ್ ಬೋರ್ಡ್​​ನಲ್ಲಿ ವರಿಸಿರ್ತಾಳೆ. ಹಾಗಂತ ಇವನ ಜೊತೆಯಾದ್ರೂ ಸಂಸಾರ ಮಾಡಿದ್ಲಾ.. ಇಲ್ಲವೇ ಇಲ್ಲ. ಕೊನೆಗೆ ಈ ಮಹ್ಮದ್ ರಫಿಕ್ ಮೇಲೂ ರೇಪ್ ಕೇಸ್ ಹಾಕಿ ಬ್ಲ್ಕಾಕ್ ಮೇಲ್ ಮಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ಜಗಳ ಮಾಡಿ ಸೈಲೆಂಟ್ ಆಗಿರ್ತಾಳೆ.

ಗಂಡ ನಂ- 05 ಅಮ್ಜಾದ್, ಶಿವಮೊಗ್ಗ
ತುಮಕೂರಿನ ಮಹ್ಮದ್ ಮೇಲೆ ಕೇಸ್ ಹಾಕಿ ಸೈಲೆಂಟ್ ಆಗಿದ್ದ ತಬಸುಮಾ ಅಷ್ಟಕ್ಕೆ ಸುಮ್ಮನಾಗಿರಲಿಲ್ಲ. ನಾಲ್ಕನೇ ಮದುವೆ ಬಳಿಕ ಮತ್ತೆ ಶಿವಮೊಗ್ಗ ಮೂಲದ ಅಮ್ಜಾದ್ ಎಂಬಾತನನ್ನ ಬಲೆಗೆ ಬೀಳಿಸಿಕೊಂಡು ಅವನ ಜೊತೆ ಐದನೇ ಮದುವೆಯಾಗಿರ್ತಾಳೆ. ಆದ್ರೆ ಈ ಅಮ್ಜಾದ್​ ಜೊತೆ ಕೂಡ ತಬಸುಮಾ ಜಗಳ ಮಾಡ್ಕೊಂಡು ದೂರ ಆಗ್ತಾಳೆ.

ಗಂಡ ನಂ- 06 ಜೀ ರಾಜಾಹುಸೇನ್ ಮರಳಿ, ಹೊಸಪೇಟೆ
5 ಮದುವೆಯಾದ್ಮಲೂ ಆದ್ರೂ ಈಕೆ ಮೋಸದ ಮದುವೆಯ ನಾಟಕ ಬಯಾಲಾಗಬೇಕಿತ್ತು. ಆದ್ರೂ ಈ ಐನಾತಿಯ ಪ್ಲಾನ್ ಯಾರಿಗೂ ಗೊತ್ತಾಗಿರಲಿಲ್ಲ. ಐದನೇ ಗಂಡನಿಂದ ದೂರಾಗಿದ್ದ ತಬಸುಮಾ 2022ರ ಜನವರಿಯಲ್ಲಿ 2ನೇ ಗಂಡ ಅನ್ವರ್ ಜೊತೆ‌ 6 ಲಕ್ಷ ಹಣಕ್ಕೆ ಸೆಟ್ಲಮೆಂಟ್ ಮಾಡಿಕೊಂಡಿದ್ಳು. ಈ ಸೆಟ್ಲಮೆಂಟ್ ಮುಗಿದ ಮೂರೇ ದಿನದಲ್ಲಿ ಹೊಸಪೇಟೆಯ ರಾಜಾಹುಸೇನ್ ಮರಳಿ ಎಂಬಾತನನ್ನ 6ನೇ ಮದುವೆಯಾಗ್ತಾಳೆ. ರಾಜಾಹುಸೇನ್​​ನನ್ನ ಉಡುಪಿಗೆ ಕರೆಸಿಕೊಂಡು ಉಡುಪಿಯ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ಮದುವೆ ಮಾಡಿಕೊಂಡಿರ್ತಾಳೆ. 6ನೇ ಮದುವೆ ನಡೆದ 6 ತಿಂಗಳು ಈ ಐನಾತಿ ತಬಸುಮಾ ಗಂಡನ ಜೊತೆ ಚೆನ್ನಾಗಿಯೇ ಇದ್ಳು. ಆದ್ರೆ ಅಷ್ಟೊತ್ತಿಗಾಗಲೇ ಆರನೇ ಗಂಡನಿಗೆ ಈ ತಬಸುಮಾಳ ಖತರ್ನಾಕ್​ ಹಿನ್ನೆಲೆ ಗೊತ್ತಾಗಿದೆ. ಆಗ ರಾಜಹುಸೇನ್​ ತಬಸುಮಾಳಿಂದ ದೂರಾಗಿದ್ದಾನೆ. ಆದ್ರೆ ಈ ತಬಸುಮಾ ಅವನ ಮೇಲೂ ಸುಳ್ಳು ಕೇಸ್ ದಾಖಲಿಸಿಬಿಟ್ಟಿದ್ಳು.

ಗಂಡ ನಂ- 07 ಮಹ್ಮದ್‌ ಮುಸ್ತಾಕ್, ಕೋಲಾರ
6ನೇ ಮದುವೆಯಾಗಿದ್ದ ರಾಜಾಹುಸೇನ್​​ನಿಂದ ದೂರಾಗಿದ್ರೂ ತಬಸುಮಾ ಆರನೇ ಗಂಡನಿಂದ ಡಿವೋರ್ಸ್ ಪಡೆದಿರಲಿಲ್ಲ. ಡಿವೋರ್ಸ್ ಪಡೆಯದೇ 2023ರ ಮಾರ್ಚ್​​ನಲ್ಲಿ ಕೋಲಾರದ ಮಹ್ಮದ್‌ ಮುಸ್ತಾಕ್ ಎಂಬಾತನನ್ನ 7ನೇ ಮದುವೆಯಾಗಿದ್ದಾಳೆ. ಆದ್ರೆ 7ನೇ ಗಂಡನೊಂದಿಗೂ ಕಿರಿಕ್ ಮಾಡ್ಕೊಂಡು ಬಳಿಕ ಅವನಿಂದಲೂ ದೂರವಾಗಿದ್ದಾಳೆ.

ಗಂಡ ನಂ- 08 ಗಫೂರ್ ಕೆ.ಪಾಟೀಲ, ಹಾವೇರಿ
ಒಂದಲ್ಲ, ಎರಡಲ್ಲ ಬರೋಬ್ಬರಿ 7 ಮದುವೆಯಾದ್ಮೇಲೆ ಈ ಐನಾತಿ ತಬಸುಮಾ ಎಂಟನೇ ಮದುವೆಯಾಗಿದ್ದಾಳೆ. ಏಳನೇ ಮದುವೆ ನಡೆದ ಆರು ತಿಂಗಳಲ್ಲೇ ಹಾವೇರಿ ಮೂಲದ ಗಫೂರ್ ಕೆ ಪಾಟೀಲನೊಂದಿಗೆ ತಬಸುಮಾ ಎಂಟನೇ ಮದುವೆ ನಡೆದಿದೆ. ತಬಸುಮಾಳ ಮದುವೆ ಕಹಾನಿಯನ್ನ.. ಅಚ್ಚರಿ ಏನಂದ್ರೆ ತಬಸುಮಾಳ ಈ 8 ಮದುವೆಯನ್ನ ಒಬ್ಬನೇ ಮದುವೆ ಗುರು ಮಾಡಿಸಿದ್ದಾನೆ. ಫಜಲ್ ರೆಹಮಾನ್ ಮೌಲಾನಾ ಎಂಬಾತನೇ ತಬಸುಮಾಳ ಎಂಟು ಮದುವೆಗೆ ಸಾಕ್ಷಿಯಾಗಿದ್ದಾನೆ. ಇನ್ನೂ ಒಂದು ಭಯಾನಕ ವಿಚಾರ ಏನ್​ ಗೊತ್ತಾ.. ಇದಿಷ್ಟು ದಾಖಲೆ ಇರುವ ಮದುವೆಗಳಾಗಿದ್ರೆ, ದಾಖಲೆ ಇಲ್ಲದೇ ಈ ತಬಸುಮಾ ಏನಿಲ್ಲ ಅಂದ್ರೂ 15-20 ಮದುವೆಯಾಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ‘ದರ್ಶನ್ ಬಿಡುಗಡೆ ಆಗಲಿ’-ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ಜಮಾಯಿಸಿದ ಅಭಿಮಾನಿಗಳ ಉದ್ಧಟತನ; ಆಗಿದ್ದೇನು? 

ಆದ್ರೀಗ ಈ ತಬಸುಮಾಳ ಮುಖವಾಡ ಕಳಚಿಬಿದ್ದಿದ್ದು, ಮದುವೆ ಅನ್ನೋದನ್ನ ಬ್ಯುಸಿನೆಸ್ ಮಾಡ್ಕೊಂಡಿದ್ಳು ಅನ್ನೋ ಸ್ಫೋಟಕ ವಿಚಾರ ಬಟಾಬಯಲಾಗಿದೆ. ಮದುವೆಯಾಗಿದ್ದ ಪುರುಷರನ್ನೇ ಟಾರ್ಗೆಟ್ ಮಾಡಿ ಅವರಿಗೆ ಮಕ್ಮಲ್ ಟೋಪಿ ಹಾಕೋದೇ ಇವಳ ಕೆಲಸ ಆಗಿತ್ತು ಅಂತ ಹೊಸಪೇಟೆ ಈಕೆ ಮಾಜಿ ಪತಿ ದಾಖಲೆ ಸಮೇತ ರಿವೀಲ್ ಮಾಡಿದ್ದಾನೆ.

ಖತರ್ನಾಕ್ ಲೇಡಿ ಸುಳ್ಳು ಕತೆ ಕಟ್ಟಿ 8 ಜನರನ್ನ ವರಿಸಿದ್ಳು. ಆದ್ರೆ ಈಕೆ ಮದುವೆಯಾದ ಬಳಿಕ ಮಾಡ್ತಿದ್ದ ಕೃತ್ಯದ ಬಗ್ಗೆ ಗೊತ್ತಾದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಮದುವೆ ಅನ್ನೋದನ್ನ ಬ್ಯುಸಿನೆಸ್ ಮಾಡ್ಕೊಂಡಿದ್ದ ತಬಸುಮಾ ಮದುವೆ ಹಿಂದಿನ ಒಂದೊಂದು ಕಹಾನಿ ತುಂಬಾನೆ ಇಂಟ್ರೆ​ಸ್ಟಿಂಗ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ಗಂಡಂದಿರಿಗೆ ಒಬ್ಬಳೇ ಮಡದಿ.. ಒಬ್ಬೊಬ್ಬರಿಗೂ ಒಂದೊಂದು ರೀತಿ ಮಕ್ಮಲ್​ ಟೋಪಿ; ಅಸಲಿ ಕಹಾನಿ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/08/8-Husband-Wife-1.jpg

Load More