ಅವನಿ ಲೇಖರ ಸ್ಪೋರ್ಟ್ಸ್ ಆಡಲು ಹೋದರೆ ಮೆಡಲ್ ಪಕ್ಕಾ!
ಭಾರತ ಸರ್ಕಾರದಿಂದ ಯಾವ್ಯಾವ ಗೌರವ ಪಡೆದುಕೊಂಡಿದ್ದಾರೆ?
ಈಗಾಗಲೇ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಅವನಿ ಲೇಖರ
ಅವನಿ ಲೇಖರ ಇಡೀ ದೇಶವೇ ಮೆಚ್ಚುವಂತ ಪ್ರತಿಭೆ. ತನ್ನ ಮೃದು ಸ್ವಭಾವದ ಆಟದಿಂದಲೇ ಯಾವಾಗಲೂ ಜನ ಮನ ಗೆಲ್ಲುವ ಸ್ಪರ್ಧಿ. ಸದ್ಯ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ನ 10 ಮೀಟರ್ ವಿಭಾಗದ ಏರ್ ರೈಫಲ್ ಶೂಟಿಂಗ್ನಲ್ಲಿ ಅವನಿ ಲೇಖರ ಗೋಲ್ಡ್ ಮೆಡಲ್ಗೆ ಮುತ್ತಿಕ್ಕಿದ್ದಾರೆ. ಟೋಕಿಯೋ ಬಳಿಕ 2ನೇ ಬಾರಿಗೆ ಪ್ಯಾರಿಸ್ನಲ್ಲಿ ದೇಶದ ಕೀರ್ತಿ ಉತ್ತುಂಗಕ್ಕೆ ಕೊಂಡೊಯ್ಯದಿದ್ದಾರೆ. ಯಾರು ಈ ಅವನಿ ಲೇಖರ.
ಅವನಿ ಲೇಖರ ರಾಜಸ್ಥಾನದ ಜೈಪುರ ಮೂಲದವರು. 2001 ನವೆಂಬರ್ 8 ರಂದು ಜನಿಸಿದರು. ಇವರು ಹುಟ್ಟುತ್ತಲೆ ಚೆನ್ನಾಗಿ ಇದ್ದರು. ನಡೆದಾಡುತ್ತಿದ್ದರು, ಓಡಾಡುತ್ತಿದ್ದರು. ಸಾಮಾನ್ಯರಂತೆ ಇದ್ದರು. ಆದರೆ ವಿಧಿಯಾಟ 2012ರ ರಸ್ತೆ ಅಪಘಾತ ಒಂದರಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡರು. ಮಗಳಿಗೆ 2 ಕಾಲುಗಳು ಇಲ್ಲ ಎನ್ನುವುದು ತಂದೆಗೆ ಊಹಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಮಗಳಿಗಾಗಿ ತಂದೆ ಕಠಿಣ ಶ್ರಮ ವಹಿಸಿ ಅವರನ್ನು ಅರ್ಚರಿ, ಏರ್ ರೈಫಲ್ ಶೂಟಿಂಗ್ ಸ್ಫರ್ಧಿಯಾಗಿ ಮಾಡಿದರು.
ಇದನ್ನೂ ಓದಿ: ಒಲಿಂಪಿಕ್ಸ್ನ ಯುವ ಪ್ಲೇಯರ್ಗೆ ಕೋಟಿ ರೂಪಾಯಿ ಅನೌನ್ಸ್.. ವಿಡಿಯೋ ಕಾಲ್ ಮಾಡಿ ಮಾತಾಡಿದ CM
ಕಾಲುಗಳು ಇಲ್ಲ ಎನ್ನುವುದನ್ನೇ ತಂದೆ, ಪುತ್ರಿಗೆ ಮರೆಯಿಸಿ ಬಿಟ್ಟರು. ತನ್ನ ಸಾಧನೆ ಏನಿದ್ದರು ದೇಶಕ್ಕಾಗಿ, ದೇಶ ಸೇವೆಗೆ ಸಲ್ಲಿಸುವುದು ಎಂದು ಮಗಳ ಮನಸಲ್ಲಿ ದೃಢವಾಗಿ ಬೇರೂರುವಂತೆ ಮಾಡಿದರು. ಪಿಸಿಕಲಿ, ಮಾನಸಿಕವಾಗಿ ಸ್ಫೋರ್ಟ್ಸ್ ಕಡೆ ಹೆಚ್ಚು ಗಮನ ಹರಿಸುವಂತೆ ಧೈರ್ಯ ಹೇಳಿದರು. ಹೀಗಾಗಿಯೇ ಅವನಿ ಲೇಖರ ಯಾವುದೇ ದೇಶಕ್ಕೆ ಕ್ರೀಡೆಗೆ ಎಂದು ಹೋಗಲಿ ಪದಕವಂತೂ ಗೆದ್ದುಕೊಂಡು ಬಂದೇ ಬರುತ್ತಾರೆ.
ಶೂಟರ್ ಅಭಿನವ್ ಬಿಂದ್ರಾ ಪ್ರೇರಣೆ
ಶೂಟರ್ ಅಭಿನವ್ ಬಿಂದ್ರಾ ಅವರ ಸಾಧನೆಗಳಿಂದ ಪ್ರೇರಿತರಾದ ಅವನಿ ಲೇಖರ ಬಿಲ್ಲುಗಾರಿಕೆ (Archery) ಜೊತೆಗೆ 2015ರಿಂದ ಶೂಟಿಂಗ್ ಕಡೆ ಇನ್ನಷ್ಟು ಮನಸು ಮಾಡಿದರು. ಹೀಗಾಗಿ ತನ್ನ ನಿರಂತರ ಪ್ರಯತ್ನದಿಂದ ಬಹುಬೇಗನೆ ಶೂಟಿಂಗ್ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಸಾಧಿಸಿದರು. ಶೂಟಿಂಗ್ ಜೊತೆ ಜೊತೆಗೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ರಾಜಸ್ಥಾನದ ವಿಶ್ವವಿದ್ಯಾಲಯದಲ್ಲಿ 5 ವರ್ಷದ ಕಾನೂನು ಪದವಿ ಪಡೆದುಕೊಂಡಿದ್ದಾರೆ.
2020ರ ಟೋಕಿಯೋ ಪ್ಯಾರ ಒಲಿಂಪಿಕ್ಸ್ನಲ್ಲಿ ಅವನಿ ಲೇಖರ ಮಹತ್ವದ ಸಾಧನೆ ಮಾಡಿದರು. ಭಾರತದ ಮೊಟ್ಟ ಮೊದಲ ಮಹಿಳಾ ಶೂಟರ್ ಅವನಿ ಲೇಖರ, ಪ್ಯಾರ ಒಲಿಂಪಿಕ್ಸ್ನಲ್ಲಿ ಬಂಗಾರ ಹಾಗೂ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದರು. ಈ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ ಅವನಿ ಲೇಖರ ಅವರಿಗೆ ಪದ್ಮಶ್ರೀ ಹಾಗೂ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಅವನಿ ಲೇಖರ ಗೆದ್ದಂತ ಪ್ರಮುಖ ಪ್ರಶಸ್ತಿಗಳು
ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್?
AVANI LEKHARA WON THE GOLD 🇮🇳🥹#Paralympics2024 #Paris2024pic.twitter.com/USXySp7kDt
— The Khel India (@TheKhelIndia) August 30, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ