ಇಷ್ಟು ದಿನ ಕಾಡದ ಮಂಕಿಪಾಕ್ಸ್ ಹೆಮ್ಮಾರಿ ಈಗ ಭಾರತಕ್ಕೆ ಕಾಲಿಟ್ಟಿತಾ?
ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿವೆ ರೋಗದ ಲಕ್ಷಣಗಳು
ಆತಂಕ ಬೇಡ ಎಂದಿದ್ದೇಕೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ
ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಚಿಕನ್ ಗುನ್ಯಾ, ಡೆಂಗ್ಯೂ ಜ್ವರ ಭಯದ ವಾತಾವರಣ ಸೃಷ್ಟಿಸಿದೆ. ಕರ್ನಾಟಕದಲ್ಲಿಯೇ ಸುಮಾರು 25 ಸಾವಿರ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಒಟ್ಟಾರೆ ದೇಶದಲ್ಲಿ ಈ ವರ್ಷ 32 ಸಾವಿರ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇಂತಹ ಸಮಯದಲ್ಲಿ ಈಗ ದೇಶದಲ್ಲಿ ಮಂಕಿಪಾಕ್ಸ್ ಎಂಬ ಗುಮ್ಮ ಕೂಡ ಭೀತಿಯನ್ನು ಸೃಷ್ಟಿಸಿದೆ. ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಶಂಕಿತ ಮಂಕಿಫಾಕ್ಸ್ ಲಕ್ಷಣಗಳು ಕಂಡು ಬಂದಿದ್ದು ಹೊಸ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಟೀಚರ್ ಬೈದಿದ್ದಕ್ಕೆ ಶಾಲೆ ಬಿಟ್ಟು 40 ಕಿ.ಮೀ ಓಡಿ ಹೋದ ವಿದ್ಯಾರ್ಥಿಗಳು; ಆಮೇಲೇನಾಯ್ತು? ವಿಡಿಯೋ ನೋಡಿ!
ಸದ್ಯ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಮಂಕಿಪಾಕ್ಸ್ ಎಂಬ ಪೆಡಂಭೂತ ಭೀಕರವಾಗಿ ಕಾಡುತ್ತಿದೆ. ನೆರೆ ರಾಷ್ಟ್ರವಾದ ಪಾಕಿಸ್ತಾನದಲ್ಲಿಯೂ ಕೂಡ ಮಂಕಿಪಾಕ್ಸ್ ಕೇಸ್ಗಳು ಪತ್ತೆಯಾಗಿದ್ದು. ಭಾರತ ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿಯನ್ನು ಸೃಷ್ಟಿಸಿತ್ತು. ಇಂಗ್ಲೆಂಡ್, ಆಫ್ರಿಕಾ ಸೇರಿದಂತೆ ಒಟ್ಟು 121 ದೇಶಗಳಲ್ಲಿ 119 ಮಂಕಿಪಾಕ್ಸ್ ಕೇಸ್ಗಳು ಪತ್ತೆಯಾಗಿದ್ದರೂ ಕೂಡ ಭಾರತದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಪ್ರಕರಣ ದಾಖಲಾಗಿರಲಿಲ್ಲ. ಆದ್ರೆ ಈಗ ಹೆಮ್ಮಾರಿ ಭಾರತಕ್ಕೂ ಕಾಲಿಟ್ಟಿತಾ ಅನ್ನೋ ಭೀತಿ ಶುರುವಾಗಿದೆ. ವಿದೇಶದಿಂದ ಬಂದ ಯುವಕನೊಬ್ಬನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿದ್ದು, ಈಗಾಗಲೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಐಸೋಲೆಟ್ನಲ್ಲಿ ಇಡಲಾಗಿದೆ.
ಇದನ್ನೂ ಓದಿ: 1000 ಪ್ರಯಾಣಿಕರಿದ್ದ ಮಗಧ್ ಎಕ್ಸ್ಪ್ರೆಸ್ ರೈಲು ಅಪಘಾತ.. ಬೇರ್ಪಟ್ಟ ಬೋಗಿಗಳು
ವ್ಯಕ್ತಿಯ ರಕ್ತದ ಸ್ಯಾಂಪಲ್ಗಳನ್ನು ತೆಗೆದುಕೊಂಡಿದ್ದು, ಅವನಲ್ಲಿ ಮಂಕಿಪಾಕ್ಸ್ ಇದೆಯೋ ಇಲ್ಲವೋ ಅನ್ನೊದನ್ನ ಪತ್ತೆ ಮಾಡಲು ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಯುವಕನ ಆರೋಗ್ಯ ಸದೃಢವಾಗಿದ್ದು. ಈ ಒಂದು ಪ್ರಕರಣವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ NCDC ಗಮನಿಸುತ್ತಿದ್ದು, ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದೆ. ಈಗಾಗಲೇ ಯುವಕನನ್ನು ಐಸೊಲೇಟ್ ಮಾಡಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು NCDC ಹೇಳಿದೆ.
ಏನಿದು ಮಂಕಿ ಫಾಕ್ಸ್?
ಮಂಕಿ ಫಾಕ್ಸ್ ಅಂದ್ರೆ ಅದು ಕೂಡ ಒಂದು ವೈರಲ್ ಇನ್ಫೆಕ್ಷನ್. ಇದು ಸಾಮಾನ್ಯವಾಗಿ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಾಣ ಸಿಗುತ್ತದೆ. ಇದು ಸ್ಮಾಲ್ ಫಾಕ್ಸ್ನ ಮತ್ತೊಂದು ತಳಿ ಇದ್ದಂತೆ. ಈಗಾಗಲೇ ಸ್ಮಾಲ್ ಫಾಕ್ಸ್ನ್ನು ನಿರ್ಮೂಲನೆ ಮಾಡಲಾಗಿದೆ. ಅದರ ತಳಿಯಾಗಿರುವ ಈ ಮಂಕಿ ಫಾಕ್ಸ್ ಈಗ ಆತಂಕ ಸೃಷ್ಟಿಸಿದೆ. ಮಂಕಿ ಫಾಕ್ಸ್ ಅನ್ನೋದು ಚರ್ಮಕ್ಕೆ ಸಂಬಂಧಿಸಿದ ಸೋಂಕು. ಚರ್ಮದ ಮೇಲೆ ಗುಳ್ಳೆಗಳು ಏಳಲು ಶುರುವಾಗುತ್ತವೆ. ನಂತರ ಇಡೀ ಮೈಗೆ ವ್ಯಾಪಿಸಿಕೊಂಡು ಮೊಡವೆಗಳಲ್ಲಿ ಕೀವು ತುಂಬಿ ಇಲ್ಲದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದು ಮೊದಲ ಬಾರಿ 1958ರಲ್ಲಿ ಕಂಡು ಹಿಡಿಯಲಾಗಿತ್ತು. ಕೋತಿಗಳ ಮೇಲೆ ನಡೆದ ಅನೇಕ ಸಂಶೋಧನೆಗಳು ಇಂಥಹದೊಂದು ರೋಗ ಇದೆ ಅನ್ನೋದನ್ನು ತಿಳಿಸಿತ್ತು. 1970ರಲ್ಲಿ ಕಾಂಗೋದಲ್ಲಿ 9 ತಿಂಗಳ ಮಗುವಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಿತ್ತು.
ಪ್ರಾಣಿಗಳ ಕಡಿತದಿಂದ, ಅವುಗಳ ಉಗುರಿನಿಂದ ಪರಚುವುದರಿಂದ, ಇಲ್ಲವೇ ಸೋಂಕು ಕಾಣಿಸಿಕೊಂಡವರೊಂದಿಗಿನ ಸಂಪರ್ಕದಿಂದ ಈ ಸೋಂಕು ತಗಲುತ್ತದೆ. ಸ್ನಾಯುಗಳಲ್ಲಿ ವಿಪರೀತ ನೋವು. ಮುಖ, ಕೈ, ಕಾಲುಗಳಲ್ಲಿ ಸೇರಿ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳು ಏಳುತ್ತವೆ. ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಮನೆಯಲ್ಲಿ ಕುಟುಂಬದವರೊಂದಿಗೆ ಸಂಪರ್ಕದಿಂದ ದೂರವಿರಿ.
ಮಂಕಿಪಾಕ್ಸ್ ರೋಗ ಲಕ್ಷಣಗಳು ಹೇಗಿರುತ್ತೆ?
ದೇಹದ ಮೇಲೆ ಗುಳ್ಳೆ ತರದ ಱಶ್ ಕಾಣಿಸಿಕೊಳ್ಳುತ್ತೆ
ಶೀತ, ಜ್ವರ, ತಲೆ, ಬೆನ್ನು ಮತ್ತು ಸ್ನಾಯು ನೋವು
2 ರಿಂದ 4 ವಾರಗಳ ಕಾಲ ಬಾಧಿಸುವ ಸೋಂಕು
ದೌರ್ಬಲ್ಯ, ಊತ, ಚರ್ಮದ ಮೇಲೆ ಗುಳ್ಳೆ ಬಳಲಿಕೆ
ದೇಹದ ಮೇಲೆ ವ್ಯಾಪಕವಾದ ದದ್ದು/ಗುಳ್ಳೆ ಕಾಣಿಸುತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ