newsfirstkannada.com

×

30 ಪೀಸ್‌ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ.. ಬೆಂಗಳೂರಲ್ಲಿ ದೆಹಲಿ ಮಾದರಿಯ ಭಯಾನಕ ಹ*ತ್ಯೆ!

Share :

Published September 21, 2024 at 5:04pm

    ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯ ಬರ್ಬರ ಕೊ*ಲೆ

    ಬೆಂಗಳೂರಲ್ಲಿ ದೆಹಲಿ ಶ್ರದ್ಧಾ ಕೇಸ್‌ ಮಾದರಿಯ ಭಯಾನಕ ಘಟನೆ

    ಮನೆ ಬೀಗ ಹೊಡೆದು ಒಳಗೆ ಹೋದಾಗ ಶವದಲ್ಲಿದ್ದ ಹುಳುಗಳು ಪತ್ತೆ!

ಬೆಂಗಳೂರು: ಪೀಸ್‌, ಪೀಸ್ ಮಾಡಿ ಯುವತಿ ಮೃತದೇಹವನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ದೆಹಲಿ ಶ್ರದ್ಧಾ ಕೇಸ್‌ ಮಾದರಿಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ವೈಯಾಲಿಕಾವಲ್ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಏನೀವಾಗ.. ಬೆಂಗಳೂರು ಬಿಟ್ಟು ಹೋಗಲ್ಲ; ಉತ್ತರ ಭಾರತದ ಯುವತಿ ಮತ್ತೆ ಸವಾಲು! VIDEO 

ವೈಯಾಲಿಕಾವಲ್‌ನ ಮುನೇಶ್ವರ್‌ ಬ್ಲಾಕ್‌ನಲ್ಲಿರುವ ಮನೆಯಲ್ಲಿ ಯುವತಿಯ ಬರ್ಬರ ಹತ್ಯೆಯಾಗಿದೆ. ಅದು ದೆಹಲಿ ಶ್ರದ್ಧಾ ಹತ್ಯೆಯ ಮಾದರಿಯಲ್ಲಿದೆ ಅನ್ನೋದು ಮತ್ತಷ್ಟು ಭಯಾನಕವಾಗಿದೆ. ಹಂತಕರು ಯುವತಿಯ ಕೊ*ಲೆ ಮಾಡಿ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಪ್ರಿಜ್‌ನಲ್ಲಿ ಇಟ್ಟಿರೋದು ಪತ್ತೆಯಾಗಿದೆ.

ಸದ್ಯದ ಮಾಹಿತಿಗಳ ಪ್ರಕಾರ ಯುವತಿಯ ಪ್ರಾಣ ತೆಗೆದು ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ. ಸುಮಾರು 30-35 ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಡಲಾಗಿದೆ. ಮೃತ ಮಹಿಳೆಯನ್ನು ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡ್ತಿದ್ದ ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ‘ಬೆಂಗಳೂರು ನಡಿಯುತ್ತಿರೋದೇ ನಮ್ಮಿಂದ..’ ಕನ್ನಡಿಗರ ಕೆಣಕಿದ ಹೊರ ರಾಜ್ಯದ ಯುವತಿ, ಭುಗಿಲೆದ್ದ ಆಕ್ರೋಶ

ಕಳೆದ 15 ದಿನದ ಹಿಂದೆಯೇ ಈ ಹತ್ಯೆ ಆಗಿರಬಹುದು ಎನ್ನುವ ಅನುಮಾನವಿದೆ. ಮೃತ ಮಹಾಲಕ್ಷ್ಮೀ ಅವರ ತಾಯಿ ಮತ್ತು ಅಕ್ಕ ಇವತ್ತು ಮನೆಗೆ ಬಂದಿದ್ದಾರೆ. ಮನೆ ಬೀಗ ಹೊಡೆದು ಒಳಗೆ ಹೋದಾಗ ಮಹಾಲಕ್ಷ್ಮಿ ಕೊಲೆಯಾಗಿರೋದು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಈ ಮನೆಯಿಂದ ವಾಸನೆ ಬರುತ್ತಾ ಇತ್ತಂತೆ. ಅದೇ ಬಿಲ್ಡಿಂಗ್‌ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರೆ. ಮನೆ ಬೀಗ ತೆಗೆದ ಸಂದರ್ಭದಲ್ಲಿ ಶವದಿಂದ ಹುಳಗಳ ಹೊರಗೆ ಬರ್ತಾ ಇದೆ. ಈ ಭಯಾನಕ ದೃಶ್ಯ ನೋಡಿದ ಸಂಬಂಧಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

30 ಪೀಸ್‌ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ.. ಬೆಂಗಳೂರಲ್ಲಿ ದೆಹಲಿ ಮಾದರಿಯ ಭಯಾನಕ ಹ*ತ್ಯೆ!

https://newsfirstlive.com/wp-content/uploads/2024/09/Bangalore-lady-Death-3.jpg

Load More