newsfirstkannada.com

ಟ್ರಾಫಿಕ್ ಮಧ್ಯೆಯೇ IAS ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಡೆಲಿವರಿ ಬಾಯ್; ವಿಡಿಯೋ

Share :

Published March 31, 2024 at 9:06pm

Update March 31, 2024 at 9:12pm

    ಶ್ರದ್ಧೆಯಿಂದ UPSC ಪರೀಕ್ಷೆಗೆ ತಯಾರಿ ನಡೆಸಿರೋ ಡೆಲಿವರಿ ಬಾಯ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಈ ವಿಡಿಯೋ

    ಎಲ್ಲರ ಮೆಚ್ಚುಗೆ ಪಾತ್ರರಾದ ಝೊಮಾಟೊ ಡೆಲಿವರಿ ಬಾಯ್

ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೆ ಯಾವಾಗ ಯಾರ ವಿಡಿಯೋ ವೈರಲ್​ ಆಗುತ್ತದೆ ಎಂದು ಹೇಳಲು ಅಸಾಧ್ಯ. ಅದೇ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ವಿಡಿಯೋ ಕಂಡು ನೆಟ್ಟಿಗರ ಮನಸ್ಸು ಕರಗಿ ಹೋಗಿದೆ.

ಇದನ್ನೂ ಓದಿ: Health Tips: ಎಷ್ಟೇ ತಿಂದರೂ ತೂಕ ಹೆಚ್ಚಾಗದಂತ ಆಹಾರವಿದು! ಆರೋಗ್ಯ ಕಾಳಜಿ ಇದ್ದವರಿಗೆ ಇದೇ ಬೆಸ್ಟ್ ಫುಡ್​​

ಹೌದು, ಟ್ರಾಫಿಕ್​​​​ ಸಿಗ್ನಲ್​​​ನಲ್ಲಿ ಝೊಮಾಟೊ ಡೆಲಿವರಿ ಬಾಯ್ UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​​ ಆಗಿದೆ. ಕೆಲವೊಂದು ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನದ ನಡುವೆಯೂ ತನ್ನ ಗುರಿಯನ್ನು ಸಾಧಿಸಲು ಯುವಕನೊಬ್ಬ ಕಷ್ಟಪಟ್ಟು ಶ್ರದ್ಧೆಯಿಂದ UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ಕಂಡು ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸಹಾಯ ಮಾಡುವ ಆಯುಷ್ ಸಂಘಿ ತಮ್ಮ X ಖಾತೆಯಲ್ಲಿ ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಬಳಿಕ ನಿಮಗೆ ಕಷ್ಟಪಟ್ಟು ಅಧ್ಯಯನ ಮಾಡಲು ಬೇರೆ ಯಾವುದೇ ಪ್ರೇರಣೆ ಬೇಕಿಲ್ಲ ಅಂತಾ ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಡತನ ಅನ್ನೋದೇ ಹಾಗೆ ವ್ಯಕ್ತಿಯನ್ನು ಸಮಯಕ್ಕೆ ಮುಂಚಿತವಾಗಿ ಜವಾಬ್ದಾರನನ್ನಾಗಿ ಮಾಡುತ್ತದೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಾಫಿಕ್ ಮಧ್ಯೆಯೇ IAS ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಡೆಲಿವರಿ ಬಾಯ್; ವಿಡಿಯೋ

https://newsfirstlive.com/wp-content/uploads/2024/03/delivery-boy.jpg

Load More