ಪವಿತ್ರಾ ಗೌಡ ಮಹಿಳೆ ಅಂತ ಪೊಲೀಸ್ರು ಸೌಜನ್ಯದಲ್ಲಿ ವರ್ತಿಸಿಲ್ಲ; ಕೋರ್ಟ್‌ಗೆ ವಕೀಲರು ಹೇಳಿದ್ದೇನು?

author-image
Veena Gangani
Updated On
ದರ್ಶನ್‌ಗೂ ಮೊದಲೇ ಪವಿತ್ರಾ ಪರಪ್ಪನ ಅಗ್ರಹಾರ ಜೈಲಿಗೆ; ನ್ಯಾಯಾಂಗ ಬಂಧನಕ್ಕೆ 9 ಕಾರಣ!
Advertisment
  • ನ್ಯಾಯಾಧೀಶರು ಪ್ರಶ್ನೆ ಕೇಳಿದ ಕೂಡಲೇ ಕಣ್ಣೀರಿಟ್ಟ A1 ಆರೋಪಿ
  • ಪವಿತ್ರಾಗೆ ಪೊಲೀಸ್‌ ಕಸ್ಟಡಿಯಲ್ಲಿ ತೊಂದರೆ ಆಯ್ತಾ ಎಂದ ಜಡ್ಜ್‌
  • ಪವಿತ್ರಾ ಗೌಡರ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದ ವಕೀಲರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ A1, ದರ್ಶನ್ A2 ಆರೋಪಿಗಳಾಗಿದ್ದಾರೆ. ಇನ್ನುಳಿದ 20ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರ ವಿಚಾರಣೆ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

publive-image

ಇದನ್ನೂ ಓದಿ:ನಟ ದರ್ಶನ್ ಅಂಡ್ ಗ್ಯಾಂಗ್ ಕೋರ್ಟ್‌ಗೆ ಹಾಜರು.. ಜಡ್ಜ್ ಕೇಳಿದ ಪ್ರಶ್ನೆಗೆ ಪವಿತ್ರಾ ಗೌಡ ಕಣ್ಣೀರು

ಸದ್ಯ ಒಬ್ಬರಾದ ಮೇಲೆ ಒಬ್ಬ ಆರೋಪಿಗಳನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಕರೆ ತಂದು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಕೊಲೆ ಕೇಸ್​ನಲ್ಲಿ A1 ಆರೋಪಿಯಾಗಿರೋ ಪವಿತ್ರಾ ಗೌಡ ವಕೀಲರಿಂದ ಆರೋಪವೊಂದು ಕೇಳಿ ಬಂದಿದೆ.

publive-image

ಸರ್ಕಾರದ ಪರ SPP ಪ್ರಸನ್ನ ಕುಮಾರ್ ಹಾಜರಾಗಿದ್ದು, A1 ಆರೋಪಿಯಾಗಿರೋ ಪವಿತ್ರ ಗೌಡ ಅವರಿಗೆ ಜಡ್ಜ್ ಪ್ರಶ್ನೆ ಮಾಡಿದ್ದಾರೆ. ಕಸ್ಟಡಿಯಲ್ಲಿ ನಿಮಗೆ ತೊಂದರೆ ಏನಾದರೂ ಆಯ್ತಾ ಎಂದು ಕೇಳಿದ್ದಾರೆ. ಆಗ ಪವಿತ್ರಾ ಪರ ವಕೀಲರು A1 ಮಹಿಳಾ ಆರೋಪಿಗೆ ತುಂಬಾ ನೋವು ನೀಡಲಾಗಿದೆ. ಪೊಲೀಸರು ಮಹಿಳೆ ಅಂತಾ ಕೂಡ ನೋಡದೇ ಸೌಜನ್ಯ ರೀತಿ ವರ್ತಿಸಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ನಡುವೆ ಆರೋಪಿಗಳು ಪೊಲೀಸರ ಮುಂದೆ ಕೊಟ್ಟ ಹೇಳಿಕೆ ಹೊರ ಸೊರಿಕೆ ಆಗಿದೆ. ಅವರ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗ್ತಿದೆ ಅಂತ ಜಡ್ಜ್ ಮುಂದೆ ಪವಿತ್ರಾ ಗೌಡ ಪರ ವಕೀಲರು ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment