14ನೇ ಬಾರಿಗೆ ಬಜೆಟ್ ಮಂಡಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ಬಿಜೆಪಿ ನಾಯಕ ಅಚ್ಚರಿಯ ಹೇಳಿಕೆ
ನಿನ್ನೆಯೇ ಸಿದ್ದರಾಮಯ್ಯ ಬಜೆಟ್ ಲೀಕ್ ಆಗಿತ್ತು ಎಂದ ಆರಗ ಜ್ಞಾನೇಂದ್ರ
ಇಂದು ಸಿಎಂ ಸಿದ್ದರಾಮಯ್ಯನವರು 2023-2024ರ ಬಜೆಟ್ ಅನ್ನು ಮಂಡಿಸಿದ್ದಾರೆ. 14ನೇ ಬಾರಿಗೆ ಬಜೆಟ್ ಮಂಡಿಸಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದಾಖಲೆ ಮುರಿದಿದ್ದಾರೆ. ಆದರೆ ಇಂದಿನ ಬಜೆಟ್ ಕುರಿತಂತೆ ಪ್ರತಿಪಕ್ಷ ನಾಯಕರು ನ್ಯೂಸ್ಫಸ್ಟ್ಗೆ ಪ್ರತಿಕ್ರಿಯಿಸಿದ್ದು, ಬಜೆಟ್ ಕುರಿತಂತೆ ದೋಷಾರೋಪ ಮಾಡಿದ್ದಾರೆ.
ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯಿಸಿದ್ದು, ಬಜೆಟ್ ಕುರಿತಂತೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರದ ವಿರುದ್ಧ 75 ಸಾವಿರ ಕೋಟಿ ಸಾಲದ ಆರೋಪ ಕುರಿತಾಗಿ ಮಾತನಾಡಿದ ಅವರು, ಸಾಲ ಮಾಡಿ ದುಡ್ಡು ಹೊಡಿಲಿಲ್ಲವಲ್ಲ, ಅಭಿವೃದ್ಧಿಗೆ ವಿನಿಯೋಗ ಮಾಡಿದ್ದೀವಿ. ಅದು ಲೋಕೋಪಯೋಗಿ ಇರಬಹುದು ಬೇರೆ ಬೇರೆ ಇರ್ಬೋದು, ಇರಿಗೇಶನ್ಗೆ ಇರಬಹುದು. ಸಾಕಷ್ಟು ಹಣವನ್ನು ವ್ಯಯಮಾಡಿ ಭಾಗ್ಯಗಳಿಗೆ ಕೊಡದೇ ಇರಬಹುದು ಭಾವಿ ಜೀವನಕ್ಕೆ ಬೇಕಾದಂತಹ, ಮೂಲಭೂತ ಸೌಕರ್ಯ ಒದಗಿಸುವಂತಹ, ರೈತರಿಗೆ ನೆರವು ನೀಡುವಂತಹ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಲೋಕೋಪಯೋಗಿ ಬಗ್ಗೆ ಏನು ಹೇಳಿಲ್ಲ. ಮೂರು ಲೈನ್ನಲ್ಲಿ ವಿವರಿಸಿದ್ದಾರೆ. ಅಭಿವೃದ್ಧಿ ಇಲ್ಲ. ಇವರತ್ರ ಹಣ ಇಲ್ಲ. ಅದಕ್ಕೆ ನಿಗದಿ ಮಾಡಿಲ್ಲ ಎಂದು ಹೇಳಿದರು.
ನಂತರ ಮಾತು ಮುಂದುವರಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ನಿಮಗೆ ಗೊತ್ತಿರ್ಲಿ ಇಂದಿನ ಬಜೆಟ್ ನಿನ್ನೆಯೇ ಲೀಕ್ ಆಗಿದೆ. ಪ್ರಿಯಾಂಕ ಖರ್ಗೆಯವರು ಹೇಳಿದ್ದಾರೆ ನಿನ್ನೆ. ಕುಡಿಯುವ ನೀರಿನ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಇತ್ತು. ಆ ಜಯಜಯಮ್ಮು ಕಳಪೆ ಕಾಮಗಾರಿಯಾಗಿದೆ, ಸರಿಯಾಗಿ ಆಗಿಲ್ಲ. ಅದನ್ನು ತನಿಖೆಗೆ ಒಳಪಡಿಸುತ್ತೇವೆ. ಇಂದು ಬಜೆಟ್ ವೇಳೆ ಅದೇ ಬಂದಿದೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಮಾತನಾಡಿದ್ದು, ಶೇ.50ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಮಲ್ನಾಡಿನಲ್ಲಿ ಎಲ್ಲಿ ಕೆಂಪು ಬಸ್ಗಳಿದ್ದಾವೆ. ಎಲ್ಲ ಖಾಸಗಿ ಬಸ್ ಇವೆ. ಇವತ್ತು ಖಾಸಗಿ ಬಸ್ನಲ್ಲೂ ಓಡಾಡುವ ಮಹಿಳೆಯರಿಗೆ ಟಿಕೆಟ್ ಅನ್ನು ಪ್ರೈವೇಟ್ ಬಸ್ ಕಂಪನಿಯವರಿಗೆ ರೀಎಂಬಸ್ ಮಾಡಬಹುದಾಗಿತ್ತು ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ