newsfirstkannada.com

ಸೂರ್ಯ vs ಎಬಿಡಿ..!! ಇವರ ಕೆಲ ಶಾಟ್ಸ್​ಗೆ ಕ್ರಿಕೆಟ್​ ಬುಕ್​ನಲ್ಲೂ ಇಲ್ಲ ನೇಮ್..!

Share :

Published April 20, 2024 at 1:05pm

Update April 20, 2024 at 1:06pm

    ಮಿಸ್ಟಿರಿಯಸ್ ಶಾಟ್ಸ್​ ಬಾರಿಸೋದ್ರಲ್ಲಿ ಪಂಟರ್ಸ್

    ಆಫ್ರಿಕನ್​ ಎಬಿಡಿನಾ? ಇಂಡಿಯನ್​​ ಸೂರ್ಯನಾ?

    ಇನೋವೇಟೆಡ್ ಶಾಟ್ಸ್​ಗೆ ಇವರೇ ಕೇರ್ ಆಫ್ ಅಡ್ರೆಸ್

ಎಬಿ ಡಿವಿಲಿಯರ್ಸ್​, ಸೂರ್ಯಕುಮಾರ್​ ಯಾದವ್​.. ಇವರಿಬ್ಬರು ಬ್ಯಾಟಿಂಗ್​ಗಿಳಿದ್ರೆ ಸಾಕು, ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕ ಶುರುವಾಗುತ್ತೆ. ಫೀಲ್ಡಿಂಗ್​ ಸೆಟ್ ಮಾಡೋಕಾಗದೇ ಕ್ಯಾಪ್ಟನ್ ತಲೆ ಚಚ್ಚಿಕೊಳ್ಳಬೇಕಾಗುತ್ತೆ. ಇವರ ಆರ್ಭಟ ಶುರುವಾದ್ರೆ, ಎದುರಾಳಿಗಳ ಕಥೆ ಅಯೋಮಯವಾಗುತ್ತೆ. ಇದೀಗ ಇವರಿಬ್ಬರ ಮಧ್ಯೆ ಫೈಟ್​ ಶುರುವಾಗಿದೆ. ಪ್ರಶ್ನೆ ಇಷ್ಟೇ. ಇವರಿಬ್ಬರಲ್ಲಿ ಯಾರು ರಿಯಲ್​ ಮಿಸ್ಟರ್ 360 ಅನ್ನೋದು.

ಇದನ್ನೂ ಓದಿ:INSPIRING: ಹಳಿ ತಪ್ಪಿದ್ದ SRH​​ಗೆ ಹೊಸ ದಾರಿ ತೋರಿಸಿದ ದಂಡನಾಯಕ, ಕಮ್ಮಿನ್ಸ್ ​ಯಶಸ್ಸಿನ ರೋಚಕ ಸ್ಟೋರಿ..!

ಎಬಿ ಡಿವಿಲಿಯರ್ಸ್.. ಸೂರ್ಯಕುಮಾರ್ ಯಾದವ್​, ಇಬ್ಬರ ಆಟ ನೋಡುವುದೇ ಒಂದು ಅದ್ಭುತ. ಪರಿಸ್ಥಿತಿ ಯಾವುದೇ ಇರಲಿ, ಬಿರುಸಿನ ಬ್ಯಾಟಿಂಗ್ ಆಡಿ ಸೈ ಎನಿಸಿಕೊಳ್ಳುತ್ತಾರೆ. ಇವರಿಬ್ರು ಕ್ರೀಸ್​​ನಲ್ಲಿದ್ದಷ್ಟು ಹೊತ್ತು ಬೌಲರ್​​ಗಳಿಗೆ ನೆಮ್ಮದಿಯಿಲ್ಲ. ರಣ ತಂತ್ರವನ್ನು ಹೆಣೆದು ಹೆಣೆದು ಎದುರಾಳಿ ಪಡೆ ಸುಸ್ತಾಗ್ತಾರೆ. ಎಂತದ್ದೇ ಎಸೆತವಿರಲಿ ಬೌಂಡರಿ, ಸಿಕ್ಸರ್​​ಗಳ ಸಿಡಿಸಿ ನೋಡು ನೋಡುತ್ತಿದ್ದಂಗೆ ಪಂದ್ಯದ ಗತಿಯನ್ನ ಬದಲಿಸಿ ಬೀಡ್ತಾರೆ.

ಇನೋವೇಟಿವ್​ ಶಾಟ್ಸ್​ಗೆ ಇವರಿಬ್ಬರೇ ಬಾಸ್​​​..!
ಇನೋವೇಟಿವ್​​ ಶಾಟ್ಸ್​ ಬಾರಿಸೋದ್ರಲ್ಲಿ ಎಬಿಡಿ ಹಾಗೂ ಸೂರ್ಯ ಎತ್ತಿದ ಕೈ. ಎಂಥಹ ಚೆಂಡನ್ನಾಗಲಿ ಸರಾಗವಾಗಿ ಸಿಕ್ಸರ್​​ಗೆ ಅಟ್ಟುವ ಕಲೆಗಾರಿಕೆ ಹೊಂದಿರುವ ಇವರಲ್ಲಿ ಕೆಲ ಸ್ಪೆಷಲ್ ಶಾಟ್ಸ್​ ಇವೆ. ಇದೀಗ ಇವರಿಬ್ಬರ ನಡುವೆ ಯಾರು ರಿಯಲ್ ಮಿಸ್ಟರ್​ 360 ಎಂಬ ಪ್ರಶ್ನೆ ಉದ್ಭವಿಸಿದೆ. ಕ್ರಿಕೆಟ್ ಜಗತ್ತಿನ ಮಿಸ್ಟರ್ 360, ಅಂದ್ರೆ ನೆನಪಾಗೋದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್. ಅಬ್ರಾಂಹಂ ಬೆಂಜಮಿನ್​ ಡಿವಿಲಿಯರ್ಸ್​.. ಈತನ ಬ್ಯಾಟಿಂಗ್​ ನೋಡೋದೆ ಒಂದು ಹಬ್ಬ. ಅಷ್ಟದಿಕ್ಕೂಗಳಿಗೂ ಬೌಲ್​​ನ ದಿಗ್ಧದರ್ಶನ ಮಾಡಿಸ್ತಿದ್ದ ಈತನ ಪರಾಕ್ರಮಕ್ಕೆ ಮರುಳಾಗದವರೇ ಇಲ್ಲ.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

ಎಬಿಡಿ ಫೀಲ್ಡ್​ಗೆ ಎಂಟ್ರಿಕೊಡ್ತಿದ್ರೆ ಅವತ್ತು ಬೌಲರ್ಸ್​​​​​​​​​​ಗೆ ಮಾರಿಹಬ್ಬ ಅಂತಾನೇ ಹೇಳಲಾಗ್ತಿತ್ತು. 360 ಡಿಗ್ರಿಯಲ್ಲಿ ಸ್ಟೇಡಿಯಂನ ಮೂಲೆಮೂಲೆಗೂ ಬಾಲನ್ನ INTRODUCE ಮಾಡ್ತಿದ್ದ ABD, ಕ್ರಿಕೆಟ್​ ಲೋಕದ ಎಲ್ಲಾ ಕ್ರಿಕೆಟ್​​​​ ಶಾಟ್​ಗಳನ್ನೂ ಆಡಿದ ಏಕೈಕ ಆಟಗಾರ ಆನಿಸಿಕೊಂಡಿದ್ರು. ಹೀಗಾಗಿ ಯಾರೂ ABDನ ಟಚ್​​​​ ಮಾಡೋಕೆ ಸಾಧ್ಯನೇ ಇಲ್ಲ ಎನ್ನಲಾಗಿತ್ತು. ಈಗ ಎಬಿಡಿಯನ್ನೂ ನಮ್ಮ ಸೂರ್ಯಕುಮಾರ್​ ಮೀರಿಸಿದ್ದಾರೆ.

ಸೂರ್ಯ ಕುಮಾರ್​ ರಿಯಲ್ ಮಿಸ್ಟರ್​​ 360ನಾ?
ಥೇಟ್​​ ಎಬಿಡಿಯಂತೆ ಮೈದಾನದ ಅಷ್ಟದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಮತ್ತೊಬ್ಬ ಆಟಗಾರ ಅಂದ್ರೆ ಅದು ನಮ್ಮ ಭಾರತದ ಸೂರ್ಯಕುಮಾರ್ ಯಾದವ್​​. ಯಾವುದೇ ಸ್ಟೇಡಿಯಂನಲ್ಲಾದರೂ ಸರಿ, ಬ್ಯಾಟಿಂಗ್​ನಲ್ಲಿ ಬಿರುಗಾಳಿ ಎಬ್ಬಿಸುವ ಪರಾಕ್ರಮಿ.. ramp shot, supla shot, ಸ್ವೀಪ್ ಶಾಟ್ಸ್​ ಸೂರ್ಯಕುಮಾರ್ ಯಾದವ್​ರ ಸ್ಪೆಷಲ್ ಶಾಟ್ಸ್​ ಆಗಿವೆ. ಥೇಟ್​ ಎಬಿಡಿಯಂತೆ ಬ್ಯಾಟ್​ ಬೀಸಿರೋ ಸೂರ್ಯ ಅಸಾಧ್ಯವಾದ ಹೊಡೆತಗಳನ್ನೂ ಸ್ಟೇಡಿಯಂಗೆ ಲ್ಯಾಂಡ್​ ಮಾಡಿ, ತನ್ನ ತಾಕತ್ತು ತೋರಿಸಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾಗೆ ಪೆಟ್ಟು ಕೊಡ್ತಿದೆ IPL ಇಂಪ್ಯಾಕ್ಟ್​ ರೂಲ್; ಕ್ಯಾಪ್ಟನ್ ರೋಹಿತ್ ಶರ್ಮಾ ಅಪಸ್ವರ..!

ಎಬಿಡಿ ಕೂಡ ಸ್ವೀಪ್​, ಫುಲ್ ಶಾಟ್, ರಿವರ್ಸ್​ ಸ್ವೀಪ್ ಸೇರಿದಂತೆ ಕೆಲ ಮಿಸ್ಟಿರಿಯಸ್ ಶಾಟ್ಸ್​ ಬಾರಿಸೋದ್ರಲ್ಲಿ ಪಂಟರ್​ ಆಗಿದ್ರು. ಆದ್ರೆ, ಈಗ ಸೂರ್ಯ ಅವ್ರನ್ನ ಮೀರಿಸಿರೋದನ್ನ ಕ್ರಿಕೆಟ್​ ಜಗತ್ತು ಒಪ್ಪಿದೆ. ಯಾಕಂದ್ರೆ, ಸೂರ್ಯ ಕುಮಾರ್​ ಹೊಡೀತಾ ಇರೋ ಕೆಲ ಶಾಟ್​ಗಳಿಗೆ ಹೆಸರಿಡಲು ಸಾಧ್ಯವಿಲ್ಲ. ವಿಚಿತ್ರ ಶಾಟ್​ಗಳಿಗೆ ಹೆಸರು ಕ್ರಿಕೆಟ್ ಪುಸ್ತಕದಲ್ಲೂ ಇಲ್ಲ. ಕ್ರಿಕೆಟ್ ಪಂಡಿತರ ಬಳಿಯೂ ಇಲ್ಲ.

ಇದನ್ನೂ ಓದಿ: ಮಲಗಿದ್ದಲ್ಲೇ ಐವರ ಬರ್ಬರ ಹತ್ಯೆ ಪ್ರಕರಣ; ಶಂಕಿತ ಕೊಲೆ ಆರೋಪಿಗಳು ಇವರೇನಾ?

ಎಬಿಡಿಗಿಂತ ಸೂರ್ಯನೆ ಬೆಸ್ಟ್ ಅನ್ನೋ ಮಾತುಗಳನ್ನ ಕೆಲ ಕ್ರಿಕೆಟ್ ಪಂಡಿತರು ಹೇಳ್ತಿದ್ದಾರೆ. ಸೂರ್ಯನ ಮಿಸ್ಟಿರಿಯಸ್ ಹಾಗೂ ಇನೋವೇಟಿವ್​ ಶಾಟ್​ಗೆ ಎಲ್ಲಾ ಮರುಳಾಗಿದ್ದಾರೆ. ​ಪ್ರತಿ ಬಾಲ್​​ಗೂ ಭಿನ್ನ ವಿಭಿನ್ನ ಶಾಟ್ಸ್ ಪ್ಲೇ ಮಾಡ್ತಿರುವ ಮುಂಬೈಕರ್​, ವಿಭಿನ್ನ ಆಟದ ವೈಖರಿಯಿಂದ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದ್ದಾರೆ. ಹೀಗಾಗಿ ಟಿ20ಯಲ್ಲಿ ಸೂರ್ಯ, ರಿಯಲ್ ಮಿಸ್ಟರ್ 360 ಅನ್ನೋ ನಿರ್ಧಾರಕ್ಕೆ ಕ್ರಿಕೆಟ್​ ಲೋಕ ಬಂದಿದೆ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೂರ್ಯ vs ಎಬಿಡಿ..!! ಇವರ ಕೆಲ ಶಾಟ್ಸ್​ಗೆ ಕ್ರಿಕೆಟ್​ ಬುಕ್​ನಲ್ಲೂ ಇಲ್ಲ ನೇಮ್..!

https://newsfirstlive.com/wp-content/uploads/2024/04/ABD-SURYA.jpg

Load More