Advertisment

ಮುಡಾ ಕೇಸ್​ನಿಂದ ಸಿದ್ದರಾಮಯ್ಯರನ್ನು ಬಚಾವ್​ ಮಾಡಿದ್ದು ಮನು ಸಿಂಘ್ವಿ; ಯಾರು ಈ ಆಪತ್ಭಾಂದವ?

author-image
Gopal Kulkarni
Updated On
ಮುಡಾ ಕೇಸ್​ನಿಂದ ಸಿದ್ದರಾಮಯ್ಯರನ್ನು ಬಚಾವ್​ ಮಾಡಿದ್ದು ಮನು ಸಿಂಘ್ವಿ; ಯಾರು ಈ ಆಪತ್ಭಾಂದವ?
Advertisment
  • ಸಿಎಂ ಸಿದ್ದು ಸಂಕಷ್ಟ ಪರಿಹಾರಕ್ಕೆ ಬಂದ ಅಭಿಷೇಕ್ ಮನುಸಿಂಘ್ವಿ
  • ಕಾಂಗ್ರೆಸ್ ಪಾಲಿಗೆ ಆಪತ್ಬಾಂಧವ ಆಗಿದ್ದು ಹೇಗೆ ಹಿರಿಯ ವಕೀಲ?
  • ಯಾವೆಲ್ಲಾ ಕೈ ನಾಯಕರನ್ನು ಸಿಂಘ್ವಿ ಕಾಪಾಡಿದ್ದಾರೆ ನಿಮಗೆ ಗೊತ್ತಾ?

ನವದೆಹಲಿ: ಇನ್ನೂ ಬೇರೇ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರಗಳು ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾಗ, ನೆರವಿಗೆ ಬಾರೋದು ಇದೇ ಅಭಿಷೇಕ ಮನುಸಿಂಘ್ವಿ. 2018 ರಲ್ಲಿ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ನಿರ್ಧರಿಸಿದ್ದವು. ಆದರೇ, ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು.

Advertisment

ಈ ವೇಳೆ ಕರ್ನಾಟಕದಲ್ಲಿ ಬಹುಮತ ಇರುವ ಕಾಂಗ್ರೆಸ್-ಜೆಡಿಎಸ್ ಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದು ಅಭಿಷೇಕ ಮನುಸಿಂಘ್ವಿ. ಪರಿಣಾಮ ಬೇಗನೇ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ 2018ರಲ್ಲಿ ಆಸ್ತಿತ್ವಕ್ಕೆ ಬಂತು. ಇದೇ ರೀತಿ ಉತ್ತರಾಖಂಡ್, ಮಣಿಪುರ, ಗೋವಾ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ, ಸರ್ಕಾರಗಳ ಪರ ಸುಪ್ರೀಂಕೋರ್ಟ ನಲ್ಲಿ ವಾದಿಸಿ ಸರ್ಕಾರಗಳನ್ನೇ ರಕ್ಷಿಸುವ ಕೆಲಸವನ್ನು ಅಭಿಷೇಕ ಮನುಸಿಂಘ್ವಿ ಮಾಡಿದ್ದಾರೆ.

publive-image

ಇದನ್ನೂ ಓದಿ:ಸಿಎಂ ಸಿದ್ದು ಬೆನ್ನಲ್ಲೇ HDKಗೂ ಸಂಕಷ್ಟ.. ಪ್ರಾಸಿಕ್ಯೂಷನ್‌ಗೆ ಗವರ್ನರ್​ ಅನುಮತಿ ಕೊಡ್ತಾರಾ?

ಈಗ ಸಿಎಂ ಸಿದ್ದರಾಮಯ್ಯಗೂ ಮುಡಾ ಕೇಸ್ ನಲ್ಲಿ ರಾಜ್ಯಪಾಲರು ತನಿಖೆಗೆ ಪೂರ್ವಾನುಮತಿ ನೀಡಿದ್ದ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಸಿದ್ದರಾಮಯ್ಯ ಪರ ವಾದಿಸಿದ್ದಾರೆ. ರಾಜ್ಯಪಾಲರ ಪೂರ್ವಾನುಮತಿಯೇ ಕಾನೂನಿಗೆ ವಿರುದ್ಧ ಎಂದು ಪ್ರಬಲ ವಾದ ಮಂಡಿಸಿದ್ದಾರೆ. ಇದರಿಂದಾಗಿ ಕೆಳ ನ್ಯಾಯಾಲಯ ಯಾವುದೇ ಆದೇಶ ನೀಡದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

Advertisment

publive-image

ಇದನ್ನೂ ಓದಿ:ಮಾಜಿ ಕ್ರಿಕೆಟರ್​​ನಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹೀಗೊಂದು ಮನವಿ.. ಆ ಸೇವೆ ಪುನಾರಂಭಿಸಿ ಎಂದ ಸುನಿಲ್ ಜೋಶಿ

ಇಂಥ ಅಭಿಷೇಕ ಮನುಸಿಂಘ್ವಿ ಕೇವಲ ಕಾಂಗ್ರೆಸ್ ನಾಯಕರ ಪರ ಮಾತ್ರ ಕೋರ್ಟ್ ಗಳಲ್ಲಿ ವಾದಿಸಿಲ್ಲ, ಟಿಎಂಸಿ ಪಕ್ಷದ ಮಮತಾ ಬ್ಯಾನರ್ಜಿ, ಆಪ್ ಪಕ್ಷದ ಅರವಿಂದ್ ಕೇಜ್ರಿವಾಲ್, ಸಂಜಯಸಿಂಗ್, ಮನೀಶ್ ಸಿಸೋಡಿಯಾ ಪರವಾಗಿಯೂ ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದಾರೆ. ಸಿಂಘ್ವಿ ವಾದ ಮಂಡನೆಯ ಬಳಿಕ ಸುಪ್ರೀಂಕೋರ್ಟ್ , ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಸಿಂಘ್ವಿ ವಾದದ ಬಳಿಕ ಸುಪ್ರೀಂಕೋರ್ಟ್ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್‌ಗೆ ಲಿಕ್ಕರ್ ಹಗರಣದ ಕೇಸ್ ನಲ್ಲಿ ಜಾಮೀನು ನೀಡಿದೆ.

ಇನ್ನೂ ಅಭಿಷೇಕ ಮನುಸಿಂಘ್ವಿ ಹಿನ್ನಲೆ ಏನು ಗೊತ್ತಾ?

ಅಭಿಷೇಕ ಮನುಸಿಂಘ್ವಿ 1959 ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಹುಟ್ಟಿದವರು. ಅಭಿಷೇಕ ಮನುಸಿಂಘ್ವಿ ತಂದೆ ಎಲ್‌.ಎಂ.ಸಿಂಘ್ವಿ ಕೂಡ ದೇಶದ ಖ್ಯಾತ ಕಾನೂನು ಪಂಡಿತರು. ತಾಯಿ ಕಮಲಾ ಹಿಂದಿ ಸಾಹಿತಿಯಾಗಿದ್ದರು. ದೆಹಲಿಯ ಸೇಂಟ್ ಕೊಲಂಬಸ್ ಸ್ಕೂಲ್ ನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಅಭಿಷೇಕ ಮನುಸಿಂಘ್ವಿ, ಬಳಿಕ ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ ಕಾಲೇಜ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಮರ್ಜೆನ್ಸಿ ಅಧಿಕಾರಗಳ ಬಗ್ಗೆ ಪಿಎಚ್‌ಡಿ ಥೀಸೀಸ್ ಬರೆದು ಡಾಕ್ಟರೇಟ್ ಪಡೆದಿದ್ದಾರೆ.

Advertisment

publive-image

ಇದನ್ನೂ ಓದಿ:ಬೆಂಗಳೂರಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ; ಕಿರಿಕ್​ ತೆಗೆದು ಕಾರ್​​ ಗ್ಲಾಸ್​ ಪುಡಿ ಪುಡಿ..!

ಇಂಥ ಅಭಿಷೇಕ ಮನುಸಿಂಘ್ವಿ ವೈಯಕ್ತಿಕವಾಗಿ ವಿವಾದಗಳಲ್ಲಿ ಸಿಲುಕಿದ್ದು ಉಂಟು. 2012 ರಲ್ಲಿ ಅಭಿಷೇಕ ಮನುಸಿಂಘ್ವಿ ಅವರದ್ದು ಎನ್ನಲಾದ ಸೆಕ್ಸ್ ವಿಡಿಯೋ ಒಂದು ಲೀಕ್ ಆಗಿತ್ತು. ಆ ವೇಳೆ ಹೈಕೋರ್ಟ್ ನಿಂದ ವಿಡಿಯೋ ಹರಡದಂತೆ ತಡೆಯಾಜ್ಞೆ ಪಡೆದಿದ್ದರು. ಜೊತೆಗೆ ಆಗ ತಾವು ಹೊಂದಿದ್ದ ಕಾಂಗ್ರೆಸ್ ವಕ್ತಾರ ಹುದ್ದೆಗೆ ಹಾಗೂ ಪಾರ್ಲಿಮೆಂಟ್ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ:ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ?

Advertisment

2014 ರಲ್ಲಿ ಅಭಿಷೇಕ ಮನುಸಿಂಘ್ವಿಗೆ ಇನ್ ಕಮ್ ಟ್ಯಾಕ್ಸ್ ಸೆಟ್ಲಮೆಂಟ್ ಕಮೀಷನ್ , ತಮ್ಮ ಕಚೇರಿಯ ನಿರ್ವಹಣೆಯ ಖರ್ಚುವೆಚ್ಚಗಳನ್ನು ಸರಿಯಾಗಿ ನೀಡದೇ ಇರೋದಕ್ಕೆ 57 ಕೋಟಿ ರೂ ದಂಡ ವಿಧಿಸಿತ್ತು.

ಅಭಿಷೇಕ ಮನುಸಿಂಘ್ವಿ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಿಂದ ಎರಡು ಭಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹಿಮಾಚಲ ಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಸೋಮವಾರವಷ್ಟೇ ತೆಲಂಗಾಣದ ರಾಜ್ಯಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಹುತೇಕ ಅವಿರೋಧ ಆಯ್ಕೆಯಾಗೋದು ಖಚಿತವಾಗಿದೆ.

ಇನ್ನೂ ಅಭಿಷೇಕ ಮನುಸಿಂಘ್ವಿ , ಪಿ.ಚಿದಂಬರಂ, ಕಾರ್ತಿ ಚಿದಂಬರಂ ಪರ ವಾದಿಸಿ ಇಬ್ಬರಿಗೂ ಇ.ಡಿ. , ಸಿಬಿಐ ಕೇಸ್ ಗಳಲ್ಲಿ ಬೇಲ್ ಸಿಗುವಂತೆ ಪ್ರಬಲ ವಾದ ಮಂಡಿಸಿದ್ದರು.

Advertisment

ಇನ್ನೂ ವಕೀಲಿ ವೃತ್ತಿ ಜೀವನದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಸೀನಿಯರ್ ಅಡ್ವೋಕೇಟ್ ಆಗಿ ಕಿರಿಯ ವಯಸ್ಸಿಗೆ ನೇಮಕವಾದ ಖ್ಯಾತಿ ಅಭಿಷೇಕ ಮನುಸಿಂಘ್ವಿ ಅವರಿಗೆ ಇದೆ. ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕವಾಗಿದ್ದರು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ನ ವೈಸ್ ಪ್ರೆಸಿಡೆಂಟ್ ಆಗಿಯೂ ಆಯ್ಕೆಯಾಗಿದ್ದರು. ಸುಪ್ರೀಂಕೋರ್ಟ್ ನ ಸಂವಿಧಾನಿಕ ಪೀಠಗಳ ಮುಂದೆ ಸಂವಿಧಾನಿಕ ವಿಷಯಗಳ ಬಗ್ಗೆ ಹೊಸ ಬೆಳಕು ಚೆಲ್ಲುವಂಥ ವಾದ ಮಂಡಿಸಿದ್ದಾರೆ. ಸಂವಿಧಾನಿಕ ಕೇಸ್ ಗಳು, ಸಿವಿಲ್ , ಕಮರ್ಷಿಯಲ್ ಕೇಸ್ ಸೇರಿದಂತೆ ಪ್ರಮುಖ ಕೇಸ್ ಗಳಲ್ಲಿ ವಕೀಲರಾಗಿ ವಾದ ಮಂಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment