newsfirstkannada.com

ಬೆಂಗಳೂರಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ; ಕಿರಿಕ್​ ತೆಗೆದು ಕಾರ್​​ ಗ್ಲಾಸ್​ ಪುಡಿ ಪುಡಿ..!

Share :

Published August 20, 2024 at 10:13pm

    ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿವೆ ರೋಡ್​ಗಳಲ್ಲಿ ನೂರಾರು ರಾಮಾಯಣ

    ಕಾರಿಗೆ ಗುದ್ದಿ, ಕಾರಿನ ವೈಪರ್​ ಕಿತ್ತು ಹಲ್ಲೆ ಮಾಡಲು ಮುಂದಾದ ಭೂಪ

    ಪಲ್ಸರ್ ಬೈಕ್​ನಲ್ಲಿ ಬಂದು ಕಾರಿಗೆ ಅಡ್ಡಗಟ್ಟಿ ಅವಾಜ್ ಹಾಕಿದ ಪುಂಡರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ರೋಡ್​ ರೇಜ್ ಕೇಸ್​ಗಳ ಹಾಟ್​ ಸ್ಪಾಟ್​ ಆಗ್ತಿದ್ಯಾ? ವಾರಕ್ಕೆರಡರಂತೆ ಪ್ರಕರಣಗಳು ನಡೀತಾನೇ ಇರ್ತವೆ. ಒಂದು ಏರಿಯಾದಲ್ಲಿ ಬ್ರೇಕ್​ ಹಾಕಿದ್ದಕ್ಕೇ ಗಲಾಟೆ ನಡೆದ್ರೆ, ಮತ್ತೊಂದು ಏರಿಯಾದಲ್ಲಿ ಆ್ಯಂಬುಲೆನ್ಸ್​ಗೆ ದಾರಿ ಬಿಟ್ಟಿದ್ದಕ್ಕೆ ಯುದ್ಧವೇ ನಡೆದುಹೋಗಿದೆ.

ಸರ್ಜಾಪುರದ ಫ್ಲೈ ಓವರ್ ಬಳಿ ದಂಪತಿ ಕಾರಿನಲ್ಲಿ ಹೋಗ್ತಾಯಿದ್ರು. ಮುಂದಿನ ಕಾರು ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ ಕಾರಣದಿಂದಾಗಿ ಅಪಘಾತ ತಪ್ಪಿಸಲು ದಂಪತಿ ಇದ್ದ ಕಾರು ಬಲಕ್ಕೆ ತಿರುಗಿಸದ್ದಾರೆ. ಕಾರ್ ಹಿಂಬದಿಯಿಂದ ಬಂದ ಬೈಕ್ ಸವಾರ್ ಕಾರ್​ಗೆ ಗುದ್ದಿದ ಕಾರಣ ದೊಡ್ಡ ಗಲಾಟೆಯೇ ನಡೆದು ಹೋಗಿದೆ.

ಇದನ್ನೂ ಓದಿ: ಭಾರೀ ಮಳೆಯಿಂದ ಅನಾಹುತ.. ಸಂಕಷ್ಟಕ್ಕೆ ಮಿಡಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳಿಂದ ಸಹಾಯ

ಕಾರನ್ನು ಬಲಕ್ಕೆ ತೆಗೆದುಕೊಂಡಿದ್ದಕ್ಕೆ ರೊಚ್ಚಿಗೆದ್ದ ಬೈಕ್ ಸವಾರ ಅನಿಲ್ ರೆಡ್ಡಿ ಕಾರ್​ನ ವೈಪರ್ ಕಿತ್ತು ಕಾರ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ತಿಂಗಳ ಮಗು ಇದೆ ಗಾಬರಿ ಆಗುತ್ತೆ ಸ್ವಲ್ಪ ಸುಮ್ನೀರಿ ಅಂದ್ರು ಕೇಳದೆನೇ ಗಲಾಟೆ ಜೋರಾಗಿಯೇ ಮಾಡಿದ್ದಾನೆ. ಕೊನೆಗೆ ಬೆಳ್ಳಂದೂರು ಪೊಲೀಸರು ಅವನನ್ನು ಅರೆಸ್ಟ್ ಮಾಡಿ ಜೈಲಗಟ್ಟಿದ್ದಾರೆ. ಇನ್ನೂ 9 ತಿಂಗಳ ಮಗು ಈ ಎಲ್ಲಾ ಘಟನೆಯಿಂದ ಶಾಕ್​ಗೆ ಒಳಗಾಗಿದೆ ಎಂದು ಅನ್ನೋ ಮಾಹಿತಿ ಬಂದಿದೆ.

ಬೈಕ್​ನಲ್ಲಿ ಕಾರ್​​ನ ಚೇಸ್ ಮಾಡಿ ಪುಂಡಾಟ ರೋಡ್​​ ರಾಮಾಯಣ

ಸರ್ಜಾಪುರದಲ್ಲಿ ನಡೆದ ರೀತಿಯ ಘಟನೆಯೇ ಇಂದಿರಾನಗರ ಸಿಗ್ನಲ್​​ನಲ್ಲಿಯೂ ಕೂಡ ನಡೆದಿದೆ. ಜಿತಿನ್ ರಾಜ್ ಎಂಬಾತ ಸ್ನೇಹಿತರ ಜೊತೆ ಮನೆ ಕಡೆ ಹೋಗ್ತಾ ಇರೋವಾಗ ಪಲ್ಸರ್ ಬೈಕ್​ನಲ್ಲಿ ಬಂದ ಪುಂಡರು ಕಾರನ್ನು ಓವರ್​ಟೇಕ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪುಂಡಾಟ ಮೆರೆದಿದ್ದಾರೆ. ಇನ್ನು, ಆರೋಪಿಗಳು ಕಾರನ್ನ ಅಡ್ಡಗಟ್ಟಿರುವ ದೃಶ್ಯ ಕಾರಿನ ಡ್ಯಾಶ್​​ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಇದೀಗ ಜಿತಿನ್​ ಪೊಲೀಸ್ ದೂರು ಕೊಟ್ಟಿದ್ದಲ್ಲದೇ, ಬೆಂಗಳೂರಲ್ಲಿ ರಾತ್ರಿ ವೇಳೆ ಸಂಚಾರ ಎಷ್ಟು ಸೇಫ್ ಎಂದು ಟ್ವಿಟರ್​ನಲ್ಲಿ , ಡಿಸಿಎಂ, ಸಿಎಂಗೆ ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಇದೆಂಥಾ ಯಡವಟ್ಟು.. ರೊಚ್ಚಿಗೆದ್ದ ಗ್ರಾಹಕರಿಂದ ಬುದ್ಧಿ ಕಲಿತ ಝೊಮ್ಯಾಟೊ ಕಂಪನಿ; ಅಸಲಿಗೆ ಆಗಿದ್ದೇನು?

ಈ ತರದ ಘಟನೆಗಳನ್ನ ನೋಡ್ತಾಯಿದ್ರೆ ನಗರದ ಪೊಲೀಸ್ ವ್ಯವಸ್ಥೆ ಮೇಲೆನೇ ಅನುಮಾನ ಮೂಡುತ್ತೆ. ಇದು ಹೀಗೆ ಮುಂದುವರೆಯೋ ಮುನ್ನ, ನಿದ್ದೆಯಲ್ಲೇ ಕನವರಿಸ್ತಿರೋ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲೇ ಬೇಕಿದೆ.. ರೋಡಲ್ಲಿ ಹೀಗೆ ಸೀನ್​ ಮಾಡೋರಿಗೆ ತಕ್ಕ ಪಾಠ ಕಲಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ; ಕಿರಿಕ್​ ತೆಗೆದು ಕಾರ್​​ ಗ್ಲಾಸ್​ ಪುಡಿ ಪುಡಿ..!

https://newsfirstlive.com/wp-content/uploads/2024/08/ROAD-RAMAYANA.jpg

Load More