newsfirstkannada.com

ಇದೆಂಥಾ ಯಡವಟ್ಟು.. ರೊಚ್ಚಿಗೆದ್ದ ಗ್ರಾಹಕರಿಂದ ಬುದ್ಧಿ ಕಲಿತ ಝೊಮ್ಯಾಟೊ ಕಂಪನಿ; ಅಸಲಿಗೆ ಆಗಿದ್ದೇನು?

Share :

Published August 20, 2024 at 8:00pm

Update August 20, 2024 at 8:14pm

    ಝೊಮ್ಯಾಟೊಗೆ ಎಐನಿಂದ ಎದುರಾಯ್ತು ನೂರೆಂಟು ಸಮಸ್ಯೆ?

    ಕಸ್ಟಮರ್​ಗಳಿಂದ ಬರುತ್ತಿದ್ದ ರೇಟಿಂಗ್ಸ್​ನಲ್ಲಿ ದೊಡ್ಡ ಪ್ರಮಾಣದ ಇಳಿಕೆ

    ತಮ್ಮ ಎಕ್ಸ್ ಖಾತೆಯಲ್ಲಿ ಝೊಮ್ಯಾಟೊ ಸಿಎಓ ಹೇಳಿಕೊಂಡಿದ್ದು ಏನು?

ನವದೆಹಲಿ: ನೂರಾರು ಗ್ರಾಹಕರು ದೂರು ನೀಡಿದ ಮೇಲೆ ಝೊಮ್ಯಾಟೊ ಕಂಪನಿಗೆ ತನ್ನ ತಪ್ಪಿನ ಅರಿವಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆಂಟ್‌ (AI)ನಿಂದ ರಚಿತವಾದ ಆಹಾರ ಹಾಗೂ ಖಾದ್ಯಗಳ ಪೋಟೋಗಳನ್ನು ಇನ್ಮುಂದೆ ಆ್ಯಪ್​ನಲ್ಲಿ ಬಳಸದಿರಲು ನಿರ್ಧಾರ ಮಾಡಿದೆ. ಈ ಮಾತನ್ನು ಖುದ್ದು ಝೊಮ್ಯಾಟೊ ಕಂಪನಿಯ ಸಿಇಓ ದೀಪೇಂದ್ರ ಗೊಯಲ್ ಅವರೇ ಹೇಳಿದ್ದಾರೆ.

ಇದನ್ನೂ ಓದಿ: ನಾಳೆ ಭಾರತ್ ಬಂದ್‌ಗೆ ಕರೆ.. ಪ್ರತಿಭಟನೆಗೆ ಯಾರೆಲ್ಲಾ ಬೆಂಬಲ? ಶಾಲಾ-ಕಾಲೇಜುಗಳು ಬಂದ್​?

ಆಹಾರ ಮತ್ತು ಖಾದ್ಯಗಳ ಫೋಟೋಗಳನ್ನು ಈ ಮೊದಲು ಎಐನಿಂದ ಸೃಷ್ಟಿಸಿ ಅಪ್​ಲೋಡ್ ಮಾಡಲಾಗುತ್ತಿತ್ತು. ಇದರಿಂದಾಗಿ ಗ್ರಾಹಕರಿಗೆ ಅನೇಕ ರೀತಿಯ ತೊಂದರೆಗಳಾಗಿವೆ. ನೂರಾರು ದೂರುಗಳು ಬಂದಿವೆ. ಹೀಗಾಗಿ ಇನ್ನು ಮುಂದೆ ಝೊಮ್ಯಾಟೊದಲ್ಲಿ ಎಐ ರಚಿತ ಆಹಾರ ಮತ್ತು ಖಾದ್ಯಗಳ ಫೋಟೋಗಳನ್ನು ಹಾಕುವುದಿಲ್ಲ ಎಂದು ದೀಪೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ನಾಳೆ ಭಾರತ್ ಬಂದ್.. ಮುಷ್ಕರಕ್ಕೆ ಕಾರಣವೇನು? ಶಾಲೆಗಳಿಗೆ ರಜೆ ಇರುತ್ತಾ? ಏನಿರುತ್ತೆ? ಏನಿರಲ್ಲ?

ಇದು ಕೇವಲ ಹೋಟೆಲ್ ಹಾಗೂ ಗ್ರಾಹಕರ ನಡುವಿನ ಸಂಘರ್ಷವಲ್ಲ. AI ನಿರ್ಮಿತ ಫೋಟೋಗಳಿಂದಾಗಿ ರಿಫಂಡ್​​ಗಳು ಹೆಚ್ಚಾಗುತ್ತಿವೆ. ಕಸ್ಟಮರ್​ಗಳಿಂದ ಬರುತ್ತಿದ್ದ ರೇಟಿಂಗ್ಸ್​ನಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಾಣುತ್ತಿದೆ ಈ ಕಾರಣದಿಂದಾಗಿ ಇನ್ಮುಂದೆ AI ರಚಿತ ಫೋಟೋಗಳನ್ನು ನಾವು ಬಳಸುವುದಿಲ್ಲ ಹಾಗೂ ನಮ್ಮೊಂದಿಗೆ ಪಾಲುದಾರರಾಗಿರುವ ಹೋಟೆಲ್ ರೆಸ್ಟೋರೆಂಟ್​ಗಳಿಗೂ ಕೂಡ ಈ ಸೂಚನೆಯನ್ನು ನೀಡುತ್ತೇವೆ ಎಂದು ಗೊಯಲ್ ಹೇಳಿದ್ದಾರೆ.

ಕಳೆದ ವರ್ಷದಿಂದಲೇ ಝೊಮ್ಯಾಟೊ ಫೋಟೋಗಳನ್ನ ಎಐ ಸಹಾಯದಿಂದ ಪಡೆದುಕೊಳ್ಳುತ್ತಿತ್ತು. ಗ್ರಾಹಕರನ್ನ ಆಕರ್ಷಿಸಲು ಹಾಗೂ ಬೇರೆ ಗುಣಮಟ್ಟದ ಆಹಾರ ಮತ್ತು ಖಾದ್ಯಗಳ ಫೋಟೋಗಳನ್ನು ಪ್ರಸ್ತುಪಡಿಸುವ ಉದ್ದೇಶ ಇದಾಗಿತ್ತು. ಆದ್ರೆ AI ಫೋಟೋಗಳು ಹಲವು ರೀತಿಯಲ್ಲಿ ಗ್ರಾಹಕರನ್ನು ದಿಕ್ಕು ತಪ್ಪಿಸಿವೆ. ಹೀಗಾಗಿ AI ನಿರ್ಮಿತ ಆಹಾರದ ಫೋಟೋಗಳನ್ನು ಬಳಸದಿರಲು ಝೊಮ್ಯಾಟೊ ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಇದೆಂಥಾ ಯಡವಟ್ಟು.. ರೊಚ್ಚಿಗೆದ್ದ ಗ್ರಾಹಕರಿಂದ ಬುದ್ಧಿ ಕಲಿತ ಝೊಮ್ಯಾಟೊ ಕಂಪನಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/08/Zomato-Delivery.jpg

Load More