/newsfirstlive-kannada/media/post_attachments/wp-content/uploads/2024/07/ABHISHEK_SHARMA-1.jpg)
ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಅಭಿಷೇಕ್ ಶರ್ಮಾ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಸಿಡಿಲಬ್ಬರದ ಬ್ಯಾಟಿಂಗ್ಗೆ ಜಿಂಬಾಬ್ವೆ ಬೌಲರ್ಸ್ ಆಟ ನಡೆಯಲಿಲ್ಲ. ಯಂಗ್ ಪ್ಲೇಯರ್ ಅಭೀಷೇಕ್ ಶರ್ಮಾ ಹ್ಯಾಟ್ರಿಕ್ ಸಿಕ್ಸ್ ಬಾರಿಸೋ ಮೂಲಕ ಸೆಂಚುರಿ ಸಿಡಿಸಿರುವುದು ದಾಖಲೆಯಾಗಿದೆ.
ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!
ಹರಾರೆಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಓಪನರ್ ಶುಭ್ಮನ್ ಗಿಲ್ ಬೇಗ ಔಟ್ ಆದರು. ಇನ್ನೊಂದೆಡೆ ಕ್ರೀಸ್ ಕಾಯ್ದುಕೊಂಡಿದ್ದ ಅಭೀಷೇಕ್ ಶರ್ಮಾ ಎದೆಗುಂದಲಿಲ್ಲ. ಐಪಿಎಲ್ನಲ್ಲಿ ಆಡಿದಂತೆ ತನ್ನ ಬಿರುಸಿನ ಬ್ಯಾಟಿಂಗ್ಗೆ ಮುನ್ನೂಡಿ ಬರೆದರು. ಸ್ಟೇಡಿಯಂನ ದಿಕ್ಕು ದಿಕ್ಕುಗಳಲ್ಲೂ ಅಭೀಷೇಕ್ ಶರ್ಮಾ ಸಿಕ್ಸರ್, ಬೌಂಡರಿಗಳ ಅಭಿಷೇಕ ಮಾಡಿದರು. ಯಂಗ್ ಬ್ಯಾಟ್ಸ್ಮನ್ನ ಬಲಿಷ್ಠ ಬ್ಯಾಟಿಂಗ್ಗೆ ಜಿಂಬಾಬ್ವೆ ಬೌಲರ್ಸ್ ಒಂದೊಂದು ಬಾಲ್ ಹಾಕಬೇಕೆಂದರು ತಲೆ ಕೆಡಿಸಿಕೊಂಡಿದ್ದರು. ಆ ಮಟ್ಟಿಗೆ ನಿನ್ನೆ ಅಭೀಷೇಕ್ ಘರ್ಜನೆ ಇತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?
ABHISHEK SHARMA HUNDRED MOMENT. ?
- 6,6,6 when Abhishek was batting on 82* ? pic.twitter.com/0OubKlnauI
— Johns. (@CricCrazyJohns)
ABHISHEK SHARMA HUNDRED MOMENT. 🤯
- 6,6,6 when Abhishek was batting on 82* 🔥 pic.twitter.com/0OubKlnauI— Johns. (@CricCrazyJohns) July 7, 2024
">July 7, 2024
ಈ ಪಂದ್ಯದಲ್ಲಿ ವಿಶೇಷತೆ ಎಂದರೆ ಅಭಿಷೇಕ್ ಶರ್ಮಾ ಸೆಂಚುರಿ ಹೊಸ್ತಿಲಲ್ಲಿ ಇದ್ದು 82 ರನ್ ಗಳಿಸಿದ್ದರು. ಈ ವೇಳೆ ಜಿಂಬಾಬ್ವೆ ಪರ ಬೌಲಿಂಗ್ ಮಾಡಲು ಬಂದ ಮಸಕಡ್ಜಾ ಅವರ 2ನೇ ಬಾಲ್ ಅನ್ನು ಬಿಗ್ ಸಿಕ್ಸರ್ ಬಾರಿಸಿದರು, 3ನೇ ಬಾಲ್ ಅನ್ನು ಲೆಗ್ಸೈಡ್ ಲಾಂಗ್ ಆಫ್ನಲ್ಲಿ ಸಿಕ್ಸ್ ಹೊಡೆದರು. ಇದಾದ ಬಳಿಕ 4ನೇ ಬಾಲ್ ಅನ್ನು ಲೆಗ್ಸೈಡ್ ಸ್ಲಿಪ್ ಮೇಲೆ ಬಾರಿಸಿದ ಎಸೆತ ನೇರ ಬೌಂಡರಿ ಗೆರೆ ದಾಟಿ ಬಿದ್ದಿತು. ತಕ್ಷಣವೇ ಎರಡು ಕೈಗಳನ್ನ ಮೇಲೆತ್ತಿ ಅಭಿಷೇಕ್ ತಮ್ಮ ಮೊದಲ ಶತಕವನ್ನು ಸಂಭ್ರಮಿಸಿ, ಘರ್ಜಿಸಿದರು. ಹ್ಯಾಟ್ರಿಕ್ ಸಿಕ್ಸ್ಗಳ ಮೂಲಕ ಅಭಿಷೇಕ್ ತಮ್ಮ ಮೊದಲ ಟಿ20 ಪಂದ್ಯದ ಸೆಂಚುರಿ ಗಳಿಸಿ ದಾಖಲೆ ಬರೆದರು. 47 ಬಾಲ್ಗಳನ್ನ ಎದುರಿಸಿದ್ದ ಅಭಿಷೇಕ್ 7 ಬೌಂಡರಿ, 8 ಬಲಿಷ್ಠ ಸಿಕ್ಸರ್ಗಳ ಸಮೇತ 100 ರನ್ ಗಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ