ಅಭಿಶೇಕ್ ಶರ್ಮಾ ನಿನ್ನೆ ಯಾರ ಬ್ಯಾಟ್ನಲ್ಲಿ ಆಡಿದ್ದರು ಗೊತ್ತಾ..?
ಜಿಂಬಾಬ್ವೆ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿರುವ ಅಭಿಶೇಕ್ ಶರ್ಮಾ
100 ರನ್ಗಳ ಅಂತರದಿಂದ ಗೆಲುವು ಸಾಧಿಸಿರುವ ಭಾರತ ತಂಡ
ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಕ್ರಿಕೆಟರ್ ಅಭಿಶೇಕ್ ಶರ್ಮಾ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಟೀಮ್ ಇಂಡಿಯಾಗೆ ಡೆಬ್ಯೂಟ್ ಮಾಡಿದ 2ನೇ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇನ್ನಿಂಗ್ಸ್ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್ಗಳ ಬೆಂಡೆತ್ತಿದ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ತಾವು ಎದುರಿಸಿದ ಕೇವಲ 47 ಬಾಲ್ನಲ್ಲಿ ಬರೋಬ್ಬರಿ 8 ಸಿಕ್ಸರ್, 7 ಫೋರ್ ಜತೆಗೆ 100 ರನ್ ಚಚ್ಚಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸಮನ್ ಸಿಕ್ಕಂತಾಗಿದೆ.
ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಯಲ್ಲಿ ಇಲಿ ಜ್ವರ, ಭಾರೀ ಆತಂಕ.. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ದೌಡು
ಪಂದ್ಯ ಮುಗಿದ ಬಳಿಕ ತಮ್ಮ ಶತಕಕ್ಕೆ ಕಾರಣವಾಗಿದ್ದು ಗಿಲ್ ಅವರ ಬ್ಯಾಟ್ ಎಂದಿದ್ದಾರೆ. ನಾನು ಇವತ್ತು ಗಿಲ್ ಅವರ ಬ್ಯಾಟ್ ಪಡೆದುಕೊಂಡು ಆಡಿದೆ. ಅದನ್ನು ಮೊದಲೂ ಮಾಡಿದ್ದೆ. ನನಗೆ ಯಾವಾಗ ರನ್ ಅಗತ್ಯ ಇದೆಯೋ ಆಗೆಲ್ಲ ನಾನು ಅವರಿಂದ ಬ್ಯಾಟ್ ಕೇಳುತ್ತೇನೆ ಎಂದು ಅಭಿಶೇಕ್ ಶರ್ಮಾ ಹೇಳಿದ್ದಾರೆ.
ಅಭಿಶೇಕ್ ಶರ್ಮಾ ಮೂಲತಃ ಪಂಜಾಬ್. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಓಪನರ್ ಆಗಿ ಬರುತ್ತಿದ್ದ ಅಭಿಶೇಕ್ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದರು. ಇವರನ್ನು ಜಿಂಬಾಬ್ವೆ ವಿರುದ್ಧದ 5 ಟಿ20 ಪಂದ್ಯಗಳ ಟೂರ್ನಿಗೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:KRS ಡ್ಯಾಮ್ಗೆ ಬಂತು ಭರ್ಜರಿ ಒಳಹರಿವು.. ಡ್ಯಾಂ ನೀರಿನ ಮಟ್ಟ 102 ಅಡಿಗೆ ಏರಿಕೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್