newsfirstkannada.com

Breaking: ಎರಡು ರೈಲುಗಳ ಮಧ್ಯೆ ಅಪಘಾತ.. ಪಲ್ಟಿ ಹೊಡೆದ ಒಂದು ಟ್ರೈನ್

Share :

Published June 2, 2024 at 9:20am

Update June 2, 2024 at 9:23am

    ಮುಂಜಾನೆ 4 ಗಂಟೆ ಸುಮಾರಿಗೆ ರೈಲುಗಳ ಮಧ್ಯೆ ಅಪಘಾತ

    ರೈಲು ಡಿಕ್ಕಿ ಹೊಡೆಯುತ್ತಿದ್ದಂತೆ ಗಾಬರಿಗೊಂಡ ಪ್ರಯಾಣಿಕರು

    ಸ್ಥಳಕ್ಕೆ ಜಿಆರ್‌ಪಿ ಮತ್ತು ಆರ್‌ಪಿಎಫ್‌ನ ಹಿರಿಯ ಅಧಿಕಾರಿ​ ಭೇಟಿ

ಚಂಡೀಗಢ: ಗೂಡ್ಸ್ ಹಾಗೂ ಪ್ರಯಾಣಿಕರ ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿರೋ ಘಟನೆ ಫತೇಘರ್ ಸಾಹಿಬ್‌ನಲ್ಲಿ ನಡೆದಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.

ಇದನ್ನೂ ಓದಿ: Axis My India ಎಕ್ಸಿಟ್​ ಪೋಲ್​​​ನಲ್ಲಿ ಅಚ್ಚರಿ ಫಲಿತಾಂಶ.. ಅಣ್ಣಾಮಲೈಗೆ ಶಾಕ್..!

ಗೂಡ್ಸ್ ರೈಲು ಏಕಾಏಕಿ ಪಲ್ಟಿಯಾಗಿ ಪಕ್ಕದ ಹಳಿಯ ಮೇಲೆ ಬಿದ್ದಿದೆ. ಇದೇ ವೇಳೆ ಪಕ್ಕದ ಹಳಿಯಲ್ಲಿ ಸಾಗುತ್ತಿದ್ದ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ರೈಲನ್ನು ಓಡಿಸುವ ಚಾಲಕರು ಗಾಯಗೊಂಡಿದ್ದಾರೆ. ಆ ಕೂಡಲೇ ಅವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರೈಲು ಡಿಕ್ಕಿ ಹೊಡೆಯುತ್ತಿದ್ದಂತೆ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಕೂಡಲೇ ಘಟನಾ ಸ್ಥಳಕ್ಕೆ ಅಂಬಾಲಾ ವಿಭಾಗದ ಡಿಆರ್‌ಎಂ ಜೊತೆಗೆ ರೈಲ್ವೆ, ಜಿಆರ್‌ಪಿ ಮತ್ತು ಆರ್‌ಪಿಎಫ್‌ನ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಎರಡು ರೈಲುಗಳ ಮಧ್ಯೆ ಅಪಘಾತ.. ಪಲ್ಟಿ ಹೊಡೆದ ಒಂದು ಟ್ರೈನ್

https://newsfirstlive.com/wp-content/uploads/2024/06/train-accident.jpg

Load More