/newsfirstlive-kannada/media/post_attachments/wp-content/uploads/2024/06/ANNAMALAI-1.jpg)
ಭಾರತ ದೇಶದ ಪ್ರಜಾಪ್ರಭುತ್ವ ಯುದ್ಧ ಮುಗಿದಿದೆ ಯಾರ್​ ಗೆದ್ರು.. ಯಾರ್​ ಸೋತ್ರು.. ಅನ್ನೋದು ನಾಳೆಯಲ್ಲ ನಾಡಿದ್ದು ಗೊತ್ತಾಗುತ್ತೆ.. ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಕ್ಷೇತ್ರಗಳು ಭಾರೀ ಸದ್ದು ಮಾಡಿದ್ವು.. ಅದರಲ್ಲೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಹಾಸದ ಪ್ರಜ್ವಲ್​ ರೇವಣ್ಣ, ಬಾಲಿವುಡ್​ನಿಂದ ಲೋಕ ಕದನಕ್ಕೆ ಇಳಿದಿದ್ದ ಕಂಗಾನಾ ಗಮನ ಸೆಳೆದಿದ್ದರು. ಆದ್ರೆ ಌಕ್ಸಿಸ್​ ಮೈ ಇಂಡಿಯಾ ಎಕ್ಸಿಟ್​ ಪೋಲ್​​​ನಲ್ಲಿ ಅಚ್ಚರಿ ಫಲಿತಾಂಶ ಬಂದಿದೆ.
ಅಣ್ಣಾಮಲೈ ಸೋಲುವ ಭವಿಷ್ಯ ನುಡಿದ ಇಂಡಿಯಾ ಟುಡೇ
361-401 ಕ್ಷೇತ್ರಗಳಲ್ಲಿ NDA ಗೆಲ್ಲಲಿದೆ ಎಂದ ಸಮೀಕ್ಷೆಯನ್ನ ಌಕ್ಸಿಸ್​ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಆದ್ರೆ ತಮಿಳುನಾಡು ಬಿಜೆಪಿ ಫೈರ್​ ಬ್ರ್ಯಾಂಡ್​​ ಆಗಿರೋ ​​ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಇದೇ ಌಕ್ಸಿಸ್​ ಮೈ ಇಂಡಿಯಾ ಸಮೀಕ್ಷೆ ಶಾಕ್​​ ನೀಡಿದೆ. ಕೋಯ್​ಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಅಣ್ಣಾಮಲೈ ಸೋಲು ಕಾಣಲಿದ್ದಾರೆ. ಅಣ್ಣಾಮಲೈ ವಿರುದ್ಧ ಡಿಎಂಕೆ ಅಭ್ಯರ್ಥಿ ಪಿ.ಗಣಪತಿ ರಾಜಕುಮಾರ್​ ಗೆಲ್ಲುವ ನಿರೀಕ್ಷೆ ಌಕ್ಸಿಸ್​ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಈ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವನ್ನು ತಿರಸ್ಕರಿಸಿದ್ದು, ನಿಮಗೆ ಅಚ್ಚರಿಯ ಫಲಿತಾಂಶ ನೀಡಲು ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್​ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!
ಪ್ರಜ್ವಲ್​​ ರೇವಣ್ಣಗೆ ಮತ್ತೊಮ್ಮೆ ದಕ್ಕಲಿದೆ ಸಿಂಹಾಸನ
ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಇತ್ತು. ಌಕ್ಸಿಸ್​ ಮೈ ಇಂಡಿಯಾ ಎಕ್ಸಿಟ್​ ಪೋಲ್​ ಪ್ರಕಾರ ಪ್ರಜ್ವಲ್ ರೇವಣ್ಣಗೆ ಹಾಸನ ಸಿಂಹಾಸನ ಮತ್ತೊಮ್ಮೆ ದಕ್ಕಲಿದೆ ಎಂದು ಹೇಳಿದೆ. ಕಾಂಗ್ರೆಸ್​​ ಅಭ್ಯರ್ಥಿ ಶ್ರೇಯಸ್​​ ಪಟೇಲ್​​ ವಿರುದ್ಧ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದಿದೆ. ಎಲೆಕ್ಷನ್​​ ಮುನ್ನ ಪೆನ್​ಡ್ರೈವ್​ ಹಂಚಿಕೆಯಾದ್ರೂ, ಅದರಿಂದ ಯಾವುದೇ ಎಫೆಕ್ಟ್​​ ಆಗಿಲ್ಲ ಎಂಬ ಲೆಕ್ಕಾಚಾರವನ್ನ ಹೊರಗಿಟ್ಟಿದೆ.
/newsfirstlive-kannada/media/post_attachments/wp-content/uploads/2024/06/PRAJWAL.jpg)
‘ಕೈ’ ಕೋಟೆಯನ್ನ ಛಿದ್ರಮಾಡ್ತಾರಾ ರಾಜೀವ್ ಚಂದ್ರಶೇಖರ್?
ಇತ್ತ ಕೇರಳದ ತಿರುವನಂತಪುರಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಮತ್ತು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಮಧ್ಯೆ ಬಿಗ್ ಫೈಟ್ ಇದೆ. 2009ರಿಂದ ತಿರುವನಂತಪುರಂ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡು, ಅಂದಿನಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಕಾಂಗ್ರೆಸ್​ ಶಶಿ ತರೂರ್‌ಗೆ ಈಗ ಬಿಜೆಪಿಯ ರಾಜೀವ್ ಚಂದ್ರಶೇಖರ್ ಭಾರೀ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನ ರಾಜೀವ್ ಚಂದ್ರಶೇಖರ್ ಛಿದ್ರ ಮಾಡುವ ಸಾಧ್ಯತೆ ಇದೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇ ಭವಿಷ್ಯ ನುಡಿದಿದೆ.
ಬಾಲಿವುಡ್​​ ಬೆಡಗಿ ಕಂಗನಾ​​ಗೆ ವಿಜಯಮಾಲೆ ಪಕ್ಕಾ?
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಲಿವುಡ್​​ ಬೆಡಗಿ ಕಂಗನಾ​ ಗೆಲ್ಲುವ ಸಾಧ್ಯತೆ ಎಂದು ಌಕ್ಸಿಸ್​ ಮೈ ಇಂಡಿಯಾ ಹೇಳಿದೆ. ಹಿಲ್​ ಸ್ಟೇಷನ್​ನಲ್ಲಿ ಕಾಂಗ್ರೆಸ್​​ಗೆ ಶಾಕ್​​ ಕೊಟ್ಟು, 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್​ ಪುತ್ರ ವಿಕ್ರಮಾದಿತ್ಯ ಸಿಂಗ್​ ವಿರುದ್ಧ ಗೆಲುವು ಸಾಧಿಸಿ ವಿಜಯಮಾಲೆಯನ್ನ ಕಂಗನಾ ಧರಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.
/newsfirstlive-kannada/media/post_attachments/wp-content/uploads/2024/05/Kangana-2.jpg)
ಅತ್ತ ಪಂಜಾಬ್​​ನಲ್ಲಿ ಭಾರೀ ನಿರೀಕ್ಷೆಯಲ್ಲಿದ್ದ ಕೇಜ್ರಿವಾಲ್​ ಪಕ್ಷಕ್ಕೆ ಆಪ್​ಗೆ ಸರ್ವೇ ಶಾಕ್ ಕೊಟ್ಟಿದೆ. ರೈತ ಹೋರಾಟದ ನಡುವೆಯೂ ಬಿಜೆಪಿ ಚೇತರಿಕೆ ಭವಿಷ್ಯ ನುಡಿದಿದ್ದು, ಪಂಜಾಬ್​ನಲ್ಲಿ 7 ರಿಂದ 9 ಸ್ಥಾನ ಗೆಲ್ಲುವ ಭವಿಷ್ಯವನ್ನ ಸಮೀಕ್ಷೆ ನುಡಿದಿದೆ.. ಅದೇನೆ ಇರಲಿ ತೀವ್ರ ಕುತೂಹಲ.. ಭಾರೀ ಗದ್ದಲ ಸೃಷ್ಟಿಸಿದ್ದ 2024ರ ಲೋಕಸಭಾ ಚುನಾವನೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಎದೆಬಡಿತ ಹೆಚ್ಚಾಗಿದ್ದು, ಜೂನ್​ 4ರತ್ತ ಎಲ್ಲರ ಚಿತ್ತ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us