newsfirstkannada.com

ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್​ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!

Share :

Published June 2, 2024 at 6:56am

    ಭಾರತ ಮತ್ತು ಬಾಂಗ್ಲಾದೇಶದ ನಡುವೆ ಅಭ್ಯಾಸ ಪಂದ್ಯ

    ಐದು ವಿಕೆಟ್ ಕಳೆದುಕೊಂಡು 182 ರನ್​ಗಳಿಸಿದ್ದ ಭಾರತ

    60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಟೀಂ ಇಂಡಿಯಾ

ಟಿ20 ವಿಶ್ವಕಪ್ ಆಡಲು ಅಮೆರಿಕಗೆ ತೆರಳಿರುವ ಭಾರತ ತಂಡವು ನಿನ್ನೆಯ ದಿನ ಬಾಂಗ್ಲಾದೇಶದ ಜೊತೆ ಅಭ್ಯಾಸ ಪಂದ್ಯವನ್ನು ಆಡಿತು. ಬಾಂಗ್ಲಾ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ ರೋಹಿತ್ ಪಡೆ.

ನಿಗದಿತ 20 ಓವರ್​ನಲ್ಲಿ ಐದು ವಿಕೆಟ್ ಕಳೆದುಕೊಂಡ ಭಾರತ 182 ರನ್​ ಕಲೆ ಹಾಕಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 23, ರಿಷಬ್ ಪಂತ್ 53, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ 40 ರನ್​ಗಳ ಕಾಣಿಕೆ ನೀಡಿದರು.

183 ರನ್​ಗಳ ಗುರಿ ಬೆನ್ನು ಹತ್ತಿದ್ದ ಬಾಂಗ್ಲಾದೇಶ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್​ಗಳಿಸಿ ಸೋಲಿಗೆ ಶರಣಾಯ್ತು. ಬೌಲಿಂಗ್​ನಲ್ಲಿ ಅರ್ಷ್​​ದೀಪ್ ಸಿಂಗ್, ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಅಕ್ಸರ್ ಪಟೇಲ್, ಬೂಮ್ರಾ, ಸಿರಾಜ್, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ:ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್​ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!

https://newsfirstlive.com/wp-content/uploads/2024/06/ROHIT-9.jpg

Load More