Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು

author-image
Ganesh
Updated On
Accident: ಬೆಳ್ಳಂಬೆಳಗ್ಗೆ ಓಮ್ನಿ-ಕಾರು ಮಧ್ಯೆ ಭೀಕರ ಅಪಘಾತ.. ಓರ್ವ ಸಾವು
Advertisment
  • ಅಪಘಾತದಲ್ಲಿ ಅಜಯ್ (21) ಎಂಬ ಯುವಕ ಸಾವು
  • ದುರ್ಘಟನೆಯಲ್ಲಿ ಇಬ್ಬರು ಸಣ್ಣಪುಟ್ಟ ಗಾಯ
  • ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಶಿವಮೊಗ್ಗ: ಬೆಳ್ಳಂಬೆಳಿಗ್ಗೆ ಆನಂದಪುರ ಬಳಿ ರಸ್ತೆ ಓಮ್ನಿ ಹಾಗೂ ಟಾಟಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಅಜಯ್ (21) ಎಂಬ ಯುವಕ ಸಾವನ್ನಪ್ಪಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ದುರ್ಘಟನೆ ಸಂಭವಿಸಿದೆ. ಜೋಗದಿಂದ ಶಿವಮೊಗ್ಗ ಕಡೆ ಬರುತ್ತಿದ್ದ ಓಮ್ನಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರು ಸಾಗರದ ಕಡೆ ಹೊರಟಿತ್ತು. ಓಮ್ನಿಯಲ್ಲಿ ಇಬ್ಬರು, ಟಾಟಾ ಕಂಪನಿಯ ಕಾರಿನಲ್ಲಿ ಒಬ್ಬರು ಇದ್ದರು.

ಓಮ್ನಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಇಬ್ಬರು ಗಾಯಾಳನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment