newsfirstkannada.com

ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!

Share :

Published June 8, 2024 at 11:07am

  ಟಿ20 ವಿಶ್ವಕಪ್​​ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಫೈಟ್

  ಅಮೆರಿಕ ಎದುರು ಸೋತು ಸುಣ್ಣವಾಗಿರುವ ಪಾಕ್

  ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಭಾರತ

ಇಂಡೋ ಪಾಕ್ ಮ್ಯಾಚ್​ಗೆ ಕೌಂಟ್​ಡೌನ್ ಶುರುವಾಗಿದೆ. ಬದ್ಧವೈರಿಗಳ ಮುಖಾಮುಖಿಯಲ್ಲಿ ಯಾರ್​ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಮೊದಲ ಪಂದ್ಯ ಸೋತಿರುವ ಪಾಕ್​​, ಟೀಮ್ ಇಂಡಿಯಾ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕಾಗಿ ಪಾಕ್, ಹೊಸ ಗೇಮ್​​ ಪ್ಲಾನ್​ನೊಂದಿಗೆ ಕಣಕ್ಕಿಳಿಯುತ್ತಿದೆ.

ಭಾರತ, ಪಾಕ್​ ನಡುವಿನ ಹೈವೋಲ್ಟೇಜ್​ಗೆ ಜಸ್ಟ್​ ಒಂದೇ ಒಂದು ದಿನ ಬಾಕಿಯಿದೆ. ಪ್ರತಿಷ್ಠಿತ ಪಂದ್ಯ ಗೆಲ್ಲೋದೇ ಉಭಯ ತಂಡಗಳ ಪರಮ ಗುರಿಯಾಗಿದೆ. ಇದಕ್ಕಾಗಿ ನಾನಾ ತಂತ್ರಗಳನ್ನೇ ಹೆಣೆಯುತ್ತಿವೆ. ಅಮೆರಿಕಾ ಎದುರು ಸೋತಿರುವ ಪಾಕ್​​, ಈ ವಿಚಾರದಲ್ಲಿ ಒಂದೆಜ್ಜೆ ಮುಂದಿದೆ.

ಇದನ್ನೂ ಓದಿ:ಜೆಡಿಎಸ್​​ಗೆ ಸಿಕ್ಕೇಬಿಟ್ರು ಮುಂದಿನ ಉತ್ತರಾಧಿಕಾರಿ..? ಚುನಾವಣಾ ಫಲಿತಾಂಶ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!

ಹೌದು! ಅಮೆರಿಕಾ ಎದುರು ಮುಗ್ಗರಿಸಿರುವ ಪಾಕ್​ಗೆ, ಟೀಮ್ ಇಂಡಿಯಾ ಎದುರಿನ ಪಂದ್ಯ ಡು ಆರ್ ಡೈ ಆಗಿದೆ. ಇದೊಂದು ಪಂದ್ಯ ಸೋತ್ರೇ ಟಿ20 ವಿಶ್ವಕಪ್​ನಿಂದ ಬಹುತೇಕ ಹೊರಬೀಳುತ್ತೆ. ಹೀಗಾಗಿ ಶತಯ ಗತಾಯ ಗೆಲ್ಲೋಕೆ ಪಣ ತೊಟ್ಟಿರುವ ಪಾಕ್, ಟೀಮ್ ಇಂಡಿಯಾದ ಓರ್ವ ಬ್ಯಾಟರ್​​​ನ ಟಾರ್ಗೆಟ್ ಮಾಡಲು ಹೊರಟಿದೆ.

ರೋಹಿತ್-ಕೊಹ್ಲಿ ಅಲ್ಲ.. ಸೂರ್ಯನೇ ಟಾರ್ಗೆಟ್​..!
ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಪಾಕ್​ ಪಾಲಿಗೆ ಬಿಗ್ ಥ್ರೆಟ್ ಆಗ್ತಾರೆ ಅನ್ನೋದು ಎಲ್ಲರ ನಿರೀಕ್ಷೆ. ಆದ್ರೆ, ಪಾಕ್ ದೃಷ್ಟಿ ಮಾತ್ರ ರೋಹಿತ್ ಶರ್ಮಾ ಆ್ಯಂಡ್​ ವಿರಾಟ್​ ಕೊಹ್ಲಿ ಹೊರತಾಗಿ ಸೂರ್ಯ ಮೇಲೆ ಬಿದ್ದಿದೆ. ಟಿ20 ಸ್ಪೆಷಲಿಸ್ಟ್​ ಬಗ್ಗೆನೇ ಕ್ಯಾಪ್ಟನ್​ ಬಾಬರ್ ಆ್ಯಂಡ್ ಕೋಚ್ ಗ್ಯಾರಿ ಕಸ್ಟ್ರನ್ ತಲೆ ಕಡೆಸಿಕೊಂಡಿದ್ದಾರೆ. ಇದಕ್ಕಾಗಿ ಟೀಮ್ ಮೀಟಿಂಗ್​ನಲ್ಲಿ ಬಿಸಿಬಿಸಿ ಚರ್ಚೆ ನಡೆಸಿರುವ ಪಾಕ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​, ಸೂರ್ಯ ಆಟಕ್ಕೆ ಬ್ರೇಕ್ ಹಾಕಲು ಬಾರೀ ರಣತಂತ್ರ ರೂಪಿಪಿಸಿದೆ. ಇದಕ್ಕೆ ಕಾರಣ ಸೂರ್ಯನ ಬ್ಯಾಟಿಂಗ್​.

ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. ಇಲ್ಲಿಯೂ ಭಾರತೀಯರದ್ದೇ ದರ್ಬಾರ್..!

ಪಾಕ್​​ ಪಾಲಿಗೆ ಸೂರ್ಯನೇ ಟಾರ್ಗೆಟ್ ಏಕೆ..?
ಸೂರ್ಯ.. ಟಿ20 ಕ್ರಿಕೆಟ್​ನ ಮೋಸ್ಟ್ ಡೇಂಜರಸ್ ಬ್ಯಾಟರ್​. ಕ್ರೀಸ್​ನ ಇರುವಷ್ಟು ತನಕ ಹೊಡಿಬಡಿ ಆಟಕ್ಕೆ ಮುಂದಾಗುವ ಸೂರ್ಯ, ಎದುರಾಳಿ ಪಾಲಿಗೆ ವಿಲನ್ ಆಗಿ ಕಾಡ್ತಾರೆ. ಬೌಲರ್​ಗಳ ಲೆಕ್ಕಚಾರಗಳನ್ನ ಉಲ್ಟಾ ಮಾಡುವ ಸೂರ್ಯ, ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್.. ಹೀಗಾಗಿಯೇ ಸೂರ್ಯಗೆ ಬ್ರೇಕ್ ಹಾಕುವುದೇ ಪಾಕ್​​ನ ಅಜೆಂಡಾ.

3 ಓವರ್ ಕ್ರೀಸ್​ನಲ್ಲಿ ಉಳಿದ್ರೆ 50 ರನ್ ಗಡಿ ದಾಟುತ್ತೆ
ಸೂರ್ಯ ಪಕ್ಕ ಮಾಸ್​ ಬ್ಯಾಟರ್. ಜಸ್ಟ್ ಕ್ರೀಸ್​ಗೆ ಎಂಟ್ರಿ ನೀಡುತ್ತಿದ್ದಂತೆ ಅಷ್ಟು ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸ್ತಾರೆ. ಜಸ್ಟ್​ ಮೂರು ಓವರ್ ಕ್ರೀಸ್​ನಲ್ಲಿ ಉಳಿದ್ರೆ ಸಾಕು, 200 ಪ್ಲಸ್​ ಸ್ಟ್ರೈಕ್​ರೇಟ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಸುಮಾಮಿ ಸೃಷ್ಟಿಸಿಬಿಡ್ತಾರೆ. ಹೀಗಾಗಿ ಸೂರ್ಯ ವಿಕೆಟ್ ಪಡೆಯಲು ಸೀಕ್ರೆಟ್ ಗೇಮ್ ರೂಪಿಸ್ತಿದೆ.

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

ಗೇಮ್ ಚೇಂಜರ್ ಅಂಡ್ ಫಿನಿಷರ್​..!
ಸೂರ್ಯ ಅಂದ್ರೆನೇ ಟಿ20 ಫಾರ್ಮೆಟ್​ನ ಬಾಪ್​. ಕ್ಷಣಾರ್ಧದಲ್ಲೇ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸೂರ್ಯ, ಕ್ರೀಸ್​ನಲ್ಲಿ ಇದ್ದಷ್ಟು ಹೊತ್ತು ಮೋಸ್ಟ್ ಡೇಂಜರಸ್. ಅಷ್ಟೇ ಅಲ್ಲ.! ಮ್ಯಾಚ್ ಗೆಲ್ಲಿಸಿಕೊಡೋದ್ರಲ್ಲಿ ಎರಡು ಮಾತೇ ಇಲ್ಲ. ಹೀಗಾಗಿ ಫಿನಿಷರ್ ಸೂರ್ಯನ ಆಟಕ್ಕೆ ಬ್ರೇಕ್ ಹಾಕಿದ್ರೆ, ಪಾಕ್​​ ಗೆಲುವಿನ ಹಾದಿ ಸುಲಭವಾಗುತ್ತೆ. ಇದೇ ಕಾರಣಕ್ಕೆ ಸೂರ್ಯಗೆ ಬ್ರೇಕ್ ಹಾಕಲು ಟೊಂಕಕಟ್ಟಿ ನಿಂತಿದೆ.

ಪಾಕ್ ಬೌಲಿಂಗ್​ ದಾಳಿ ಧ್ವಂಸ ಗ್ಯಾರಂಟಿ..!
ಅಟ್ಯಾಕಿಂಗ್ ಬ್ಯಾಟಿಂಗ್​​ಗೆ ಹೆಸರುವಾಸಿಯಾಗಿರುವ ಸೂರ್ಯ, ಘಟಾನುಘಟಿ ಬೌಲರ್​ಗಳ ಪಾಲಿನ ವಿಲನ್. ಎಂಥಹ ಬೌಲರ್​​​​​​​​​ ಆಗಿರಲಿ, ಸುಲಲಿತವಾಗಿ ಬ್ಯಾಟ್ ಬೀಸ್ತಾರೆ. ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸ್ತಾರೆ. ಈತ ಬ್ಯಾಟಿಂಗ್ ನಡೆಸಿದ್ರೆ, ಮುಗೀತು ಬೌಲರ್​​ ಮೈಂಡ್ ಬ್ಲಾಕ್ ಆಗುತ್ತೆ. ಕ್ಯಾಪ್ಟನ್ ಫೀಲ್ಡಿಂಗ್ ಸೆಟ್ ಮಾಡಬೇಕಾದ್ರೆ, ಹರಸಾಹಸವನ್ನೇ ಮಾಡಬೇಕಾಗುತ್ತೆ. ಹೀಗಾಗಿ ಸೂರ್ಯ ವಿಕೆಟ್ ಪಡೆಯೋದೇ ಪಾಕ್ ಟಾರ್ಗೆಟ್.

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?

ಸೂರ್ಯ ಇದ್ದಷ್ಟು ಹೊತ್ತು ಇತರರಿಗೆ ಫ್ರೀ ಹ್ಯಾಂಡ್​​..!
ಸೂರ್ಯ ಕ್ರೀಸ್​ನಲ್ಲಿದ್ರೆ, ಎದುರಾಳಿಗೆ ಟೆನ್ಶನ್. ಇತರೆ ಬ್ಯಾಟರ್​ಗಳಿಗೆ ಟೆನ್ಶನ್ ಫ್ರೀ. ಯಾಕಂದ್ರೆ, ಸೂರ್ಯನ ರೌದ್ರವತಾರದ ಬ್ಯಾಟಿಂಗ್ ಆ ಮಟ್ಟಕ್ಕಿರುತ್ತೆ. ಹೀಗಾಗಿ ಸೂರ್ಯ ವಿಕೆಟ್ ಪಡೆದು, ಇತರೆ ಬ್ಯಾಟರ್​ಗಳ ಮೇಲೆ ಒತ್ತಡ ಹೇರುವುದೇ ಪಾಕ್​ನ ಮೊದಲ ಧ್ಯೇಯವಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಕಾದುನೋಡಬೇಕಿದೆ.

ವಿಶೇಷ ವರದಿ: ಸಂತೋಷ್

ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!

https://newsfirstlive.com/wp-content/uploads/2024/06/KOHLI-PANT-ROHIT.jpg

Load More