newsfirstkannada.com

ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

Share :

Published June 8, 2024 at 7:22am

    ಟೀಂ ಇಂಡಿಯಾದ ಪ್ಲೇಯಿಂಗ್ 11 ಹಾಟ್ ಟಾಪಿಕ್..!

    ಮೊದಲ ಪಂದ್ಯದಲ್ಲೇ ಮಾಸ್ಟರ್​ ಸ್ಟ್ರೋಕ್ ಕೊಟ್ಟ ಟೀಮ್ ಇಂಡಿಯಾ

    ಬ್ಯಾಟಿಂಗ್ ಸ್ಟ್ರಾಟರ್ಜಿ ಮೂಲಕ ಹಲವರ ತಲೆಗೆ ಹುಳ ಬಿಟ್ಟಿದೆ

ಐರ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮಾಸ್ಟರ್​ ಸ್ಟ್ರೋಕ್ ನೀಡ್ತು. ಎಲ್ಲರ ನಿರೀಕ್ಷೆಗಳನ್ನ ಟೀಮ್ ಮ್ಯಾನೇಜ್​ಮೆಂಟ್​​ ತಲೆಕೆಳಗಾಗಿಸಿತು. ಈ ನ್ಯೂ ಬ್ಯಾಟಿಂಗ್ ಸ್ಟ್ರಾಟರ್ಜಿ ಹಲವರ ತಲೆಗೆ ಹುಳ ಬಿಟ್ಟಿದೆ. ಪಂತ್​ ಬಡ್ತಿಯ ಹಿಂದೆ ಭಾರೀ ಲೆಕ್ಕಚಾರವೇ ಅಡಗಿದೆ.

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಐರ್ಲೆಂಡ್ ತಂಡವನ್ನ ಬರೋಬ್ಬರಿ 8 ವಿಕೆಟ್​​ಗಳಿಂದ ಮಣಿಸಿರುವ ರೋಹಿತ್ ಪಡೆ, ಮುಂದಿನ ಪಂದ್ಯದತ್ತ ಚಿತ್ತ ನೆಟ್ಟಿದೆ. ಐರ್ಲೆಂಡ್​​​​​​​​​ ಎದುರಿನ ಟೀಮ್ ಇಂಡಿಯಾ ಸ್ಟ್ರಾಟರ್ಜಿ ಮಾತ್ರ, ವಿಶ್ವ ಕ್ರಿಕೆಟ್ ಲೋಕದ ಹಾಟ್​ ಟಾಪಿಕ್ ಆಗಿದೆ. ಹೌದು! ಐರ್ಲೆಂಡ್​ ಎದುರು ಟೀಮ್ ಇಂಡಿಯಾ ಮಾಸ್ಟರ್​ ಸ್ಟ್ರೋಕ್ ನೀಡ್ತು. ಪ್ಲೇಯಿಂಗ್​ ಇಲೆವೆನ್​ ಆಯ್ಕೆಯಲ್ಲಿ ಊಹೆಗೂ ನಿಲುಕದ ಸ್ಟೆಪ್ ತೆಗೆದುಕೊಂಡ ಮ್ಯಾನೇಜ್​​ಮೆಂಟ್​​ ನಡೆ, ಕ್ರಿಕೆಟ್ ಲೋಕದ ದಿಗ್ಗಜರನ್ನು ಬೆರಗಾಗಿಸಿತ್ತು. ಈ ಸ್ಟ್ರಾಟರ್ಜಿ ಟೀಮ್ ಇಂಡಿಯಾದ ಯಂಗ್ ಬ್ಯಾಟರ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. ಇಲ್ಲಿಯೂ ಭಾರತೀಯರದ್ದೇ ದರ್ಬಾರ್..!

ಜೈಸ್ವಾಲ್​​ಗೆ ಪ್ಲೇಯಿಂಗ್-XI​ನಲ್ಲಿ ನೋ ಪ್ಲೇಸ್​​
ಮೊದಲ ಪಂದ್ಯದಲ್ಲಿ ರೋಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸ್ತಾರೆ ಅಂತಾನೇ ಎಲ್ಲರ ನಿರೀಕ್ಷೆಯಾಗಿತ್ತು. ಇದಕ್ಕೆ ಬ್ರೇಕ್ ಹಾಕಿದ ಟೀಮ್ ಮ್ಯಾನೇಜ್​ಮೆಂಟ್, ಅನುಭವಿಗಳಾದ ರೋಹಿತ್​​ ಹಾಗೂ ಕೊಹ್ಲಿಯನ್ನ ಆರಂಭಿಕರಾಗಿ ಕಳುಹಿಸಿಕೊಡ್ತು. ಇದರೊಂದಿಗೆ ಟೀಮ್ ಮ್ಯಾನೇಜ್​ಮೆಂಟ್​, ಜೈಸ್ವಾಲ್​​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಇಲ್ಲ ಅನ್ನೋದು ಸ್ಪಷ್ಟವಾಗಿಸಿದೆ.

ಅಷ್ಟೇ ಅಲ್ಲ..! ಮೂರನೇ ಸ್ಲಾಟ್​​ನಲ್ಲಿ ಸೂರ್ಯ ಕಣಕ್ಕಿಳಿಯಬಹುದೆಂಬ ನಿರೀಕ್ಷೆಯೂ ಸುಳ್ಳಾಗಿಸಿದ ಮ್ಯಾನೇಜ್​ಮೆಂಟ್, ಲೆಫ್ಟಿ ಬ್ಯಾಟರ್ ರಿಷಭ್ ಪಂತ್​​ಗೆ ಪ್ರಮೋಷನ್ ನೀಡ್ತು. ಈ ಅವಕಾಶ ಎರಡು ಕೈಗಳಿಂದ ಬಾಚಿಕೊಂಡ ಪಂತ್, ಅದ್ಭುತ ಪ್ರದರ್ಶನ ನೀಡಿದರು. ಮ್ಯಾನೇಜ್​ಮೆಂಟ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ನಡೆಸಿದ ಪಂತ್, ಅಜೇಯ 36 ರನ್​ಗಳೊಂದಿಗೆ ಟೀಮ್ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ 3ನೇ ಸ್ಲಾಟ್​​​ಗೆ ರಿಷಭ್ ಪಂತ್ ಫಿಕ್ಸ್​.

ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?

ಪಂತ್ ಪ್ರಮೋಷನ್ ಹಿಂದಿದೆ ಮೇನ್ ರೀಸನ್..!
ರಿಷಭ್ ಪಂತ್.. ಬ್ಯಾಟಿಂಗ್ ಕ್ರಮಾಂಕ 4ರಿಂದ 6ನೇ ಕ್ರಮಾಂಕ. ಬಹುಪಾಲು ಈ ಕ್ರಮಾಂಕದಲ್ಲೇ ಬ್ಯಾಟ್​ ಬೀಸಿರುವ ಪಂತ್, ಗೇಮ್​ ಚೇಂಜರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮಿಡಲ್ ಓವರ್​ಗಳಲ್ಲಿ ರಿಷಬ್ ಪಂತ್​ರ ಬ್ಯಾಟಿಂಗ್ ಕುಸಿದಿದೆ. ಸ್ಪಿನ್ನರ್​​ಗಳ ಎದುರು ಪರದಾಡಿದ್ದಾರೆ. 4ರಿಂದ 6ನೇ ಕ್ರಮಾಂಕದ ಬ್ಯಾಟಿಂಗ್​ಗೆ ಹೋಲಿಕೆ ಮಾಡಿದ್ರೆ, 3ನೇ ಕ್ರಮಾಂಕದಲ್ಲಿ ಪಂತ್ ಪರಾಕ್ರಮ ಜೋರಾಗಿದೆ.

ಟಿ20 ಫಾರ್ಮೆಟ್​ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್
6 ಇನ್ನಿಂಗ್ಸ್​ಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿರುವ ಪಂತ್, 117 ರನ್ ಸಿಡಿಸಿದ್ದಾರೆ. 29.25ರ ಅವರೇಜ್​ನಲ್ಲಿ ರನ್ ಗಳಿಸಿರುವ ಪಂತ್, 127.17ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ. 4-6ನೇ ಕ್ರಮಾಂಕದಲ್ಲಿ 42 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ರಿಷಭ್, 23.36ರ ಅವರೇಜ್​ನಲ್ಲಿ 771 ರನ್ ಕಲೆಹಾಕಿದ್ದಾರೆ. 124.95 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಮಿಡಲ್ ಆರ್ಡರ್​ಗಿಂತ 3ನೇ ಕ್ರಮಾಂಕದಲ್ಲೇ ಅದ್ಭುತ ಬ್ಯಾಟಿಂಗ್ ರೆಕಾರ್ಡ್ ಹೊಂದಿರುವ ಪಂತ್​​ಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡ್ತು. ವಿರಾಟ್​​ ಕೊಹ್ಲಿಗೆ ಆರಂಭಿಕನಾಗಿ ಕಣಕ್ಕಿಳಿಸಿತು. ಇದು ಟೀಮ್ ಮ್ಯಾನೇಜ್​ಮೆಂಟ್​ನ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲಾನ್.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!

ರಿಷಭ್ ಪಂತ್ ಬಡ್ತಿ ಟೀಮ್ ಇಂಡಿಯಾಗೆ ಲಾಭ
ಟೀಮ್ ಮ್ಯಾನೇಜ್​ಮೆಂಟ್​ರ ಈ ಪ್ರಯೋಗ ಟೀಮ್ ಇಂಡಿಯಾಗೆ ಬಿಗ್ ಅಡ್ವಾಂಟೇಜ್.. ಯಾಕಂದ್ರೆ, ಆರಂಭಿಕ ಬ್ಯಾಟರ್ ಬೇಗ ವಿಕೆಟ್ ಒಪ್ಪಿಸಿದ್ರೆ, ನಿರ್ಭಯವಾಗಿ ಬ್ಯಾಟ್​ ಬೀಸುವ​ ಪಂತ್, ಪವರ್ ಪ್ಲೇನಲ್ಲಿ ಎದುರಾಳಿ ಮೇಲೆ ಒತ್ತಡ ಹೇರಬಲ್ಲರು. ರನ್​ ಗಳಿಕೆಗೆ ವೇಗ ನೀಡುವ ಜೊತೆಗೆ ಹೆಚ್ಚುವರಿ ಎಸೆತಗಳು ಸಿಗಲಿವೆ. ಶಿವಂ ದುಬೆ, ಜಡೇಜಾ, ಅಕ್ಷರ್​ ತಂಡದಲ್ಲಿರುವ ಕಾರಣ, ಪಂತ್​, 3ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸುವುದು ತಂಡದ ಸಮತೋಲನ ಹೆಚ್ಚಿಸಲಿದೆ. ತಂಡಕ್ಕೂ ಬಿಗ್ ಅಡ್ವಾಂಟೇಜ್.

ಒಟ್ನಲ್ಲಿ.! ಎರಡು ಪ್ರಯೋಗ ಟೀಮ್ ಇಂಡಿಯಾಗೆ ಹೊಸ ರೂಪವನ್ನೇ ನೀಡಿದೆ. ಬ್ಯಾಟಿಂಗ್​​ ವಿಭಾಗದ ಶಕ್ತಿ ಹೆಚ್ಚಿಸಿದೆ. ಆದ್ರೆ, ಮುಂದಿನ ದಿನಗಳಲ್ಲಿ ಇದೇ ಬ್ಯಾಟಿಂಗ್ ದರ್ಬಾರ್ ಮುಂದುವರಿಸ್ತಾರಾ ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ:ಚುನಾವಣಾ ಫಲಿತಾಂಶ ಬೆನ್ನಲ್ಲೇ ಆಂಧ್ರದಲ್ಲಿ ಅಲ್ಲೋಲ ಕಲ್ಲೋಲ.. ಜಗನ್ ಆಪ್ತರ ಮನೆ ಮೇಲೆ ಅಟ್ಯಾಕ್.. ಭುಗಿಲೆದ್ದ ಹಿಂಸಾಚಾರ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

https://newsfirstlive.com/wp-content/uploads/2024/06/ROHIT-12.jpg

Load More