newsfirstkannada.com

ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?

Share :

Published June 8, 2024 at 9:05am

    ಚಂದನ್ ಶೆಟ್ಟಿ-ನಿವೇದಿತಾರ ಸಂಸಾರ ಮುರಿದು ಬಿದ್ದಿದೆ

    ಡಿವೋರ್ಸ್​ ಪಡೆಯಲು ಕಾರಣ ತಿಳಿಸಿರುವ ಜೋಡಿ

    ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಅಭಿಮಾನಿಗಳು

ಕನ್ನಡದ ಱಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವಿನ ನಾಲ್ಕು ವರ್ಷಗಳ ಸಂಸಾರ ಮುರಿದು ಬಿದ್ದಿದೆ. ಕಾನೂನು ಪ್ರಕಾರ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದು, ಇನ್ಮುಂದೆ ಸ್ನೇಹಿತರಾಗಿ ಇರಲು ನಿರ್ಧರಿಸಿದ್ದಾರೆ.

ಈ ಜೋಡಿ ನಿನ್ನೆಯೇ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಡಿವೋರ್ಸ್​ಗಾಗಿ ಕೋರ್ಟ್​ ಮೆಟ್ಟಿಲೇರಿದ್ದ ನಿವ್ವಿ-ಚಂದನ್ ಹಿಂದೂ ಮ್ಯಾರೇಜ್ ಆ್ಯಕ್ಟ್‌ 13B ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಆಶ್ಚರ್ಯ ಅಂದ್ರೆ.. ಕೋರ್ಟ್‌ ಹಾಲ್‌ನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡೇ ಕುಳಿತುಕೊಂಡಿದ್ದರು. ಈ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಕಪಲ್‌ ನಾನೊಂದು ತೀರ ನೀನೊಂದು ತೀರ ರೀತಿ ಇರ್ತಿದ್ದನ್ನ ಎಲ್ಲರೂ ನೋಡ್ತಿದ್ದರು. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯವೇ ಇಲ್ಲವೇನೋ ಅನ್ನೋ ರೀತಿ ಇದ್ದರು. ಇಬ್ಬರು ಕೈ ಕೈ ಹಿಡಿದುಕೊಂಡು ಪಕ್ಕದಲ್ಲಿಯೇ ಕುಳಿತ್ತಿದ್ದರು.

ಇದನ್ನೂ ಓದಿ:ಕ್ಷೇತ್ರ ಗೆಲ್ಲಿಸಿಕೊಳ್ಳಲಾಗದ ಸಚಿವರ ಸ್ಥಾನಕ್ಕೆ ಬಂತು ಆಪತ್ತು.. ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಆಗಿದ್ದೇನು?

ಈ ವೇಳೆ ಮಧ್ಯಸ್ಥಿಕೆ ನಡೆಸುವ ಅರ್ಬಿಟ್ರೇಟರ್ (arbitrator, ಮಧ್ಯಸ್ಥಗಾರ) ಅನಿತಾ ಮುಂದೆ ಇಬ್ಬರನ್ನ ವಿಚಾರಣೆ ನಡೆಸಲಾಗಿತ್ತು. ಇಬ್ಬರ ಮಧ್ಯೆ ಏನಾದ್ರೂ ಗೊಂದಲ ಇದ್ಯಾ? ಡಿವೋರ್ಸ್ ಪಡೆಯಲು ಕಾರಣಗಳೇನು ಅನ್ನೋ ವಿಚಾರದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಇಬ್ಬರ ಮನವೊಲಿಕೆಗೆ ಕೋರ್ಟ್ ಪ್ರಯತ್ನಿಸಿದ್ರೂ ನಿವೇದಿತಾ ಮತ್ತು ಚಂದನ್ ತಮ್ಮ ನಿರ್ಧಾರ ಬದಲು ಮಾಡಲಿಲ್ಲ. ಕೊನೆಗೆ ನ್ಯಾಯಾಲಯ ಇಬ್ಬರ ಮನವಿಯನ್ನ ಪುರಸ್ಕರಿಸಿತು.

ಕೋರ್ಟ್​ನಲ್ಲಿ ಆಗಿದ್ದು ಏನು?
ನಾಲ್ಕು ವರ್ಷದ ದಾಂಪತ್ಯಕ್ಕೆ ಗುಡ್ ಬಾಯ್ ಹೇಳಿ ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿರುವ ನಿವೇದಿತಾ ಮತ್ತು ಚಂದನಾ ಅರ್ಜಿಯಲ್ಲಿ ಇಬ್ಬರ ಮಧ್ಯೆ ಕೆಲ ಭಿನ್ನಾಭಿಪ್ರಾಯಗಳಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಜೊತೆಗೆ ಕರಿಯರ್ ಬದಲಾವಣೆ ಬಗ್ಗೆ ಬರೆದಿರುವ ಬಿಗ್​ಬಾಸ್ ಜೋಡಿ ಪ್ರಮುಖ ಮೂರು ಅಂಶಗಳನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ನಿಮಗೆಲ್ಲ ಗೊತ್ತಿರುವ ಹಾಗೇ ತುಂಬಾ ಚಿಕ್ಕ ವಯಸ್ಸಿನಲ್ಲೇ ನಿವೇದಿತಾಗೌಡ ಚಂದನ್ ಶೆಟ್ಟಿಯನ್ನ ಮದುವೆಯಾಗಿದ್ರು. ಹೀಗಾಗಿ ಮದುವೆಯಾದ್ಮೇಲೆ ನಿವ್ವಿಗೆ ತಮ್ಮ ಕರಿಯರ್ ಕಡೆ ಗಮನ ಕೊಡೋದಕ್ಕೆ ಸಾಧ್ಯವಾಗಿಲ್ವಂತೆ. ಹೀಗಾಗಿ ಡಿವೋರ್ಸ್​ ಅರ್ಜಿಯಲ್ಲೂ ಇದೇ ಕಾರಣವನ್ನು ಉಲ್ಲೇಖಿಸಿರುವ ದಂಪತಿ ನಿವೇದಿತಾಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡೋ ಕನಸು ಇರೋದಾಗಿ ಹೇಳಿದೆ. ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿರುವ ಮೂರು ಅಂಶದಲ್ಲಿ ಈ ಕಾರಣವೂ ಕೂಡ ಒಂದು ಅಂತ ಬರೆದಿದೆ. ಈಗಾಗಲೇ ಚಂದನ್​ ಱಪರ್ ಆಗಿ ಗುರುತಿಸಿಕೊಂಡಿದ್ರು ಬಿಗ್ ಸಕ್ಸಸ್ ಯಾವುದೂ ಸಿಕ್ಕಿಲ್ಲ.

ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?

ಅತ್ತ ನಿವೇದಿತಾಗೌಡ ರಿಯಾಲಿಟಿ ಶೋಗಳಲ್ಲ ಕಾಣಿಸಿಕೊಂಡ್ರು ಅಂದುಕೊಂಡಷ್ಟು ಸಕ್ಸಸ್ ಸಿಕ್ಕಿಲ್ಲ. ಹೀಗಾಗಿ ಇಬ್ಬರ ಭವಿಷ್ಯದ ಸಲುವಾಗಿ ಕರಿಯರ್​ ಬದಲಾವಣೆ ವಿಚಾರವಾಗಿ ಅರ್ಜಿ ಸಲ್ಲಿಸಿರೋದಾಗಿ ನಿವೇದಿತಾ ಮತ್ತು ಚಂದನ್ ಡಿವೋರ್ಸ್​ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಂಸಾರ ಅಂದ್ಮೇಲೆ ಸಣ್ಣ ಪುಟ್ಟ ಜಗಳಗಳು ಮನಸ್ತಾಪಗಳು ಇದ್ದೇ ಇರ್ತವೆ. ಆದ್ರೆ ನಿವೇದಿತಾ ಮತ್ತು ಚಂದನ್ ಸಂಸಾರದಲ್ಲೂ ಇಂಥಾದ್ದೆ ಭಿನ್ನಾಭಿಪ್ರಾಯಗಳಿವೆಯಂತೆ. ಹೀಗಾಗಿ ಈ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ವಿಚ್ಚೇಧನಕ್ಕೆ ಮೊರ ಹೋಗಿರೋದಾಗಿ ಇಬ್ಬರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ವಿಚಾರಣೆ ನಡೆಸಿದ ಜಡ್ಜ್ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದು ಯಾಕೆ ಅಂತ ಕೇಳಿದ್ರು. ಇದಕ್ಕೆ ಉತ್ತರಿಸಿದ ಚಂದನ್ ದಂಪತಿ ಪರಸ್ಪರ ಒಪ್ಪಿ ವಿಚ್ಚೇಧನ ಪಡೆಯುತ್ತಿದ್ದೇವೆ. ಇಬ್ಬರ ಮಧ್ಯೆ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ. ಹಾಗೇ ನಮ್ಮ ಕರಿಯರ್ ಬಗ್ಗೆ ಕೆಲ ಕನಸುಗಳಿದ್ದು, ಈಗ ನಾವಿಬ್ಬರು ಖುಷಿಯಾಗಿಯೇ ಬೇರೆಯಾಗಲು ನಿರ್ಧರಿಸಿದ್ದೇವೆ ಅಂತ ಹೇಳಿದ್ರು. ಬಳಿಕ ಕೋರ್ಟ್ ಸ್ವಲ್ಪ ಕಾಯಿರಿ ಅಂತ ಸೂಚಿಸಿ ಕೊನೆಗೆ ಚಂದನ್ ಮತ್ತು ನಿವೇದಿತಾ ವಿಚ್ಛೇಧನಕ್ಕೆ ಅನುಮತಿ ನೀಡ್ತು. ಸದ್ಯ ಕೋರ್ಟ್ ಇಬ್ಬರಿಗೂ ಡಿವೋರ್ಸ್​​ ಪಡೆಯಲು ಒಪ್ಪಿಗೆ ನೀಡಿದೆ.

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?

https://newsfirstlive.com/wp-content/uploads/2024/06/Nivedita-chandan.jpg

Load More