newsfirstkannada.com

ಕ್ಷೇತ್ರ ಗೆಲ್ಲಿಸಿಕೊಳ್ಳಲಾಗದ ಸಚಿವರ ಸ್ಥಾನಕ್ಕೆ ಬಂತು ಆಪತ್ತು.. ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಆಗಿದ್ದೇನು?

Share :

Published June 8, 2024 at 8:25am

  ಸೋತವರು, ಗೆದ್ದವರ ಜೊತೆ ರಾಹುಲ್ ಗಾಂಧಿ ಸಭೆ

  ಸಚಿವರಿಗೆ ತೀವ್ರ ರಾಹುಲ್ ಗಾಂಧಿ ತರಾಟೆ, ಐದು ಪ್ರಶ್ನೆ

  ಹೈಕಮಾಂಡ್ ನಿರೀಕ್ಷಿಸಿದ ಸ್ಥಾನ ಸಿಗಲಿಲ್ಲ, ಕಾಂಗ್ರೆಸ್​ ಅಪ್​ಸೆಟ್

ಲೋಕ ಸಮರದಲ್ಲಿ ಈ ಬಾರಿ 50ಕ್ಕೂ ಕಡಿಮೆ ಸ್ಥಾನ ಪಡೆಯುತ್ತೆ ಅಂತ ಪ್ರಧಾನಿ ಮೋದಿ ಪ್ರಚಾರದ ಕಡೆಯಲ್ಲೆಲ್ಲಾ ಹೇಳಿಕೊಂಡು ಮತಯಾಚನೆ ಮಾಡಿದ್ರು. ಆದ್ರೆ ಅದೆಲ್ಲದಕ್ಕೂ ಸೆಡ್ಡು ಹೊಡೆದಂತೆ ಕಾಂಗ್ರೆಸ್​ ಪಕ್ಷ 99 ಸೀಟುಗಳನ್ನು ಗೆಲ್ಲುವ ಮೂಲಕ ಸೆಂಚುರಿ ದಡ ಸಮೀಪಿಸಿದೆ. ಆದ್ರೂ ಕೂಡ ಕಾಂಗ್ರೆಸ್ ಹೈಕಮಾಂಡ್​ ಎನಿಸಿದಷ್ಟು ಸ್ಥಾನ ಬಂದಿಲ್ಲ. ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನಕ್ಕೆ ಕಾರಣವಾಗಿದೆ.

ಸೋತವರು, ಗೆದ್ದವರ ಜೊತೆ ರಾಹುಲ್ ಗಾಂಧಿ ಸಭೆ
ಗ್ಯಾರಂಟಿಗಳನ್ನೇ ನಂಬಿಕೊಂಡಿದ್ದ ಕಾಂಗ್ರೆಸ್​ಗೆ ಮತದಾರ ಕೊಂಚ ಶಾಕ್ ಕೊಟ್ಟಿದ್ದಾನೆ. ನಿರೀಕ್ಷಿತ ಮಟ್ಟದಲ್ಲಿ ಗ್ಯಾರಂಟಿಗಳು ಕಾಂಗ್ರೆಸ್​ಗೆ ಮತ ತಂದುಕೊಟ್ಟಿಲ್ಲ. ಇದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕರ ಸಭೆ ನಡೆಸಿದ್ದಾರೆ.

ಇದನ್ನೂ ಓದಿ:‘ನಾವು ಕೊಡೋದೇ ಇಷ್ಟು ರೀ..’ ಬಿಜೆಪಿಗೆ ಎಷ್ಟು ಖಾತೆ? ನಿತೀಶ್​​, ನಾಯ್ಡುಗೆ ಸಿಗುವ ಮಂತ್ರಿ ಸ್ಥಾನ ಎಷ್ಟು..?

ರಾಜ್ಯದಲ್ಲಿ ಕಾಂಗ್ರೆಸ್ ಸೋತ ಕ್ಷೇತ್ರಗಳ ಪರಾಮರ್ಶೆ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಸೋತವರು, ಗೆದ್ದವರ ಜೊತೆ ರಾಹುಲ್ ಗಾಂಧಿ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಸಚಿವರಿಗೆ ರಾಹುಲ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸದಿದ್ದಕ್ಕೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ

 • ಪ್ರಶ್ನೆ 01: ‘ಗ್ಯಾರಂಟಿ’ ಇದ್ರೂ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಆಗಿಲ್ಲ ಯಾಕೆ?
 • ಪ್ರಶ್ನೆ 02: ಕೆಲ ಸಚಿವರು ತಮ್ಮ ಉಸ್ತುವಾರಿ ಕ್ಷೇತ್ರ ಗೆಲ್ಲಿಸಿಕೊಂಡಿಲ್ಲ ಯಾಕೆ?
 • ಪ್ರಶ್ನೆ 03: ಕೆಲ ಸಚಿವರು ನಿರೀಕ್ಷಿತ ಮಟ್ಟದಲ್ಲಿ ಶ್ರಮ ಹಾಕಿ ಕೆಲಸ ಮಾಡಲಿಲ್ವಾ?
 • ಪ್ರಶ್ನೆ 04: ಪ್ರತಿಪಕ್ಷಗಳಂತೆ ಚುನಾವಣಾ ತಂತ್ರಗಾರಿಕೆ ರೂಪಿಸೋದ್ರಲ್ಲಿ ಎಡವಿದ್ರಾ?
 • ಪ್ರಶ್ನೆ 05: ಸ್ಥಳೀಯ ನಾಯಕರು, ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ವಾ?

ಗ್ಯಾರಂಟಿ ಘೋಷಣೆಯಾಗಿ 1 ವರ್ಷವಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಹೀಗಿದ್ದರೂ ಇದನ್ನ ಪ್ರತೀ ಮನೆ ಮನೆಗೆ ತಲುಪಿಸಲು ನಿಮಗೆ ಏಕೆ ಸಾಧ್ಯವಾಗಲಿಲ್ಲ? ಅವಕಾಶಗಳಿದ್ದರೂ ನೀವು ಅದನ್ನ ಏಕೆ ಸದ್ಭಳಕೆ ಮಾಡಿಕೊಂಡಿಲ್ಲ. ಕೆಲ ಸಚಿವರು ಅಮರ್ಥರಾಗಿದ್ದಾರೆ ಎಂದು ರಾಹುಲ್​ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಯಾವ ಸಚಿವರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ ಅನ್ನೋ ಪಟ್ಟಿಯನ್ನೂ ರಾಹುಲ್ ಪಡೆದಿದ್ದಾರೆ.

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

ಒಟ್ಟಾರೆ ಕಾಂಗ್ರೆಸ್​ ರಾಷ್ಟ್ರಮಟ್ಟದಲ್ಲಿ ಕಳೆದ ಬಾರಿಗೆ ಹೋಲಿಸಿದ್ರೆ ಕೊಂಚ ಗಮನಾರ್ಹ ಸಾಧನೆ ಮಾಡಿದೆ. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷಿಸಿದಷ್ಟು ಸಂಖ್ಯೆಯನ್ನು ತಂದುಕೊಡುವಲ್ಲಿ ವಿಫಲವಾಗಿದೆ. ಇದು ರಾಹುಲ್ ಗಾಂಧಿ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಷೇತ್ರ ಗೆಲ್ಲಿಸಿಕೊಳ್ಳಲಾಗದ ಸಚಿವರ ಸ್ಥಾನಕ್ಕೆ ಬಂತು ಆಪತ್ತು.. ರಾಹುಲ್ ಗಾಂಧಿ ನಡೆಸಿದ ಸಭೆಯಲ್ಲಿ ಆಗಿದ್ದೇನು?

https://newsfirstlive.com/wp-content/uploads/2024/06/rahul-gandhi-9.jpg

Load More