newsfirstkannada.com

ಜೆಡಿಎಸ್​​ಗೆ ಸಿಕ್ಕೇಬಿಟ್ರು ಮುಂದಿನ ಉತ್ತರಾಧಿಕಾರಿ..? ಚುನಾವಣಾ ಫಲಿತಾಂಶ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!

Share :

Published June 8, 2024 at 10:03am

    ‘ಲೋಕ’ ಚುನಾವಣೆ ಫಲಿತಾಂಶ ಬಳಿಕ ಮಹತ್ವದ ನಿರ್ಧಾರ

    ಒಟ್ಟು ಮೂರು ಚಿತ್ರಗಳಲ್ಲಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ

    ಜಾಗ್ವಾರ್​​​, ಸೀತಾರಾಮ ಕಲ್ಯಾಣ, ರೈಡರ್​​ನಲ್ಲಿ ಅಭಿನಯ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ. ನಾನು ಈಗ 24X7 ರಾಜಕಾರಣಿ. ಇನ್ಮುಂದೆ ಸಿನಿಮಾ ಮಾಡೋದನ್ನು ನಾನು ಬಂದ್ ಮಾಡಿದ್ದೇನೆ ಅಂತ ಹೇಳಿದ್ದಾರೆ. ಈ ಮೂಲಕ ಫುಲ್‌ಟೈಮ್‌ ಪಾಲಿಟಿಕ್ಸ್‌ನ ಸಂದೇಶ ರವಾನಿಸಿದ್ದಾರೆ.

ಸಿನಿಮಾ ರಂಗಕ್ಕೆ ಗುಡ್‌ಬೈ ಹೇಳಿದ ನಿಖಿಲ್ ಕುಮಾರಸ್ವಾಮಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್​​ ಮೈತ್ರಿ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.. ಜೆಡಿಎಸ್​ ಪಕ್ಷ ಮಂಡ್ಯ, ಕೋಲಾರ ಕ್ಷೇತ್ರದಲ್ಲಿ ಗೆದ್ದು ಬೀಗಿದೆ. ಈ ಹಿನ್ನೆಲೆ ನಿಖಿಲ್​​ ಕುಮಾರಸ್ವಾಮಿ ಇಂದು ಮಂಡ್ಯಕ್ಕೆ ಭೇಟಿ ಕೊಟ್ಟದ್ರು, ಈ ವೇಳೆ ಮಾತನಾಡಿ, ನಾನಿನ್ನು ಪಕ್ಷ ಕಟ್ಟುವ ಕಡೆ ಗಮನ ಕೊಡುತ್ತೇನೆ. ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡ್ತೀನಿ ಅಂತ ಹೇಳಿದ್ರು.

ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?

ಬೈ ಎಲೆಕ್ಷನ್​​ನಲ್ಲಿ ಚನ್ನಪಟ್ಟಣದಿಂದ ನಿಖಿಲ್ ಸ್ಪರ್ಧೆ?
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮಂಡ್ಯ ಸಂಸದರಾದ ಆಯ್ಕೆ ಬೆನ್ನೆಲ್ಲೆ ಚನ್ನಪಟ್ಟಣ ಶಾಸಕ ಸ್ಥಾನ ತೆರವಾಗಿದೆ. ಹೀಗಾಗಿ ಉಪಚುನಾವಣೆ ನಡೆಯಲಿದೆ.. ಜೆಡಿಎಸ್​​ನಿಂದ ನಿಖಿಲ್​ ಕುಮಾರ​​ಸ್ವಾಮಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಮಾತನಾಡುವುದು ಈಗ ಅಪ್ರಸ್ತುತ ಎಂದು ನಿಖಿಲ್​ ಹೇಳಿದ್ದಾರೆ.

ಜೆಡಿಎಸ್​​ನ ಮುಂದಿನ ಉತ್ತರಾಧಿಕಾರಿ ನಿಖಿಲ್​​​?
ಜೆಡಿಎಸ್​​ ಪಕ್ಷದ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಹಾಸನ ಪೆನ್​ಡ್ರೈವ್​ ಪ್ರಕರಣದಿಂದ ಹಾಸನ ಕ್ಷೇತ್ರದಲ್ಲಿ ಹಿನ್ನೆಡೆಯಾಗಿದೆ ಜೊತೆಗೆ ಪಕ್ಷಕ್ಕೂ ಮುಜಗರ ತರಿಸಿದೆ.. ಹೀಗಾಗಿ ಪಕ್ಷದ ಉತ್ತರಾಧಿಕಾರಿ ಸ್ಪರ್ಧೆಯಿಂದ ಪ್ರಜ್ವಲ್​​​​​​​ಗೆ ಹಿನ್ನೆಡೆಯಾಗಿದ್ದು, ಜೆಡಿಎಸ್​​​ನ ಮುಂದಿನ ಉತ್ತರಾಧಿಕಾರಿ ನಿಖಿಲ್​ ಕುಮಾಸ್ವಾಮಿ ಅಂತ ಹೇಳಲಾಗುತ್ತಿದೆ. ಒಟ್ಟಾರೆ.. ಜೆಡಿಎಸ್​​ ಯುವನಾಯಕ ನಿಖಿಲ್​ ಕುಮಾಸ್ವಾಮಿ ತನ್ನ ತಾತಾ ಹಾಗೂ ತಂದೆಯಂತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಚನ್ನಪಟ್ಟಣದಲ್ಲಿ ಸ್ಫರ್ಧಿಸಿ ಗೆದ್ದು ಶಾಸಕರಾಗ್ತಾರಾ ಅಂತ ಕಾದು ನೋಡಬೇಕಿದೆ.

ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. ಇಲ್ಲಿಯೂ ಭಾರತೀಯರದ್ದೇ ದರ್ಬಾರ್..!

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಜೆಡಿಎಸ್​​ಗೆ ಸಿಕ್ಕೇಬಿಟ್ರು ಮುಂದಿನ ಉತ್ತರಾಧಿಕಾರಿ..? ಚುನಾವಣಾ ಫಲಿತಾಂಶ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!

https://newsfirstlive.com/wp-content/uploads/2024/06/HD-KUMARASWAMY-2.jpg

Load More