newsfirstkannada.com

IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?

Share :

Published June 8, 2024 at 9:36am

    ಡೇಂಜರಸ್​ ಮೈದಾನದಲ್ಲಿ ಯಾರಿಗೆ ಹೆಚ್ಚು ಲಾಭ..?

    ಪಾಕ್​ ಫಾಸ್ಟ್​​ ಬೌಲರ್ಸ್​ಗಾ..? ಭಾರತದ ಬೌಲರ್​ಗಳಿಗಾ..?

    ಪಾಕ್​ ಹೆಡೆಮುರಿ ಕಟ್ತಾರಾ ಭಾರತದ ವೇಗಿಗಳು..?

ಇಂಡೋ-ಪಾಕ್​​ ಹೈ ಥ್ರಿಲ್ಲಿಂಗ್​​ ಗೇಮ್​​ ಎದೆ ಬಡಿತ ಹೆಚ್ಚಿಸಿದೆ. ಸೋಲು-ಗೆಲುವಿನ ಲೆಕ್ಕಚಾರವು ಜೋರಾಗಿದೆ. ಬದ್ಧವೈರಿ ಪಾಕ್​​ ಪಾಕ್​​​​​​​​​​ ಎಷ್ಟೇ ತಿಪ್ಪರಲಾಗ ಹಾಕಿದ್ರೂ ಸಂಡೇ ಬ್ಯಾಟಲ್​ನಲ್ಲಿ ಭಾರತಕ್ಕೆ ಗೆಲುವು ಪಕ್ಕಾ.

ವೆಸ್ಟ್ಇಂಡೀಸ್​ ಜೊತೆಗೂಡಿ ಅಮೆರಿಕಾ ಮೊದಲ ಬಾರಿ ಟಿ20 ವಿಶ್ವಕಪ್​​​ಗೆ ಆತಿಥ್ಯ ವಹಿಸಿದೆ. ನ್ಯೂಯಾರ್ಕ್​ನ ನಸ್ಸೌಂ ಕೌಂಟಿ ಅಂತಾರಾಷ್ಟ್ರೀಯ ಮೈದಾನದ ಪಿಚ್​​​​ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಇದು ಆಡಲು ಸೂಕ್ತವಲ್ಲ, ಭಯಾಕನವಾಗಿದೆ ಹಾಗೂ ಸ್ಪರ್ಧಾತ್ಮಕ ಕ್ರಿಕೆಟ್ ಸಾಧ್ಯವಿಲ್ಲವೆಂದು ಎಂದು ಕ್ರಿಕೆಟ್​​​ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಇದುವರೆಗೆ 2 ಪಂದ್ಯ ನಡೆದಿದ್ದು, ಅನೇಕ ಆಟಗಾರರು ಇಂಜುರಿಗೆ ತುತ್ತಾಗಿದ್ದು ಪಿಚ್​​​​​ ಬಗ್ಗೆ ಭೀತಿ ಹೆಚ್ಚಿಸಿದೆ. ಇಂತಹ ಡೇಂಜರಸ್ ಪಿಚ್​ನಲ್ಲಿ ಜೂನ್​​ 9 ರಂದು ಇಂಡೋ-ಪಾಕಿಸ್ತಾನ ತಂಡಗಳು ಕಾದಾಡಲಿವೆ.

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?

ನಸ್ಸೌ ಸ್ಟೇಡಿಯಂನಲ್ಲಿ ಇಂಡೋ-ಪಾಕ್​ ಮೆಗಾ ಬ್ಯಾಟಲ್​
ಒಂದೆಡೆ ನ್ಯೂಯಾರ್ಕ್​ನ ನಸ್ಸೌಂ ಮೈದಾನದ ಬಗ್ಗೆ ಅಪವಾದ ಕೇಳಿ ಬರ್ತಿದ್ರೆ ಇತ್ತ ಭಾರತ ತಂಡ ತಂಡ ಭಾನುವಾರ ಪರಮವೈರಿ ಪಾಕ್​​ ತಂಡವನ್ನ ಎದುರಿಸಲಿದೆ. ನೂತನವಾಗಿ ನಿರ್ಮಾಣವಾದ ಈ ಮೈದಾನದಲ್ಲಿ ಯಾರಿಗೆ ಹೆಚ್ಚು ಅಡ್ವಾಂಟೇಜ್ ಸಿಗಲಿದೆ? ಭಾರತದ ವೇಗಿಗಳಿಗಾ ಅಥವಾ ಪಾಕಿಸ್ತಾನ ಫಾಸ್ಟ್ ಬೌಲರ್​ಗಳಿಗಾ ಅನ್ನೋ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ನಸ್ಸೌ ಮೈದಾನದಲ್ಲಿ ವೇಗಿಗಳು
ನ್ಯೂಯಾರ್ಕ್​ನ ನಸ್ಸೌ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ವೇಗಿಗಳು ಒಟ್ಟು 7 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದ ಫಾಸ್ಟ್​ ಬೌಲರ್ಸ್​ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ಐರ್ಲೆಂಡ್​​​​​​​​ ತಂಡದ ವೇಗಿಗಳು 1 ವಿಕೆಟ್​ ಬೇಟೆಯಾಡಿದ್ದಾರೆ. ಇದೇ ಮೈದಾನದಲ್ಲಿ ಭಾರತೀಯ ಫಾಸ್ಟ್​ ಬೌಲರ್ಸ್​ ಬೆಂಕಿ ಉಗುಳಿದ್ದಾರೆ. ದಾಳಿಗಿಳಿದ ಪ್ರತಿಯೊಬ್ಬ ಬೌಲರ್​​​​​​ ಕೂಡ ವಿಕೆಟ್​ ಸರಮಾಲೆ ಕಟ್ಟಿ ಮಿಂಚಿದ್ದಾರೆ. ಅತಿ ಹೆಚ್ಚು ವಿಕೆಟ್ ಇಂಡಿಯನ್​​ ಬೌಲರ್ಸ್​ ಪಾಲಾಗಿವೆ.

ಇದನ್ನೂ ಓದಿ:IND vs PAK: ಭಾರತದ ಈ ಆಟಗಾರ ಅಂದರೆ ಪಾಕಿಸ್ತಾನ ಬೆಚ್ಚಿಬೀಳೋದು ಯಾಕೆ..?

ನಸ್ಸೌ ಮೈದಾನದಲ್ಲಿ ಭಾರತದ ವೇಗಿಗಳು
ನಸ್ಸೌ ಮೈದಾನದಲ್ಲಿ ಟೀಮ್ ಇಂಡಿಯಾ ಫಾಸ್ಟ್​​​ ಬೌಲರ್ಸ್​ ಒಟ್ಟು 14 ಓವರ್ ಬೌಲಿಂಗ್ ಮಾಡಿದ್ದಾರೆ. ಆ ಪೈಕಿ 8 ವಿಕೆಟ್​​ಗಳನ್ನ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿಚಿತ್ರವಾಗಿ ವರ್ತಿಸ್ತಿರೋ ನಸ್ಸೌ ಮೈದಾನದಲ್ಲಿ ಪಾಕಿಸ್ತಾನ ತಂಡ ಈವರೆಗೆ ಒಂದೂ ಪಂದ್ಯವನ್ನಾಡಿಲ್ಲ. ನೇರವಾಗಿ ಟೀಮ್ ಇಂಡಿಯಾ ವಿರುದ್ಧ ಆಡಲಿದೆ. ಇಲ್ಲಿನ ಪಿಚ್ ಹೇಗೆ ವರ್ತಿಸುತ್ತೆ ಅನ್ನೋದು ಪಾಕ್​ಗೆ ಗೊತ್ತಿಲ್ಲ. ರೋಹಿತ್​ ಶರ್ಮಾ ಅಂಡ್ ಗ್ಯಾಂಗ್​ಗೆ ಈ ಪಿಚ್​​​​ ಬಗ್ಗೆ ಚೆನ್ನಾಗಿ ಅರಿವಿದೆ. ಇಲ್ಲಿಯೇ ಒಂದು ಅಭ್ಯಾಸ ಪಂದ್ಯವನ್ನಾಡಿದೆ. ಅಲ್ಲದೇ ಐರ್ಲೆಂಡ್​​​​​​​​​​ ಆಡಿ ಜಯಭೇರಿ ಗಳಿಸಿದೆ. ಹೀಗಾಗಿ ನಸ್ಸೌ ಮೈದಾನದಲ್ಲಿ ಇಂಡಿಯನ್ ಬೌಲರ್ಸ್​ ಹೆಚ್ಚು ಅಡ್ವಾಂಟೇಜ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಪಾಕ್​ ತಂಡಕ್ಕೆ ಇಲ್ಲಿ ಆಡಿದ ಅನುಭವವಿಲ್ಲ ನಿಜ. ಆದರೆ ಬಾಬರ್ ಅಝಂ ಪಡೆಯಲ್ಲಿ ಅನುಭವಿ ಬೌಲರ್​​ಗಳಿದ್ದಾರೆ. ಶರವೇಗದ ದಾಳಿಯಿಂದ ಬ್ಯಾಟ್ಸ್​​ಮನ್ ದಿಕ್ಕು ತಪ್ಪಿಸುವ ಹ್ಯಾರಿಸ್ ರೌಫ್​​​, ಮೊಹಮ್ಮದ್ ಅಮೀರ್​​​​, ನಾಸಿಂ ಶಾ ಹಾಗೂ ಶಾಹೀನ್ ಶಾ ಅಫ್ರಿದಿ ಯಂತಹ ಕ್ವಾಲಿಟಿ ಬೌಲರ್​ಗಳಿದ್ದಾರೆ. ಇವರು ಬೌನ್ಸ್​ ಮತ್ತು ಸ್ವಿಂಗ್ ಮಾಡೋದ್ರಲ್ಲಿ ನಿಸ್ಸೀಮರು. ಹೀಗಾಗಿ ಇಂಡಿಯನ್ ಬ್ಯಾಟ್ಸ್​​ನ್​ಗಳು ಎಲ್ಲಾ ರೀತಿಯ ಸವಾಲಿಗೆ ಸಜ್ಜಾಗಬೇಕಿದೆ.

ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್​ಮೆಂಟ್..!

ಒಟ್ಟಿನಲ್ಲಿ ಇಂಡೋ-ಪಾಕ್​​​​​​​​​​ ಕದನದ ಕುತೂಹಲ ದಿನೇ ದಿನೇ ಹೆಚ್ಚಾಗ್ತಿದೆ. ಹೈ PRESSURE ಗೇಮ್​​ನಲ್ಲಿ ಗೆಲ್ಲೋದ್ಯಾರು? ನಸ್ಸೌ ಮೈದಾನದಲ್ಲಿ ಭಾರತೀಯ ಬೌಲರ್​ಗಳಿಗೆ ಹೆಚ್ಚು ನೆರವು ಸಿಗುತ್ತಾ? ಭಾರತ ಗೆಲುವಿನ ಸಂಖ್ಯೆಯನ್ನ 7-1ಕ್ಕೆ ಹೆಚ್ಚಿಸಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?

https://newsfirstlive.com/wp-content/uploads/2024/06/ROHIT-PAK.jpg

Load More