newsfirstkannada.com

ಚಲಿಸುತ್ತಿದ್ದಾಗ KSRTC ಟೈರ್‌ ಸ್ಫೋಟ.. ಮರಕ್ಕೆ ಗುದ್ದಿದ ಸಾರಿಗೆ ಬಸ್‌; ಡಿವೈಡರ್‌ಗೆ ಟ್ಯಾಂಕರ್‌ ಡಿಕ್ಕಿ!

Share :

Published April 1, 2024 at 3:08pm

Update April 1, 2024 at 3:10pm

    ಟೈರ್‌ ಬ್ಲಾಸ್ಟ್‌ ಆಗಿ ರಸ್ತೆ ಬದಿಯ ಹಣ್ಣಿನ ಅಂಗಡಿ, ಮರಕ್ಕೆ ಗುದ್ದಿದ ಬಸ್

    ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಟ್ಯಾಂಕರ್ ವಾಹನ

    ಅಪಘಾತದ ಮಧ್ಯೆ ರಸ್ತೆ ಪಕ್ಕದಲ್ಲಿ‌ ನಿಂತಿದ್ದ ಎರಡು ಬೈಕ್‌ಗಳು ಜಖಂ

ಯಾದಗಿರಿ: ಚಲಿಸುತ್ತಿದ್ದ KSRTC ಬಸ್‌ ಟೈರ್‌ ಬ್ಲಾಸ್ಟ್‌ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸಾರಿಗೆ ಬಸ್ ಟೈರ್ ಬ್ಲಾಸ್ಟ್ ಆಗುತ್ತಿದ್ದಂತೆ ಬಸ್‌ ಚಾಲಕನ ನಿಯಂತ್ರಣ ತಪ್ಪಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಯಂತ್ರಣಕ್ಕೆ ಬಾರದೇ ರಸ್ತೆ ಬದಿಯ ಹಣ್ಣಿನ ಅಂಗಡಿ ಹಾಗೂ ಮರಕ್ಕೆ ಡಿಕ್ಕಿ ಹೊಡೆದಿದೆ.

ಇದೇ ವೇಳೆ ರಸ್ತೆಯಲ್ಲಿ ವೇಗವಾಗಿ ಬರ್ತಿದ್ದ ಟ್ಯಾಂಕರ್ ವಾಹನ ಕೂಡ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಬೃಹತ್‌ ಮರವೊಂದು ಬೇರು ಸಮೇತ ಟ್ಯಾಂಕರ್ ವಾಹನದ ಮೇಲೆ ಬಿದ್ದಿದೆ. ಸಾರಿಗೆ ಬಸ್, ಟ್ಯಾಂಕರ್ ಅಪಘಾತದ ಮಧ್ಯೆ ರಸ್ತೆ ಪಕ್ಕದಲ್ಲಿ‌ ನಿಂತಿದ್ದ ಎರಡು ಬೈಕ್‌ಗಳು ಕೂಡ ನಜ್ಜುಗುಜ್ಜಾಗಿದೆ.

ಹೈದ್ರಾಬಾದ್‌ನ ನಾರಾಯಣಪೇಟೆಯಿಂದ ಸೈದಾಪುರ ಕಡೆಗೆ ಸಾರಿಗೆ ಬಸ್ ಬರುತ್ತಾ ಇತ್ತು. ಟ್ಯಾಂಕರ್ ವಾಹನ ರಾಯಚೂರಿನ ಶಕ್ತಿನಗರದಿಂದ ಹಾರು ಬೂದಿ ತುಂಬಿಕೊಂಡು ವಾಡಿಯತ್ತ ತೆರಳ್ತಾ ಇತ್ತು. ವಿಜಯಪುರ ಟು ಹೈದ್ರಾಬಾದ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ನಡೆದಿದೆ.

ಇದನ್ನೂ ಓದಿ: ತಲೆಗೆ ದುಪ್ಪಟ ಕಟ್ಟಿ ಮೊಬೈಲ್​​ನಲ್ಲಿ ಟಾಕಿಂಗ್ ಟ್ರಾವೆಲ್; ಬೆಂಗಳೂರು ಪೊಲೀಸರಿಂದ ಮಹಿಳೆಗೆ 5000 ರೂ ದಂಡ..!

ಯಾದಗಿರಿಯಲ್ಲಿ ಸಂಭವಿಸಿರೋ ಈ ಸರಣಿ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲಿಸುತ್ತಿದ್ದಾಗ KSRTC ಟೈರ್‌ ಸ್ಫೋಟ.. ಮರಕ್ಕೆ ಗುದ್ದಿದ ಸಾರಿಗೆ ಬಸ್‌; ಡಿವೈಡರ್‌ಗೆ ಟ್ಯಾಂಕರ್‌ ಡಿಕ್ಕಿ!

https://newsfirstlive.com/wp-content/uploads/2024/04/KSRTC-Bus-Accident-1.jpg

Load More