newsfirstkannada.com

ತಲೆಗೆ ದುಪ್ಪಟ ಕಟ್ಟಿ ಮೊಬೈಲ್​​ನಲ್ಲಿ ಟಾಕಿಂಗ್ ಟ್ರಾವೆಲ್; ಬೆಂಗಳೂರು ಪೊಲೀಸರಿಂದ ಮಹಿಳೆಗೆ 5000 ರೂ ದಂಡ..!

Share :

Published April 1, 2024 at 12:56pm

Update April 1, 2024 at 1:31pm

  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮಹಿಳೆಗೆ ಫೈನ್

  ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

  ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ

ಬೆಂಗಳೂರು: ಗಾಡಿ ಓಡಿಸುವಾಗ ಟ್ರಾಫಿಕ್ ರೂಲ್ಸ್​ ಫಾಲೋ ಮಾಡ್ರೋ ಎಂದು ಪೊಲೀಸರು ಪದೇ ಪದೆ ಹೇಳ್ತಾರೆ. ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮ ಕೂಡ ಮಾಡ್ತಿದೆ. ಹೀಗಿದ್ದೂ ಕೆಲವರು ಮಾತೇ ಕೇಳಲ್ಲ ಅಂತಾರೆ! ಅದರಂತೆ ಬೆಂಗಳೂರಲ್ಲಿ ಮಹಿಳೆಯೋರ್ವಳು ಗಾಡಿ ಓಡಿಸುವಾಗ ಫೋನ್​ನಲ್ಲಿ ಮಾತನಾಡಲು ಎಕ್ಸ್​​ಟ್ರಾಡಿನರಿ ಪ್ಲಾನ್ ಮಾಡಿದ್ದ ಲೇಡಿ ಸಿಕ್ಕಿಬಿದ್ದಾಳೆ!

ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿತ್ತು. ಸ್ಕೂಟಿ ಓಡಿಸುತ್ತಿದ್ದ ಮಹಿಳೆ ಫೋನ್​ನಲ್ಲಿ ಮಾತನಾಡುತ್ತ ಹೋಗುತ್ತಿದ್ದಳು. ತಲೆಗೆ ವೇಲ್ (ದುಪ್ಪಟ್ಟ) ಬಿಗಿದು, ಕಿವಿಯೊಳಗೆ ಮೊಬೈಲ್ ಸಿಕ್ಕಿಸಿಕೊಂಡು ಮಾತನಾಡುತ್ತ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಸ್ಕೂಟಿ ಓಡಿಸ್ತಿದ್ದಳು.

ಇದನ್ನೂ ಓದಿ: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್.. ಕಾರಣ ಇಲ್ಲಿದೆ

ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ವಿಡಿಯೋವನ್ನು ಸೋಶಿಯಲ್ ಮೀಡಿಯಾ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಹೆಲ್ಮೆಟ್ ಇಲ್ಲದೇ ಮೊಬೈಲ್​​ನಲ್ಲಿ ಮಾತನಾಡುತ್ತ ಹೋಗ್ತಿದ್ದ ಮಹಿಳೆಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಗಾಡಿಗೆ ಇನ್​ಶ್ಯುರೆನ್ಸ್, ಲೈಸೆನ್ಸ್ ಕೂಡ ಇಲ್ಲದಿರೋದು ಗೊತ್ತಾಗಿದೆ. ಹೀಗಾಗಿ ಪೊಲೀಸರು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಲೆಗೆ ದುಪ್ಪಟ ಕಟ್ಟಿ ಮೊಬೈಲ್​​ನಲ್ಲಿ ಟಾಕಿಂಗ್ ಟ್ರಾವೆಲ್; ಬೆಂಗಳೂರು ಪೊಲೀಸರಿಂದ ಮಹಿಳೆಗೆ 5000 ರೂ ದಂಡ..!

https://newsfirstlive.com/wp-content/uploads/2024/04/BNG-POLICE.jpg

Load More