Advertisment

Watch: ಮಗ ಅರೆಸ್ಟ್ ಸುದ್ದಿ ತಿಳಿದು ತಂದೆ ಸಾವು.. ‘ಕೊನೆ ಸಲ ಅಪ್ಪನ ನೋಡ್ತಾನೆ ಕರೆಸಿ’ ಎಂದು ಕಣ್ಣೀರಿಟ್ಟ ಅನು ಅಕ್ಕ

author-image
Ganesh
Updated On
Watch: ಮಗ ಅರೆಸ್ಟ್ ಸುದ್ದಿ ತಿಳಿದು ತಂದೆ ಸಾವು.. ‘ಕೊನೆ ಸಲ ಅಪ್ಪನ ನೋಡ್ತಾನೆ ಕರೆಸಿ’ ಎಂದು ಕಣ್ಣೀರಿಟ್ಟ ಅನು ಅಕ್ಕ
Advertisment
  • A7 ಅನು ಕುಮಾರ್ ತಂದೆ ಹೃದಯಾಘಾತದಿಂದ ಸಾವು
  • ಅನು ಕುಮಾರ್ ಅರೆಸ್ಟ್ ಆಗ್ತಿದ್ದಂತೆ ಹಾರ್ಟ್​ ಅಟ್ಯಾಕ್ ಆಗಿದೆ
  • ಅನು ಕುಮಾರ್​​ನ ಕರೆಸುವಂತೆ ಪಟ್ಟು ಹಿಡಿದ ಕುಟುಂಬಸ್ಥರು

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು A7 ಅನು ಕುಮಾರ್ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದ. ಈ ಸುದ್ದಿ ತಿಳಿದ ಅನು ತಂದೆ ಚಂದ್ರಪ್ಪ (55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisment

ಅನು ಕುಮಾರ್ ಅಕ್ಕ ಅವರು, ನ್ಯೂಸ್​ಫಸ್ಟ್ ಜೊತೆ ಮಾತನಾಡುತ್ತ ಕಣ್ಣೀರು ಇಟ್ಟಿದ್ದಾರೆ. ಪೊಲೀಸರು ತಮ್ಮನನ್ನು ಅರೆಸ್ಟ್ ಮಾಡಿಲ್ಲ ಅಂದರೆ ಅಪ್ಪ ಬದುಕಿರುತ್ತಿದ್ದ. ಆತನನ್ನು ಕೊನೆ ಬಾರಿ ನೋಡಲು ತಮ್ಮನನ್ನು ಕರೆಸಬೇಕು ಎಂದು ದುಃಖಿತರಾಗಿದ್ದಾರೆ.

ಇದನ್ನೂ ಓದಿ:ದರ್ಶನ್​​ಗೆ ಕಾಡಿತ್ತು ಪಶ್ಚತಾಪ.. ‘ಡೆವಿಲ್ ಶೂಟಿಂಗ್​​​ನಲ್ಲಿ ನಟ ಹೇಗಿದ್ದರು ಅಂದರೆ..’

ಅನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ಆತನನ್ನು ಕರೆಸಿ. ಅವನು ಯಾವುದೇ ತಪ್ಪು ಮಾಡಿಲ್ಲ. ಕೊನೆ ಸಲ ನಮ್ಮಪ್ಪನ ನೋಡುತ್ತಾನೆ ಕರೆಸಿ ಸಾರ್. ಬೆಳಗ್ಗೆಯಿಂದ ಮಗಾ, ಮಗಾ ಅಂತಾ ಹೇಳ್ತಿದ್ದರು. ಅವನೇ ನಮಗೆ ಫಿಲ್ಲರ್, ಬೇರೆ ಯಾರೂ ಇಲ್ಲ. ಅದೇ ಚಿಂತೆಯಲ್ಲೇ ನಮ್ಮಪ್ಪ ಹಾರ್ಟ್​ ಅಟ್ಯಾಕ್ ಆಗಿ ಸತ್ತೋದ. ನಮಗೆ ಇನ್ನು ಯಾರು ದಿಕ್ಕು. ಅನು ಬೇಗ ಬಾರೋ? ಬೆಳಗ್ಗೆಯಿಂದ ನಿಮ್ಮಪ್ಪ ಚೆನ್ನಾಗಿದ್ದ. ಅನು ಬರುವ ತನಕ ನಮ್ಮಪ್ಪನ ದೇಹ ತೆಗೆಯಲು ಬಿಡೋದಿಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್​​ ಕೇಸ್​​​ನಲ್ಲಿ ರಾಜಕಾರಣಿಗಳ ಪ್ರಭಾವ? ರಕ್ಷಣೆಗೆ ಬಂದ್ರಾ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು?

ಆಗಿದ್ದೇನು..?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅನು ಕೂಡ ಪ್ರಮುಖ ಆರೋಪಿಯಾಗಿದ್ದ. ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ 7ನೇ ಆರೋಪಿ ಅನು, ಜಗ್ಗಿ ಎಂಬುವ ಮತ್ತೊಬ್ಬ ಆರೋಪಿ ಜೊತೆ ಇಂದು ಡಿವೈಎಸ್‌ಪಿ ಕಚೇರಿಯಲ್ಲಿ ಶರಣಾಗಿದ್ದ. ಮಗ ಕೊಲೆ ಕೇಸ್‌ನಲ್ಲಿ ಆರೋಪಿ ಅಂತ ತಿಳಿಯುತ್ತಿದ್ದಂತೆ ಚಂದ್ರಪ್ಪ ಆತಂಕಕ್ಕೆ ಒಳಗಾಗಿದ್ದರು. ಚಂದ್ರಪ್ಪ ಅವರಿಗೆ ಹೃದಾಯಘಾತವಾಗಿದೆ.ಅನುಕುಮಾರ್ ತಂದೆ ಚಂದ್ರಪ್ಪ ಗಾರೆ ಕೆಲಸ ಮಾಡಿಕೊಂಡಿದ್ದ. ಮಗನ ಸ್ಥಿತಿ ನೆನೆದು ಮನೆಯಿಂದ ಆಚೆ ಬಂದ ಚಂದ್ರಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅನು ಸ್ನೇಹಿತರು ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದರು. ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಲೋ ಬಿಪಿ ಆಗಿದೆ. ಹೃದಯಾಘಾತದಿಂದ ಚಂದ್ರಪ್ಪ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಸೈಲೆಂಟ್ ವೆಪನ್.. ಇವರೇ ವಿಶ್ವಕಪ್ ಗೆಲ್ಲಿಸಿಕೊಡೋಡು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment