newsfirstkannada.com

ಟೀಂ ಇಂಡಿಯಾದಲ್ಲಿ ಒಂದು ಸೈಲೆಂಟ್ ವೆಪನ್.. ಇವರೇ ವಿಶ್ವಕಪ್ ಗೆಲ್ಲಿಸಿಕೊಡೋಡು..!

Share :

Published June 14, 2024 at 2:50pm

  ಸೂಪರ್​ 8ಗೆ ಗ್ರ್ಯಾಂಡ್​​ ಎಂಟ್ರಿ ಕೊಟ್ಟ ಟೀಮ್​ ಇಂಡಿಯಾ

  ಅಖಾಡದಲ್ಲಿ ‘ಸೈಲೆಂಟ್​ ಕಿಲ್ಲರ್​​’ ವೈಲೆಂಟ್​ ಪರ್ಫಾಮೆನ್ಸ್​

  ಬಿರುಗಾಳಿಯಂತಹ ದಾಳಿಗೆ ಎದುರಾಳಿಗಳು ತಬ್ಬಿಬ್ಬು

ಈ ಬಾರಿಯ ವಿಶ್ವಕಪ್​ನಲ್ಲಿ ಸೈಲೆಂಟ್​ ಸೂಪರ್ ಸ್ಟಾರ್​​​ ಉದಯವಾಗಿದೆ. ಸೈಲೆಂಟ್​ ಕಿಲ್ಲರ್​ ನೀಡ್ತಿರೋ ವೈಲೆಂಟ್​​​​​ ಪರ್ಫಾಮೆನ್ಸ್​ಗೆ ಎದುರಾಳಿಗಳು ತಬ್ಬಿಬ್ಬಾಗಿದ್ದಾರೆ. ಟೀಮ್​ ಇಂಡಿಯಾ ಸೂಪರ್​ 8 ಹಂತಕ್ಕೂ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದೆ. ಟೀಮ್​ ಇಂಡಿಯಾ ಯಶಸ್ಸಿನ ಹಿಂದಿರೋ ಸೈಲೆಂಟ್​ ಸೂಪರ್​ ಸ್ಟಾರ್​ ವೇಗಿ ಆರ್ಷ್​ದೀಪ್​ ಸಿಂಗ್​. ವಿಶ್ವಕಪ್​ ಕದನದಲ್ಲಿ ಆರ್ಷ್​ದೀಪ್​ ಅಬ್ಬರ ಟೀಮ್​ ಇಂಡಿಯಾಗೆ ಆನೆಬಲವನ್ನೇ ತಂದಿದೆ.

ಐಸಿಸಿ ಟ್ರೋಫಿಯ ಕೊರಗಿಗೆ ಬ್ರೇಕ್​ ಹಾಕೋ ದೊಡ್ಡ ಕನಸು ಹೊತ್ತು ನ್ಯೂಯಾರ್ಕ್​ಗೆ ಹಾರಿರುವ ಮೆನ್​ ಇನ್​ ಬ್ಲೂ ಪಡೆ ಆರಂಭದಲ್ಲೇ ಸಕ್ಸಸ್​ ಕಂಡಿದೆ. ನ್ಯೂಯಾರ್ಕ್​ನ ಅನ್​ ಪ್ರೆಡಿಕ್ಟಬಲ್​ ಪಿಚ್​ನಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹ್ಯಾಟ್ರಿಕ್​ ಗೆಲುವಿನ ಬಲದೊಂದಿಗೆ, ಸೂಪರ್​ 8 ಸ್ಟೇಜ್​​​ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ:‘ಕಾಂಗ್ರೆಸ್​ನ ಅಚ್ಚರಿ ಅಭ್ಯರ್ಥಿ ಜೈಲು ಕಂಬಿ ಎಣಿಸ್ತಿದ್ದಾರೆ’ ಸಂಚಲನ ಸೃಷ್ಟಿಸಿದ ಯೋಗೇಶ್ವರ್ ಹೇಳಿಕೆ..!

ಶ್ವಕಪ್​ ಆರಂಭಕ್ಕೂ ಮುನ್ನ ಕ್ರಿಕೆಟ್​ ಸರ್ಕಲ್​ನಲ್ಲಿ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಯಾರಾಗ್ತಾರೆ ಅನ್ನೋ ಚರ್ಚೆ ನಡೆದಿತ್ತು. ಆಗ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ರಿಷಭ್​ ಪಂತ್​.. ಅಷ್ಟೇ ಯಾಕೆ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​​ಪ್ರಿತ್​ ಬೂಮ್ರಾ ಹೆಸರನ್ನ ಕೂಡ ಬಹುತೇಕರು ಹೇಳಿದ್ರು. ಆದ್ರೆ, ಇವರೆಲ್ಲರನ್ನ ಈ ಯಂಗ್​ಗನ್​ ಇದೀಗ ಮೀರಿಸಿದ್ದಾರೆ. ವಿಶ್ವಕಪ್​ ಅಖಾಡದಲ್ಲಿ ಈ ಸೈಲೆಂಟ್​ ಕಿಲ್ಲರ್​ ತನ್ನ ವೈಲೆಂಟ್​ ಆಟದಿಂದ ಮಿಂಚಿದ್ದಾರೆ. ಅಂದ್ಹಾಗೆ ಆ ಸೈಲೆಂಟ್​ ಸೂಪರ್ ಸ್ಟಾರ್​ ಬೇರಾರೂ ಅಲ್ಲ. ಒನ್​ ಅಂಡ್ ಒನ್ಲೀ ವೇಗಿ ಆರ್ಷ್​ದೀಪ್​ ಸಿಂಗ್​.

ಆರ್ಷ್​​ದೀಪ್ ಅಬ್ಬರ.. ಸೂಪರ್​ 8ಗೆ ಟೀಮ್​ ಇಂಡಿಯಾ
ಯುಎಸ್​ಎ ವಿರುದ್ಧದ ಪಂದ್ಯದ ರಿಯಲ್​ ಮ್ಯಾಚ್​ ವಿನ್ನರ್​ ವೇಗಿ ಆರ್ಷ್​ದೀಪ್​ ಸಿಂಗ್​. ಟಫ್​ ಟ್ರ್ಯಾಕ್​ನಲ್ಲಿ ಸೂರ್ಯಕುಮಾರ್ ಯಾದವ್​ ಅರ್ಧಶತಕ ಸಿಡಿಸಿ ಮಿಂಚಿದ್ರು. ಆದ್ರೆ, ಅದಕ್ಕೂ ಮುನ್ನ ಆ ಪಿಚ್​​ನಲ್ಲಿ ಪಂಜಾಬ್​ ಪುತ್ತರ್​ ಆರ್ಷ್​ದೀಪ್​ ಧೂಳೆಬ್ಬಿಸಿದ್ರು. ಮೊದಲ ಎಸೆತದಲ್ಲೇ ವಿಕೆಟ್​ ಉರುಳಿಸಿದ ಆರ್ಷ್​ದೀಪ್​​, ಬಿರುಗಾಳಿಯಂತಾ ದಾಳಿ ಸಂಘಟಿಸಿದ್ರು.

ಇದನ್ನೂ ಓದಿ:ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ.. ದರ್ಶನ್ ವಿರುದ್ಧ ಸಿಕ್ಕಿದೆ ಎನ್ನಲಾದ 16 ಸಾಕ್ಷಿಗಳ ಲಿಸ್ಟ್ ಇಲ್ಲಿದೆ..!

ಅಮೆರಿಕಾ ವಿರುದ್ಧದ ಪಂದ್ಯದಲ್ಲಿ ಆರ್ಷ್​​ದೀಪ್​ ಸಿಂಗ್​ ಬೆಂಕಿಯಂಥ ದಾಳಿ ನಡೆಸಿದ್ರು. ಮೊದಲ ಎಸೆತದಲ್ಲೇ ವಿಕೆಟ್​ ಉರುಳಿಸಿದ ಆರ್ಷ್​ದೀಪ್,​ ಹಾಕಿದ 4 ಓವರ್​​ಗಳಲ್ಲಿ ಬಿಟ್ಟು ಕೊಟ್ಟಿದ್ದು ಕೇವಲ 4 ರನ್​ ಮಾತ್ರ. 2.25ರ ಎಕಾನಮಿಯಲ್ಲಿ ಬೌಲಿಂಗ್​ ದಾಳಿ ನಡೆಸಿದ ಆರ್ಷ್​ದೀಪ್​​ 4 ವಿಕೆಟ್​ ಉರುಳಿಸಿದ್ರು. ಈ ಸೂಪರ್​ ಸ್ಪೆಲ್​ ಟೀಮ್​ ಇಂಡಿಯಾ ಗೆಲುವಿನಲ್ಲಿ ಮೇಜರ್​ ರೋಲ್​ ಪ್ಲೇ ಮಾಡಿತು.

ಪಾಕ್​ ವಿರುದ್ಧವೂ ಆರ್ಷ್​ದೀಪ್​ ಸಿಂಗ್​ ದರ್ಬಾರ್
ಬದ್ಧವೈರಿ ಪಾಕ್​ ವಿರುದ್ಧದ ಪಂದ್ಯದಲ್ಲಿ 96 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್​ಗಿಳಿದ ಆರ್ಷ್​ದೀಪ್​ ಪಾಕಿಸ್ತಾನದ ಪ್ರಬಲ ಬೌಲಿಂಗ್​ ದಾಳಿಯನ್ನ ದಿಟ್ಟವಾಗಿ ಎದುರಿಸಿದ್ರು. ನಸೀಮ್​ ಶಾ, ಮೊಹಮ್ಮದ್​ ಅಮೀರ್​, ಶಾಹೀನ್​ ಅಫ್ರಿದಿಯ ಎಸೆತಗಳನ್ನು ಎದುರಿಸಿದ ಆರ್ಷ್​ದೀಪ್,​ 13 ಎಸೆತಗಳಲ್ಲಿ 1 ಬೌಂಡರಿ ಸಹಿತ 9 ರನ್​ಗಳ ಅಮೂಲ್ಯ ಕಾಣಿಕೆ ನೀಡಿದ್ರು. ಈ ಮೂಲಕ ಟೀಮ್​ ಇಂಡಿಯಾದ 4ನೇ ಟಾಪ್​ ಸ್ಕೋರರ್​ ಆಗಿ ಹೊರಹೊಮ್ಮಿದರು.

ಇದನ್ನೂ ಓದಿ:ದರ್ಶನ್ ಮತ್ತು ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್​ಮೆಂಟ್ ಅನುಮಾನ -ಉಮಾಪತಿ ಸ್ಫೋಟಕ ಹೇಳಿಕೆ

ಕೊನೆಯ ಓವರ್​ ಬೌಲಿಂಗ್​ನಲ್ಲೂ ಕಮಾಲ್​
ಪಾಕ್​ ವಿರುದ್ಧದ ಪಂದ್ಯದಲ್ಲಿ ಭಾರತ ಕೊನೆಯ 6 ಎಸೆತಗಳಲ್ಲಿ 17 ರನ್​​ಗಳನ್ನ ಡಿಫೆಂಡ್​ ಮಾಡಿಕೊಳ್ಳಬೇಕಿತ್ತು. ಈ ವೇಳೆ ದಾಳಿಗಿಳಿದ ಆರ್ಷ್​ದೀಪ್​ ಸಿಂಗ್​ ಮೊದಲ ಎಸೆತದಲ್ಲೇ ಡೇಂಜರಸ್​ ಇಮಾದ್​ ವಾಸಿಮ್​ಗೆ ಗೇಟ್​ಪಾಸ್​ ನೀಡಿದ್ರು. ಒಟ್ಟು 11 ರನ್​ಗಳನ್ನು ಬಿಟ್ಟುಕೊಟ್ಟ ಪಂಜಾಬ್​ ಪುತ್ತರ್​ 6 ರನ್​ಗಳ ಗೆಲುವಿಗೆ ಕಾರಣರಾದ್ರು.

ಬದ್ಧವೈರಿ ಪಾಕ್​ ಎದುರಿನ ಗೆಲುವಿನ ಆರ್ಷ್​ದೀಪ್​, ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡೂ ಕ್ರೂಶಿಯಲ್​ ರೋಲ್​ ಪ್ಲೇ ಮಾಡ್ತು. ಈ ಪಂದ್ಯ ಮಾತ್ರವಲ್ಲ.. ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಆರ್ಷ್​​ದೀಪ್​ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪರ್ಫಾಮೆನ್ಸ್​ ನೀಡಿದ್ದಾರೆ. 12 ಓವರ್​ ಬೌಲಿಂಗ್​ ಮಾಡಿ 7 ವಿಕೆಟ್​ ಕಬಳಿಸಿ ಕೇವಲ 6.25ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಸೈಲೆಂಟ್​ ಆಗಿಯೇ ಟೀಮ್​ ಇಂಡಿಯಾದ ಗೆಲುವಿನ ಸೂಪರ್​​ ಸ್ಟಾರ್​ ಆಗಿ ಹೊರ ಹೊಮ್ಮಿದ್ದಾರೆ.

ವಿಶೇಷ ವರದಿ: ವಸಂತ್​ ಮಳವತ್ತಿ

ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದಲ್ಲಿ ಒಂದು ಸೈಲೆಂಟ್ ವೆಪನ್.. ಇವರೇ ವಿಶ್ವಕಪ್ ಗೆಲ್ಲಿಸಿಕೊಡೋಡು..!

https://newsfirstlive.com/wp-content/uploads/2024/06/TEAM-INDIA-3.jpg

Load More