ಉತ್ತರಾಖಂಡದ ಚಮೋಲಿ ಹೇಮಕುಂಡ್ ಸಾಹಿಬ್ ಅಲ್ಲಿ ಸಿಕ್ಕಿಬಿದ್ದ ಕ್ರೇಜಿ ಕಪಲ್ಸ್
ಪೊಲೀಸ್ ಅಧಿಕಾರಿಗಳು ಹಾಕಿದ ಬಲೆಗೆ ಈ ಕುಖ್ಯಾತ ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ!
ಕುಖ್ಯಾತ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದು ಅಷ್ಟಿಷ್ಟಲ್ಲ
ದೆಹಲಿ: ಬರೋಬ್ಬರಿ 8.5 ಕೋಟಿ ರೂಪಾಯಿಯನ್ನು ಗಂಡ, ಹೆಂಡತಿ ದರೋಡೆ ಮಾಡಿ ಸದ್ದಿಲ್ಲದೇ ಪರಾರಿಯಾಗಿದ್ದರು. ಈ ಕಿಲಾಡಿ ಕಪಲ್ ಅನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟಿದ್ದು ಅಷ್ಟಿಷ್ಟಲ್ಲ. ಆದರೆ ಪೊಲೀಸ್ ಅಧಿಕಾರಿಗಳು ಹಾಕಿದ ಬಲೆಗೆ ಈ ಕಳ್ಳರು ಸಿಕ್ಕಿಬಿದ್ದಿದ್ದೇ ಬಲು ರೋಚಕ. ಲೂಧಿಯಾನದಲ್ಲಿ ಕಳ್ಳರ ಗ್ಯಾಂಗ್ವೊಂದು ಜೂನ್ 10ರಂದು 8 ಕೋಟಿ 49 ಲಕ್ಷ ರೂಪಾಯಿಯನ್ನು ದರೋಡೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕು ಹಸೀನಾ ಎಂದೇ ಕುಖ್ಯಾತಿ ಪಡೆದಿದ್ದ ಮಂದೀಪ್ ಕೌರ್ ದಂಪತಿಗಳನ್ನು ಉತ್ತರಾಖಂಡದ ಚಮೋಲಿ ಹೇಮಕುಂಡ್ ಸಾಹಿಬ್ ಎಂಬ ಸ್ಥಳದಲ್ಲಿ ಅರೆಸ್ಟ್ ಮಾಡಿದ್ದಾರೆ.
ಕಳ್ಳರು ಸಿಕ್ಕಿಬಿದ್ದಿದ್ದೇ ಬಲು ರೋಚಕ.. ಅದು ಹೇಗೆ..?
ಮನದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ನೇಪಾಳಕ್ಕೆ ಹೋಗಲು ಪ್ಲಾನ್ ಮಾಡಿದ್ದರಂತೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಅದಕ್ಕೂ ಮೊದಲು ಈ ಕಳ್ಳ ದಂಪತಿ ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಟ್ ಸಾಹಿಬ್ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿದ್ದರು ಎಂದು ಪೊಲೀಸರಿಗೆ ತಿಳಿದು ಬಂದಿತ್ತು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಪೊಲೀಸ್ ಅಧಿಕಾರಿಗಳು ಒಂದು ಉಪಾಯವನ್ನು ಮಾಡಿದ್ದರು. ಅದುವೇ 10 ರೂಪಾಯಿ ಜ್ಯೂಸ್.
ಉತ್ತರಾಖಂಡದ ಸಿಖ್ ಯಾತ್ರಾ ಸ್ಥಳಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಇದರ ನಡುವೆ ಈ ಕಳ್ಳರನ್ನು ಮಟ್ಟ ಹಾಕಬೇಕೆಂದು ಪೊಲೀಸ್ರು ಉಪಾಯ ಮಾಡಿದ್ದರು. ಹೀಗಾಗಿ ಯಾತ್ರಾರ್ಥಿಗಳಿಗೆ ಉಚಿತವಾಗಿ ಜ್ಯೂಸ್ ವಿತರಿಸಲು ಪೊಲೀಸರು ಯೋಜನೆ ಮಾಡಿದ್ದಾರೆ. ಅಷ್ಟರಲ್ಲಿ ಆರೋಪಿ ದಂಪತಿ ಅಲ್ಲಿಗೆ ಬಂದಿದ್ದಾರೆ. ಅವರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು, ಆದರೆ ಜ್ಯೂಸ್ಗಳನ್ನು ಕುಡಿಯಲು ತಮ್ಮ ಮುಖಗಳನ್ನು ತೆರೆಯಬೇಕಾಗಿತ್ತು. ಇದೇ ವೇಳೆ ತಾವು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳಾದ ಮಂದೀಪ್ ಕೌರ್ ಹಾಗೂ ಜಸ್ವಿಂದರ್ನನ್ನು ಗುರುತಿಸಿದ್ದಾರೆ. ಬಳಿಕ ಹೇಮಕುಂಡ್ ಸಾಹಿಬ್ನಲ್ಲಿ ಪೊಲೀಸರು ದಂಪತಿಯನ್ನು ಸ್ವಲ್ಪ ದೂರದವರೆಗೆ ಹಿಂಬಾಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಈ ದಂಪತಿಯ ಜೊತೆಗೆ ಪಂಜಾಬ್ನ ಗಿಡ್ಡರ್ಬಾಹಾದಿಂದ ಮತ್ತೊಬ್ಬ ಆರೋಪಿ ಗೌರವ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಆರೋಪಿಗಳ ಪೈಕಿ 9 ಮಂದಿಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ಅವರ ಬಳಿ ಇದ್ದ 21 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ.
Proud of @Ludhiana_Police & Counter Intelligence unit to solve the CMS Cash Robbery Case after arresting fugitive Mandeep Kaur @ Mona & her Husband Jaswinder Singh from #Uttarakhand
Kingpin of #LudhianaCashVanRobbery arrested in less than 100 hrs. (1/2) pic.twitter.com/VF2xkDVV83
— DGP Punjab Police (@DGPPunjabPolice) June 17, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ