newsfirstkannada.com

ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ವಿಡಿಯೋ ವೈರಲ್ ಮಾಡಿದ್ದು ಯಾಕೆ? ಸ್ಫೋಟಕ ಸಂಗತಿ ಬಾಯ್ಬಿಟ್ಟ ಆರೋಪಿ!

Share :

Published January 20, 2024 at 7:59pm

Update January 20, 2024 at 7:54pm

    ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾದ ಆರೋಪಿ

    ಎಡಿಟ್ ಮಾಡಿ ವಿಡಿಯೋ ಶೇರ್ ಮಾಡಿದ ಆರೋಪಿ ಹೇಳಿದ್ದೇನು?

    ಡೀಪ್ ಫೇಕ್​ ವಿಡಿಯೋ ವೈರಲ್ ಮಾಡಿದರೆ ಏನಾಗುತ್ತೆ ಗೊತ್ತಾ?

ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಡೀಪ್ ಫೇಕ್‌ ಕೇಸ್ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೊನೆಗೂ ಈ ಪ್ರಕರಣವನ್ನು ದೆಹಲಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದ ಕೇಸ್​ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇಮಾನಿ ನವೀನ್ (24) ಬಂಧಿತ ಆರೋಪಿ.

ದೆಹಲಿ ಪೊಲೀಸರು ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯೂ ರಶ್ಮಿಕಾ ಮಂದಣ್ಣ ಫ್ಯಾನ್ ಪೇಜ್ ಅಡ್ಮಿನ್ ಆಗಿದ್ದನಂತೆ. ಇದೇ ರೀತಿ ಇನ್ನಿಬ್ಬರು ಸೆಲಿಬ್ರೆಟಿಗಳ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿದ್ದನಂತೆ. ಈ ಆರೋಪಿ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಡೀಪ್ ಫೇಕ್ ವಿಡಿಯೋ ಸೃಷ್ಟಿ ಮಾಡಿದ್ದಾನಂತೆ. ಇಮಾನಿ ನವೀನ್ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾಗಿದ್ದಾನೆ.  ಸದ್ಯ ಆರೋಪಿ ಬಳಿಯಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್​ನನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ.

ಡೀಪ್ ಫೇಕ್ ಆರೋಪಿ ಸಿಕ್ಕಿದ್ದು ಹೇಗೆ? 

ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ನಟ, ನಟಿಯರು ಖಂಡಿಸಿದ್ದಾರೆ. ಈ ಡೀಪ್ ಫೇಕ್‌ ವಿಡಿಯೋದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಡೀಪ್ ಫೇಕ್‌ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್ ವಿಡಿಯೋ ಕೇಸ್‌ ಅನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ಸಾಕಷ್ಟು ಜಾಲಾಡಿದ್ದರು. ಬಹಳಷ್ಟು ಸೋಷಿಯಲ್ ಮೀಡಿಯಾಗಳನ್ನು ಹುಡುಕಾಡಿದರೂ ಡೀಪ್ ಫೇಕ್ ವಿಡಿಯೋ ಶೇರ್‌ ಮಾಡಿದ ಮೊದಲಿಗ ಯಾರು ಅನ್ನೋದು ಪತ್ತೆಯಾಗಿರಲಿಲ್ಲ. ಕೊನೆಗೆ ವಿಡಿಯೋ ಶೇರ್ ಮಾಡಿದ ಸಾವಿರಾರು ಮಂದಿಯಲ್ಲಿ 500 ಅಕೌಂಟ್‌ಗಳನ್ನು ಆಯ್ಕೆ ಮಾಡಲಾಗಿದೆ. ಈ 500 ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ 24 ವರ್ಷದ ಇಮಾನಿ ನವೀನ್ ಮೊದಲಿಗೆ ಅಪ್ಲೋಡ್ ಮಾಡಿರೋದು ಬಹಿರಂಗವಾಗಿದೆ.

ಇದನ್ನೂ ಓದಿ: ಗಂಡನ 3ನೇ ಮದುವೆ ಬಗ್ಗೆ ಸಾನಿಯಾ ಮಿರ್ಜಾಗೆ ಮೊದಲೇ ಗೊತ್ತಿತ್ತಾ? ಏನಿದರ ಅಸಲಿ ಕಹಾನಿ?

ಡೀಪ್‌ ಫೇಕ್ ವಿಡಿಯೋಗಳನ್ನು ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ದಂಡ ಜೊತೆಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ರೂಲ್ಸ್ ಜಾರಿ ಮಾಡಲಾಗಿದೆ. ವೈಯಕ್ತಿಕವಾಗಿ ತೇಜೋವಧೆ ಮಾಡಲೆಂದು ಸೋಷಿಯಲ್​ ಮೀಡಿಯಾಗಳಲ್ಲಿ ವಿಡಿಯೋವನ್ನು ವೈರಲ್ ಮಾಡಿದ್ರೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಸೆಕ್ಷನ್​ 66ರಡಿ ಆರೋಪಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿವರೆಗೆ ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ಯಾರೇ ಆಗಲಿ ಟ್ವಿಟ್ಟರ್​, ಫೇಸ್​ಬುಕ್​, ಇನ್​ಸ್ಟಾ ಹಾಗೂ ಯುಟ್ಯೂಬ್​​ನಲ್ಲಿ ವಿಡಿಯೋ ಶೇರ್ ಮಾಡುವ ಮುನ್ನ ಕಾನೂನು ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಒಬ್ಬರ ವೈಯಕ್ತಿಕ ಜೀವನಕ್ಕೆ ಕುಂದು ತರುವ ರೀತಿಯಲ್ಲಿ ವಿಡಿಯೋ ಶೇರ್ ಮಾಡಿದ್ರೆ ಅಂತವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ವಿಡಿಯೋ ವೈರಲ್ ಮಾಡಿದ್ದು ಯಾಕೆ? ಸ್ಫೋಟಕ ಸಂಗತಿ ಬಾಯ್ಬಿಟ್ಟ ಆರೋಪಿ!

https://newsfirstlive.com/wp-content/uploads/2024/01/rashmika-8.jpg

Load More