newsfirstkannada.com

ತಮಿಳುನಾಡಿನಿಂದ ಬಂದ ಟೋಪಿವಾಲ; ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ ಮಾಹಿತಿ ಪತ್ತೆ ಹಚ್ಚಿದ NIA

Share :

Published March 23, 2024 at 12:17pm

    ಶಂಕಿತ ವ್ಯಕ್ತಿ ಧರಿಸಿದ್ದ ಟೋಪಿ ಮೂಲ ಪತ್ತೆ ಹಚ್ಚಿದ NIA ತನಿಖಾ ತಂಡ

    ಟೋಪಿ ಖರೀದಿ ವೇಳೆ ಶಂಕಿತನ ಜೊತೆ ಮತ್ತೋರ್ವ ವ್ಯಕ್ತಿ ಕೂಡ ಇದ್ದ

    ರಾಮೇಶ್ವರಂ ಬ್ಲಾಸ್ಟ್‌ ಕೇಸ್ ಆರೋಪಿ ತಮಿಳುನಾಡಿಗೆ ಹೋಗಿದ್ದು ಯಾಕೆ?

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ. ಶಂಕಿತನ ಜಾಡು ಹಿಡಿದ NIAಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ಶಂಕಿತ ಆರೋಪಿ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಕಾರಣವಾದ ಶಂಕಿತ ಆರೋಪಿ ಸ್ಫೋಟಕ್ಕೂ ಮುನ್ನ ಎರಡು ತಿಂಗಳುಗಳ ಕಾಲ ತಮಿಳುನಾಡಿನಲ್ಲಿ ಉಳಿದಿದ್ದ. ತಮಿಳುನಾಡಿನಲ್ಲಿ ಶಂಕಿತನ ಜೊತೆಗಿದ್ದ ಮತ್ತೋರ್ವ ಮೋಸ್ಟ್ ವಾಂಟೆಡ್‌ ವ್ಯಕ್ತಿ ಸಂಪರ್ಕ ಇದ್ದು ಆತನನ್ನು NIA ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

‘ಟೋಪಿ’ ಕೊಟ್ಟ ಸ್ಫೋಟಕ ಸುಳಿವು
ಬೆಂಗಳೂರು ಸ್ಫೋಟಕ್ಕೂ ಮುನ್ನ ಶಂಕಿತ ಓಡಾಡಿದ್ದ ಜಾಡು ಹಿಡಿದು ಹೋದ ತನಿಖಾಧಿಕಾರಿಗಳಿಗೆ ಆರೋಪಿಯು ತಮಿಳುನಾಡಿನಿಂದ ಬಂದಿರೋದು ಪತ್ತೆಯಾಗಿದೆ. ಶಂಕಿತ ವ್ಯಕ್ತಿ ಧರಿಸಿದ್ದ ಟೋಪಿಯ ಮೂಲ ಸಹ ಪತ್ತೆ ಹಚ್ಚಲಾಗಿದೆ. ಆರೋಪಿಯು ತಮಿಳುನಾಡಿನ ಮಾಲ್ ಒಂದರಲ್ಲಿ ಟೋಪಿಯನ್ನು ಖರೀದಿಸಿದ್ದ. ಟೋಪಿ ಖರೀದಿ ವೇಳೆ ಶಂಕಿತನ ಜೊತೆ ಮತ್ತೋರ್ವ ವ್ಯಕ್ತಿ ಕೂಡ ಇದ್ದ. ಟೋಪಿ ಖರೀದಿ ವೇಳೆ ಇಬ್ಬರ ಮುಖ ಚಹರೆ ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಸಿಸಿಟಿವಿ ದೃಶ್ಯದ ಆಧಾರದಲ್ಲಿ ಎನ್‌ಐಎಯಿಂದ‌ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆ ಹೇಳಿಕೆಗೆ CM ಸ್ಟಾಲಿನ್ ಸಿಡಿಮಿಡಿ; ತಮಿಳುನಾಡಿಗರ ಕ್ಷಮೆ ಕೇಳಿದ ಕೇಂದ್ರ ಸಚಿವೆ..!

ತಮಿಳುನಾಡಿಗೂ ಶಂಕಿತನಿಗೂ ಏನು ಲಿಂಕ್?
ಮತ್ತೊಂದು ಸ್ಫೋಟಕ ವಿಚಾರ ಏನಂದ್ರೆ, ಎನ್‌ಐಎ ತನಿಖೆ ವೇಳೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆ ಇಬ್ಬರು ಕರ್ನಾಟಕದವರು ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆಯ ಮುಸಾವೀರ್‌ ಹುಸೇನ್, ಮತೀನ್ ತಾಹಾ ಎಂಬ ಬಗ್ಗೆ ಮಾಹಿತಿ NIAಗೆ ಲಭ್ಯವಾಗಿದೆ. ಇವರು ಕಳೆದ ಎರಡು ತಿಂಗಳು ತಮಿಳುನಾಡಿನ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಸಿಸಿಟಿವಿಗಳ ಸುಳಿವನ್ನ ಆಧರಿಸಿ ಶಂಕಿತರ ಪತ್ತೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳುನಾಡಿನಿಂದ ಬಂದ ಟೋಪಿವಾಲ; ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ ಮಾಹಿತಿ ಪತ್ತೆ ಹಚ್ಚಿದ NIA

https://newsfirstlive.com/wp-content/uploads/2024/03/rameshwaram-cafe-blast-1.jpg

Load More