/newsfirstlive-kannada/media/post_attachments/wp-content/uploads/2024/06/dboss25.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಗ್ಯಾಂಗ್‌ಗೆ ಕೋರ್ಟ್ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ. ದರ್ಶನ್ ಅವರ ಪೊಲೀಸ್ ಕಸ್ಟಡಿ ಮುಂದುವರಿಸಲು ನಿರ್ಧರಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ 12 ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನ ಹಾದಿ ತೋರಿಸಿದೆ.
ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!
ನಟ ದರ್ಶನ್ ಗ್ಯಾಂಗ್ ಅನ್ನು ಕೋರ್ಟ್‌ಗೆ ಹಾಜರುಪಡಿಸಿದ್ದ ಪೊಲೀಸರು ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ವಾದಿಸಿದ್ದರು. ತನಿಖೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿ ನೀಡಲಾಗಿದೆ. ಇಂದಿನಿಂದ ಮತ್ತೆ ಎರಡು ದಿನಗಳ ಕಾಲ ನಟ ದರ್ಶನ್ ಸೇರಿ 4 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ದರ್ಶನ್ ಮತ್ತು 3 ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಇಂದು ಕೋರ್ಟ್‌ನಿಂದ ದರ್ಶನ್ ಅವರನ್ನ ಮತ್ತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಶನಿವಾರ ಮತ್ತೆ ದರ್ಶನ್ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಬೇಕಾಗಿದೆ.
ಇದನ್ನೂ ಓದಿ: VIDEO: ಹಾಸನದಲ್ಲಿ ಹಾಡಹಗಲೇ ಶೂಟೌಟ್‌ಗೆ ಹೊಸ ಟ್ವಿಸ್ಟ್; ಇಬ್ಬರ ಸಾವಿಗೆ ಅಸಲಿ ಕಾರಣವೇನು?
ಜೈಲು ಪಾಲಾದ ಆರೋಪಿಗಳು
A1 - ಪವಿತ್ರಾ ಗೌಡ
A3 - ಪವನ್
A4 ರಾಘವೇಂದ್ರ
A5 ನಂದೀಶ
A6 ಜಗದೀಶ @ ಜಗ್ಗ
A7 ಅನು@ ಅನು ಕುಮಾರ್
A11 - ನಾಗರಾಜ್
A12 - ಲಕ್ಷ್ಮಣ್
A13 - ದೀಪಕ್
A16 - ಕೇಶವಮೂರ್ತಿ
A8 - ರವಿ (ಈಗಾಗಲೇ ಜೈಲಿನಲ್ಲಿ ಇದ್ದಾರೆ)
A15 - ಕಾರ್ತಿಕ್ (ಈಗಾಗಲೇ ಜೈಲಿನಲ್ಲಿ ಇದ್ದಾರೆ)
ಪೊಲೀಸ್ ಕಸ್ಟಡಿಗೆ
A2 - ದರ್ಶನ್
A9 - ಧನರಾಜ್
A10 - ವಿನಯ್
A14 - ಪ್ರದೂಶ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ