newsfirstkannada.com

1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!

Share :

Published June 20, 2024 at 2:28pm

  2015ರಲ್ಲಿ ಮೆಕ್ಕಾದಲ್ಲಿ 2,400 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು

  2024ರ ಹಜ್ ಯಾತ್ರೆಗೆ ಹೋಗಿದ್ದ ಭಾರತೀಯರಲ್ಲಿ 80 ಮಂದಿ ಸಾವು

  ಜಮ್ಮು ಕಾಶ್ಮೀರದ 9 ಮಂದಿ, ಬೆಂಗಳೂರಿನ ಇಬ್ಬರು ಕೊನೆಯುಸಿರು

ರಿಯಾದ್: ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು ಅನ್ನೋದು ಇಸ್ಲಾಂ ಧರ್ಮದ ನಿಯಮ. ಬದುಕಿದ್ದಾಗ ಹಜ್ ಯಾತ್ರೆ ಕೈಗೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಮುಸ್ಲಿಂರ ಆಸೆ. ಪ್ರತಿ ವರ್ಷ ಲಕ್ಷ, ಲಕ್ಷ ಮುಸ್ಲಿಂ ಬಾಂಧವರು ಮೆಕ್ಕಾ ಮದೀನಾಕ್ಕೆ ತೆರಳಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಾರೆ.

ಈ ಬಾರಿ ಸೌದಿ ಅರೇಬಿಯಾದಲ್ಲಿ ಹಜ್‌ ಯಾತ್ರೆಗೆ ತೆರಳಿದವರು ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮೆಕ್ಕಾದ ರಸ್ತೆ ಬೀದಿ, ಬೀದಿಯಲ್ಲಿ ಹೆಣದ ರಾಶಿಗಳು ಬಿದ್ದಿದ್ದು, ಯಾತ್ರಾರ್ಥಿಗಳ ಸಾವಿನ ಸಂಖ್ಯೆ 922ಕ್ಕೆ ತಲುಪಿದೆ. ಹಜ್ ಯಾತ್ರೆಗೆ ಹೋಗಿದ್ದ ಭಾರತೀಯರಲ್ಲಿ 80 ಮಂದಿ ಉಸಿರು ಚೆಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹಾಸನ To ಟೀಂ ಇಂಡಿಯಾ.. ಡೇವಿಡ್​ ಜಾನ್ಸನ್​ ಆತ್ಮಹತ್ಯೆ ದಾರಿ ಹಿಡಿದಿದ್ದೇಕೆ? 

ಬೆಂಗಳೂರಿನ ಇಬ್ಬರು ಸಾವು
ಹಜ್‌ ಯಾತ್ರೆಯಲ್ಲಿ ಸಾವನ್ನಪ್ಪಿದ್ದ 922 ಮಂದಿಯ ಪೈಕಿ 80 ಮಂದಿ ಭಾರತೀಯರು ಸೇರಿದ್ದಾರೆ. ಜಮ್ಮು ಕಾಶ್ಮೀರದ 9 ಮಂದಿ, ಬೆಂಗಳೂರಿನ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 922 ಮಂದಿ ಪೈಕಿ 600 ಮಂದಿ ಈಜಿಪ್ಟಿಯನ್ನರು. ಇನ್ನುಳಿದವರು ಜೋರ್ಡಾನ್, ಇಂಡೋನೇಷ್ಯಾ, ಇರಾನ್, ಸೆನಗಲ್, ಟುನಿಷಿಯಾ, ಕುರ್ದಿಸ್ತಾನ್‌ ದೇಶದ ಯಾತ್ರಾರ್ಥಿಗಳು ಎನ್ನಲಾಗಿದೆ. ಇನ್ನೂ ಸಾಕಷ್ಟು ಮಂದಿ ಯಾತ್ರಾರ್ಥಿಗಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಯಾತ್ರಾರ್ಥಿಗಳ ಸಾವಿಗೆ ಕಾರಣವೇನು?
ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಉಷ್ಣಾಂಶ, ಬಿಸಿ ಗಾಳಿ, ಹೀಟ್ ಸ್ಟ್ರೋಕ್‌ನಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಜ್‌ ಯಾತ್ರೆ ಕೈಗೊಂಡಿರುವ ಸಾವಿರಾರು ಮಂದಿ ಯಾವುದೇ ನೊಂದಣಿ ಮಾಡಿಸಿಲ್ಲ. ಅವರಿಗೆಲ್ಲಾ ವಸತಿ ವ್ಯವಸ್ಥೆ, AC ಸೌಲಭ್ಯ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಹೆಚ್ಚಾದ ಉಷ್ಣಾಂಶದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್

ಸೌದಿ ಅರೇಬಿಯಾದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ 0.4 ಡಿಗ್ರಿ ಉಷ್ಣಾಂಶ ಏರಿಕೆಯಾಗುತ್ತಿದೆ. 2024ರಲ್ಲಿ 51.8 ಡಿಗ್ರಿಯವರೆಗೂ ಉಷ್ಣಾಂಶ ದಾಖಲಾಗಿ 922 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1.75 ಲಕ್ಷ ಭಾರತೀಯರು ಹಜ್ ಯಾತ್ರೆ ಹೋಗಿದ್ದಾರೆ.

ಹಜ್‌ ಯಾತ್ರೆ ಇತಿಹಾಸದಲ್ಲೇ 3ನೇ ದುರಂತ!
ಮುಸ್ಲಿಂರು ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು ಎನ್ನುವುದು ಇಸ್ಲಾಂ ನಿಯಮ. ಇಸ್ಲಾಂನಲ್ಲಿ ಐದು ಪಿಲ್ಲರ್‌ಗಳಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವುದು ಕೂಡ ಒಂದು. ಕಳೆದ ವರ್ಷ ಹೆಚ್ಚಾದ ಉಷ್ಣಾಂಶ, ಬಿಸಿಗಾಳಿ, ಹೀಟ್ ಸ್ಟ್ರೋಕ್‌ನಿಂದ 200 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. 2015ರಲ್ಲಿ ಮೆಕ್ಕಾದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 2,400 ಮಂದಿ ಪ್ರಾಣ ಬಿಟ್ಟಿದ್ದರು. 1990ರ ಕಾಲ್ತುಳಿತದಿಂದ 1,426 ಮಂದಿ ಬಲಿಯಾಗಿದ್ದರು. ಈ ಬಾರಿ ಒಂದೇ ದಿನಕ್ಕೆ 300-400 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!

https://newsfirstlive.com/wp-content/uploads/2024/06/Mecca-Hajj-Death-Toll.jpg

Load More