ಬರೀ ಫೋಟೋ ಅಲ್ಲ ಸೆಕ್ಸ್‌ಗೂ ಪೀಡಿಸಿದ್ದ.. ಪವಿತ್ರಾ ಗೌಡ 3 ಶಾಕಿಂಗ್ ಸ್ಟೇಟ್‌ಮೆಂಟ್‌; ಏನದು?

author-image
admin
Updated On
ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು
Advertisment
  • ಪವಿತ್ರಾಗೆ ದೈಹಿಕವಾಗಿ ಸಹಕರಿಸಲು ಪೀಡಿಸಿದ್ದ ರೇಣುಕಾಸ್ವಾಮಿ?
  • ಪವನ್‌ನಿಂದ ವಿನಯ್‌ಗೆ, ವಿನಯ್‌ನಿಂದ ದರ್ಶನ್‌ಗೆ ಆ ಸಂದೇಶ
  • ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ಹೋದಾಗ ಪವಿತ್ರಾಗೆ ಬಿಗ್ ಶಾಕ್‌!

ರೇಣುಕಾಸ್ವಾಮಿ ಕೇಸ್‌ನಲ್ಲಿ ಪವಿತ್ರಾ ಗೌಡ ಸೂತ್ರಧಾರಿ, ದರ್ಶನ್‌ ಅಂಡ್‌ ಗ್ಯಾಂಗ್‌ ಪಾತ್ರಧಾರಿ ಅನ್ನೋದು ಇಲ್ಲಿಯವರೆಗು ಎಲ್ಲರಿಗೂ ಗೊತ್ತಿತ್ತು. ಆದ್ರೆ, ಪವಿತ್ರಾ ಗೌಡ ಇದನ್ನು ಒಪ್ಪಿಕೊಳ್ಳುತ್ತಾರೋ ಇಲ್ವೋ? ಪೊಲೀಸರ ಮುಂದೆ ಏನು ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ ಅನ್ನೋ ಕುತೂಹಲವಿತ್ತು. ಇದೀಗ ಆ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದೆ.

ಇದನ್ನೂ ಓದಿ: ‘ಬರೋಬ್ಬರಿ 1.75 ಕೋಟಿ ಸಾಲ ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದೆ’- ನಟ ದರ್ಶನ್​​ 

ಖುದ್ದು ಪವಿತ್ರಾ ಗೌಡ ಅವರೇ ಆವತ್ತು ಶೆಡ್​ನಲ್ಲಿ ನಡೆದ ಭೀಕರ ರಕ್ತಚರಿತ್ರೆಯನ್ನ ಎಳೆಎಳೆಯಾಗಿ ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ. ಹೌದು, ದರ್ಶನ್‌ ಮತ್ತು ತನಗೂ ಹೇಗೆ ಬಾಂಧವ್ಯ ಬೆಳೀತು ಅನ್ನೋದನ್ನ ಅದೆಷ್ಟು ನೀಟ್‌ ಆಗಿ ಹೇಳಿದ್ದಾರೆ. ಹಾಗೆಯೇ ರೇಣುಕಾಸ್ವಾಮಿಯನ್ನ ಬಲೆಗೆ ಬೀಳಿಸಿದ್ದು ಹೇಗೆ. ಪಟ್ಟಣಗೆರೆ ಶೆಡ್‌ನಲ್ಲಿ ರಾಕ್ಷಸಿ ಕೃತ್ಯ ಹೇಗೆ ನಡೀತು ಅನ್ನೋದನ್ನು ಪೊಲೀಸ್‌ ವಿಚಾರಣೆ ವೇಳೆ ಬಾಯ್‌ ಬಿಟ್ಟಿದ್ದಾರೆ. ಆಕೆಯ ಸ್ಟೇಟ್‌ಮೆಂಟ್‌ ನೋಡ್ತಿದ್ರೆ ದರ್ಶನ್‌ ಅಂಡ್‌ ಗ್ಯಾಂಗ್​ನ ಮಾತ್ರ ಸಿಲುಕಿಸಿ ತಾನು ಪಾರಾಗುವ ಪ್ಲಾನ್ ಮಾಡಿದ್ದಾರೆ ಎನ್ನುವ ಸಂಶಯ ಹುಟ್ಟಿದೆ.

publive-image

ಫೋನ್‌ನಲ್ಲಿ ಪವಿತ್ರಾ- ರೇಣುಕಾಸ್ವಾಮಿ ಮಾತುಕತೆ!
ದೈಹಿಕವಾಗಿ ಸಹಕರಿಸಲು ಪೀಡಿಸಿದ್ದ ರೇಣುಕಾಸ್ವಾಮಿ!
ಇಲ್ಲಿಯವರೆಗೆ ಸಾವನ್ನಪ್ಪಿದ ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ಗಳು ಮಾತ್ರ ಮಾಡುತ್ತಿದ್ದರು ಅನ್ನೋದು ಗೊತ್ತಿತ್ತು. ಆದ್ರೆ, ಪವಿತ್ರಾ ಸ್ಟೇಟ್‌ಮೆಂಟ್‌ನಲ್ಲಿ ಆಕೆ ಹಾಗೂ ರೇಣುಕಾಸ್ವಾಮಿ ಇಬ್ಬರೂ ಫೋನ್‌ನಲ್ಲಿ ಮಾತನಾಡಿದ್ರು ಅನ್ನೋ ಸುದ್ದಿಯೂ ಸ್ಫೋಟವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಗೌತಮ್‌ ಅನ್ನೋ ಅಕೌಂಟ್‌ನಿಂದ ಪವಿತ್ರಾ ಗೌಡಗೆ ಅಶ್ಲೀಲ ಮಸೇಜ್‌ಗಳು ಬಂದಿವೆ. ಆವಾಗ ಹೇಗಾದ್ರೂ ಮಾಡಿ ರೇಣುಕಾಸ್ವಾಮಿಗೆ ಬುದ್ಧಿ ಕಲಿಸಬೇಕು ಅಂತ ಪವಿತ್ರಾ ಗೌಡ ಹಠತೊಟ್ಟು ನಿಂತಿದ್ದಾರೆ. ಅಂದೇ ಪವನ್‌ ಜೊತೆ ಸೇರ್ಕೊಂಡ್‌ ಖತರ್ನಾಕ್‌ ಪ್ಲಾನ್‌ ಮಾಡಿದ್ದಾರೆ. ಅಷ್ಟಕ್ಕೂ ಆ ಪ್ಲಾನ್‌ ಹೇಗಿತ್ತು ಅನ್ನೋದನ್ನು ಪವಿತ್ರಾ ಅವರೇ ಹೇಳಿದ್ದಾರೆ.

publive-image

ಪವಿತ್ರಾ ಸ್ವಇಚ್ಛಾ ಹೇಳಿಕೆ - 01
ಅದಾಗಲೇ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವಿಷಯವನ್ನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್‌ಗೆ ನಾನು ಹೇಳಿದ್ದೆ. ಅವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ತಿಳಿಸಿ ಪವನ್‌ ನಂಬರ್​ನ ಅವನಿಗೆ ಶೇರ್‌ ಮಾಡಿದ್ದೆ. ಈ ಸಮಯದಲ್ಲಿ ಪವನ್ ನನ್ನ ಜೊತೆಯಲ್ಲಿರ್ತಾನೆ. ಕಾಲ್ ಯು ಎಂದು ನಾನೇ ಮಸೇಜ್ ಮಾಡಿರುತ್ತೇನೆ. ಅದೇ ಗೌತಮ್ ಎನ್ನುವ ವ್ಯಕ್ತಿ ರಾತ್ರಿ 9 ಗಂಟೆಗೆ ಕಾಲ್ ಮಾಡಿರ್ತಾನೆ. ಪವನ್‌ ಮೊಬೈಲ್‌ಗೆ ಬಂದಿದ್ದ ಆ ಕಾಲ್​ನ ನಾನು ಸ್ವೀಕರಿಸಿದ್ದು, ಆ ವ್ಯಕ್ತಿ ನಾನೇ ಪವಿತ್ರಗೌಡ ಅಂತಾ ಖಾತ್ರಿ ಪಡಿಸಿಕೊಂಡು ಮಾತಾಡ್ತಾನೆ. ನನ್ನೊಂದಿಗೆ ಅಶ್ಲೀಲವಾಗಿ 5 ನಿಮಿಷ ಸಂಭಾಷಣೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುವ ರೀತಿಯಲ್ಲಿ ಮಾತನಾಡಿರುತ್ತೇನೆ. ನಂತರ ನಾನು ಕಾಲ್ ಮಾಡಿ ನೀವು ಇರುವುದು ಎಲ್ಲಿ? ಕೆಲಸ ಮಾಡುವುದು ಎಲ್ಲಿ? ಎಂದು ಕೇಳಿದಾಗ ಆತ ನಾನು ಜಿಗಣಿಯಲ್ಲಿರುವುದಾಗಿ ತಿಳಿಸಿರುತ್ತಾನೆ. ಆವಾಗ್ಲೇ ನಾನು ಪವನ್‌ಗೆ ಆತನನ್ನು ಏನಾದರೂ ಮಾಡಿ ಪತ್ತೆ ಮಾಡು ಬುದ್ಧಿಕಲಿಸಬೇಕೆಂದು ತಿಳಿಸಿರುತ್ತೇನೆ.
- ಪವಿತ್ರಾ ಗೌಡ

ಇದನ್ನೂ ಓದಿ: ರೇಣುಕಾಸ್ವಾಮಿಗೆ ಪವಿತ್ರಾ ನಂಬರ್ ಸಿಕ್ಕಿದ್ದು ಹೇಗೆ? ಮೆಸೇಜ್‌ ಮಾಡಿ ಬಲೆಗೆ ಬಿದ್ದ ಇಂಚಿಂಚೂ ಮಾಹಿತಿ ಇಲ್ಲಿದೆ! 

ರೇಣುಕಾಸ್ವಾಮಿಗೆ ಪವಿತ್ರಾ ಗೌಡ ಫೋನ್‌ ನಂಬರ್‌ ಸಿಗುತ್ತಿದ್ದಂತೆ ಅದು ಪವಿತ್ರಾ ಹೌದೋ ಅಲ್ವೋ? ಅನ್ನೋ ಸಂದೇಹವಿತ್ತು. ಅದೇ ಅನುಮಾನದಲ್ಲಿ ಆತ ಫೋನ್‌ ಮಾಡಿದ್ದಾನೆ. ಬಟ್‌, ಆ ನಂಬರ್‌ ಪವನ್‌ನದ್ದಾಗಿತ್ತು. ಆದರಲ್ಲಿಯೇ ಮಾತಾಡಿದ್ದ ಪವಿತ್ರಾ ಗೌಡ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

publive-image

ಪವನ್‌ನಿಂದ ವಿನಯ್‌ಗೆ, ವಿನಯ್‌ನಿಂದ ದರ್ಶನ್‌ಗೆ ಸಂದೇಶ!
ರೇಣುಕಾಸ್ವಾಮಿ ಕಿಡ್ನ್ಯಾಪ್‌ ಕಥೆ ತೆರೆದಿಟ್ಟ ಪವಿತ್ರಾ ಗೌಡ!
ಪವಿತ್ರಾ ಗೌಡ ಮತ್ತು ಪವನ್‌ ಏನ್‌ ಮಾಡ್ತಾರೆ ಅಂದ್ರೆ ಸ್ಟೋನಿ ಬ್ರೂಕ್‌ ಪಬ್​ ಮಾಲೀಕ ವಿನಯ್‌ಗೆ ವಿಷಯ ಮುಟ್ಟಿಸಿರುತ್ತಾರೆ. ಗೌತಮ್‌ ಅನ್ನೋ ವ್ಯಕ್ತಿ ಅಶ್ಲೀಲವಾಗಿ ಮೆಸೇಜ್‌ ಮಾಡ್ತಿದ್ದಾನೆ. ಸೆಕ್ಸ್​​ ಮಾಡುವಂತೆ ಪೀಡಿಸ್ತಿದ್ದಾನೆ ಅಂತ ವಿನಯ್‌ಗೆ ತಿಳಿಸಿದ್ದಾರೆ. ಆಗ ವಿನಯ್​ ರೇಣುಕಾಸ್ವಾಮಿಗೆ ಒಂದು ಗತಿ ಕಾಣಿಸೋ ಭರವಸೆ ಕೊಟ್ಟಿದ್ದಾನೆ. ನೀವು ಯಾವುದೇ ಟೆನ್ಷನ್‌ ಮಾಡ್ಕೋಬೇಡಿ ಅಂತ ಸಮಾಧಾನ ಮಾಡಿರುತ್ತಾನೆ.

ಈ ವಿಚಾರ ಇಲ್ಲಿಗೇ ನಿಲ್ಲೋದಿಲ್ಲ. ವಿನಯ್‌ ಇಂದ ದರ್ಶನ್‌ ಕಿವಿ ತಲುಪುತ್ತೆ. ತನ್ನ ಸ್ನೇಹಿತೆಗೆ ಯಾರೋ ಒಬ್ಬ ಈ ರೀತಿ ಕಾಟ ಕೊಡ್ತಿದ್ದಾನೆ ಅನ್ನೋದು ಗೊತ್ತಾಗ್ತಿದ್ದಂತೆ ಅವನಿಗೆ ಒಂದು ಗತಿ ಕಾಣಿಸಲು ಡಿ ಬಾಸ್ ಆರ್ಡರ್ ಮಾಡಿದ್ದಾರೆ. ದರ್ಶನ್‌ ಆದೇಶದಂತೆ ಚಿತ್ರದುರ್ಗದ ರಾಘವೇಂದ್ರ ಅಂಡ್‌ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಪತ್ತೆ ಮಾಡುತ್ತೆ. ಅಲ್ಲಿಂದ ಪಟ್ಟಣಗೆರೆ ಶೆಡ್‌ಗೆ ಕಿಡ್ನಾಪ್‌ ಮಾಡುತ್ತೆ.

ಇದನ್ನೂ ಓದಿ: 20 ಸಾವಿರದಲ್ಲಿ ಇವಳನ್ನ ಮೆಂಟೇನ್ ಮಾಡ್ತಿಯಾ.. ರೇಣುಕಾಸ್ವಾಮಿ ಎದೆ, ಕುತ್ತಿಗೆಗೆ ಬಲವಾಗಿ ಒದ್ದ ದರ್ಶನ್! 

ಪವಿತ್ರಾ ಸ್ವಇಚ್ಛಾ ಹೇಳಿಕೆ - 02
08 ಜೂನ್‌ 2024ರಂದು ಮಧ್ಯಾಹ್ನ 1ರಿಂದ 2 ಗಂಟೆಯ ಸಮಯದಲ್ಲಿ ದರ್ಶನ್ ಅವರು ನನಗೆ ಫೋನ್‌ ಮಾಡಿ ಮೆಸೇಜ್ ಮಾಡುತ್ತಿದ್ದ ಗೌತಮ್ ಎನ್ನುವ ವ್ಯಕ್ತಿಯನ್ನು ನಮ್ಮ ಹುಡುಗರು ಅಪಹರಣ ಮಾಡಿಕೊಂಡು ಬಂದಿದ್ದಾರೆ ಅಂತಾ ತಿಳಿಸುತ್ತಾರೆ. ಹಾಗೇ ಪ್ರದೂಶ್ ಅವರ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಲ್ಲಿ ದರ್ಶನ್, ವಿನಯ್ ಹಾಗೂ ಪ್ರದೋಶ್ ಅವರು ಡ್ರೈವ್ ಮಾಡಿಕೊಂಡು ನಮ್ಮ ಮನೆಯ ಹತ್ತಿರಕ್ಕೆ ಬಂದಿರುತ್ತಾರೆ. ಆತನಿಗೆ ಬುದ್ಧಿ ಕಲಿಸೋಣ ಬಾ ಎಂದು ನನ್ನನ್ನು ಅದೇ ಕಾರಿನಲ್ಲಿ ಕೂರಿಸಿಕೊಂಡು ಪಟ್ಟಣಗೆರೆ ಶೆಡ್‌ಗೆ ಬರ್ತಾರೆ. ನಾನು ದರ್ಶನ್ ಪಕ್ಕ ಕಾರಿನಲ್ಲಿ ಕುಳಿತ್ತಿದ್ದು, ನಾವು 4 ಜನರು ನಮ್ಮ ಮನೆಯಿಂದ ಅಂದಾಜು ಸಂಜೆ 4.45 ಗಂಟೆ ವೇಳೆ ಸ್ಥಳಕ್ಕೆ ಹೋಗಿದ್ದೇವೆ.
- ಪವಿತ್ರಾ ಗೌಡ, ಕೊಲೆ ಆರೋಪಿ

ಶೆಡ್‌ನಲ್ಲಿ ನಡೀತು ರಕ್ಕಸಕ್ರೌರ್ಯ, ಪವಿತ್ರಾ ಹೇಳಿದ್ದೇನು?
ಕೊಂದಿದ್ದು ಅವರೇ.. ದರ್ಶನ್‌ಗೆ ಪವಿತ್ರಾಗೆ ಗೌಡ ಖೆಡ್ಡಾ?
ಪಟ್ಟಣಗೆರೆ ಶೆಡ್‌ನಲ್ಲಿ ಅಕ್ಷರಶಃ ರಾಕ್ಷಸಿ ಕೃತ್ಯವೇ ನಡೆಯುತ್ತೆ. ಪವಿತ್ರಾ ಗೌಡ ನೋಡ್ತಾ ಇದ್ದಂತೆ ರೇಣುಕಾಸ್ವಾಮಿ ಭಯ ಬಿದ್ದಿದ್ದಾನೆ. ಹೇಗಾದ್ರೂ ಮಾಡಿ ತನ್ನ ಜೀವ ಉಳಿಸ್ಕೊಳ್ಳಬೇಕು ಅಂತ ಪವಿತ್ರಾ ಗೌಡ ಕಾಲಿಗೆ ಬೀಳಲು ಮುಂದಾಗುತ್ತಾನೆ. ಆದ್ರೆ, ಕರುಣೆ ತೋರಿಸದ ಪವಿತ್ರಾ ಗೌಡ ತನ್ನದೇ ಚಪ್ಪಲಿಯನ್ನು ತೆಗೆದುಕೊಂಡು ಬಾರಿಸಿದ್ದಾರೆ. ಆನಂತರ ದರ್ಶನ್‌ ಅದೇ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ರೆ, ಸ್ಟೇಟ್‌ಮೆಂಟ್‌ನಲ್ಲಿ ಪವಿತ್ರಾ ಗೌಡ ತಾನು ಕೊಲೆಗಾತಿಯಲ್ಲ, ಕೊಲೆಗಾರರು ದರ್ಶನ್‌ ಅಂಡ್‌ ಗ್ಯಾಂಗ್‌ ಅನ್ನೋದನ್ನು ಇನ್‌ಡೈರೆಕ್ಟ್‌ ಆಗಿ ಹೇಳಿದ್ದಾರೆ.

publive-image

ಪವಿತ್ರಾ ಸ್ವಇಚ್ಛಾ ಹೇಳಿಕೆ - 03
ಟೀ ಶರ್ಟ್ ಮತ್ತು ನೀಲಿ ಬಣ್ಣದ ಅಂಡರ್ ವೇರ್ ಹಾಕಿದ್ದ ಒಬ್ಬ ವ್ಯಕ್ತಿ ಅಲ್ಲಿಯೇ ಇದ್ದ. ಆತನು ಗೋಳಾಡಿಕೊಂಡು ಕ್ಷಮೆ ಕೇಳುತ್ತಿದ್ದ. ದರ್ಶನ್ ಇದೇ ವ್ಯಕ್ತಿಯೇ ಗೌತಮ್.ಕೆ.ಎಸ್. ಈತನೇ ನಿನಗೆ ಅಶ್ಲೀಲ ಮಸೇಜ್, ಪೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದವನು. ಇವನ ಓರಿಜಿನಲ್ ಹೆಸರು ರೇಣುಕಾಸ್ವಾಮಿ ಅಂತಾ ಹೇಳಿದ್ರು. ಹಾಗೆಯೇ ದರ್ಶನ್, ನಾಗರಾಜು, ಪವನ್, ನಂದೀಶ್ ಎಲ್ಲಾ ಸೇರಿ ರೇಣುಕಾಸ್ವಾಮಿಯ ತಲೆ, ಎದೆಯ ಮೇಲೆ ಕೈಕಾಲುಗಳ ಮೇಲೆ ಮರದ ರಂಬೆಗಳಿಂದ ಮನಸೋ ಇಚ್ಛೆ ಹೊಡೆದು ಹಲ್ಲೆ ಮಾಡಿದರು.

ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್​ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?

ಪವಿತ್ರಾ ಸ್ವಇಚ್ಛಾ ಹೇಳಿಕೆ
ನಾನು ಸಹ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿ ಇವನೇನಾ? ಅಂತಾ ತಿಳಿದು ನನ್ನ ಕಾಲಿನಲ್ಲಿದ್ದ ಚಪ್ಪಲಿಯಿಂದ ಆತನ ಕಪಾಳ ಮತ್ತು ಮುಖದ ಮೇಲೆ ಹೊಡೆದೆ. ಆತನನ್ನು ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದಾಗ ಎಲ್ಲರೂ ಸೇರಿ ಆತನಿಗೆ ಹಲ್ಲೆ ಮಾಡಲು ಶುರು ಮಾಡಿದರು. ಆವಾಗ ದರ್ಶನ್ ನನ್ನನ್ನು ಮನೆಗೆ ಹೊರಡುವಂತೆ ತಿಳಿಸಿ ಕಳುಹಿಸಿದರು.
- ಪವಿತ್ರಾ ಗೌಡ 

publive-image

ಇನ್ನೊಂದ್‌ ವಿಚಾರ ಅಂದ್ರೆ ಪವಿತ್ರಾ ಗೌಡಗೆ ಮನೆಗೆ ಹೋದ್ಮೇಲೆ ರೇಣುಕಾಸ್ವಾಮಿ ಏನಾದಾ? ಸತ್ತಿದ್ದಾನೋ? ಬದುಕಿದ್ದಾನೋ? ಅನ್ನೋದ್‌ ಗೊತ್ತೇ ಇರೋದಿಲ್ಲ. ಆ ಬಗ್ಗೆ ತಿಳಿದುಕೊಳ್ಳೋ ಪ್ರಯತ್ನವನ್ನು ಪವಿತ್ರಾ ಮಾಡೋದಿಲ್ಲ. ಹೇಗಿದ್ದು ಚೆನ್ನಾಗಿ ಥಳಿಸಿ ಬುದ್ಧಿ ಕಲಿಸಿರುತ್ತಾರೆ ಅಂತ ತೀರ್ಮಾನಿಸಿದ್ದಾರೆ. ಆದ್ರೆ, ಆಕೆ ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು.

ಯಲಕಚೇನಹಳ್ಳಿಯಲ್ಲಿರುವ ತಾಯಿ ಮನೆಯಲ್ಲಿ ಪವಿತ್ರಾ ಇರುವಾಗ ದರ್ಶನ್‌ ಫೋನ್‌ ಮಾಡುತ್ತಾರೆ. ರೇಣುಕಾಸ್ವಾಮಿ ಕೊಲೆಯಾಗಿರುವ ಬಗ್ಗೆ ಕಾಮಾಕ್ಷಿಪಾಳ್ಯದಲ್ಲಿ ಕೇಸ್​ ಆಗಿರುತ್ತದೆ. ನೀನು ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗು ಎಂದು ತಿಳಿಸಿರುತ್ತಾರೆ. ಅಲ್ಲಿಯೇ ಪವಿತ್ರಾ ಗೌಡಗೆ ಶಾಕ್‌ ಆಗಿರುತ್ತೆ.

ಪವಿತ್ರಾ ಗೌಡ ಅವರ ಈ ಸ್ಟೇಟ್‌ಮೆಂಟ್‌ ನೋಡುತ್ತಾ ಇದ್ರೆ ಅವ್ರು ಬೇರೆಯವರ ತಲೆ ಮೇಲೆ ಕೊಲೆ ಕೇಸ್‌ ಎತ್ತಿ ಹಾಕ್ತಿದ್ದಾರೆ ಎನ್ನಬಹುದು. ಹಾಗೇ ಒಬ್ಬರ ಮೇಲೆ ಇನ್ನೊಬ್ಬರು ಹಾಕಿ ತಾವು ನುಣಿಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಪೊಲೀಸ್ರು ಸೂಕ್ತ ದಾಖಲೆಗಳನ್ನು ಸಂಗ್ರಹ ಮಾಡಿ ಚಾರ್ಜ್‌ಶೀಟ್‌ನಲ್ಲಿಯೇ ಆರೋಪಿಗಳ ಬಣ್ಣ ಬಯಲಾಗಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment