Advertisment

ಪೊಲೀಸರ ಹೆಸರೇಳಿ ಸ್ವಾಮೀಜಿಗೆ 1 ಕೋಟಿ ಉಂಡೇನಾಮ; ಭಾರೀ ಅನುಮಾನ

author-image
Bheemappa
Updated On
ಪೊಲೀಸರ ಹೆಸರೇಳಿ ಸ್ವಾಮೀಜಿಗೆ 1 ಕೋಟಿ ಉಂಡೇನಾಮ; ಭಾರೀ ಅನುಮಾನ
Advertisment
  • ತಾಲೂಕಿನ ಸೀಮಿಕೇರಿ ಪುನರ್ ವಸತಿ ಕೇಂದ್ರದಲ್ಲಿನ ಮಠ
  • ಹಣ ಕೊಟ್ಟ ಸ್ವಾಮೀಜಿ ಮೇಲೆ ಈಗ ಅನುಮಾನ
  • ಸಿಡಿಗಳು ನಮ್ಮ ಬಳಿ ಇದೆ ಎಂದು ಆರೋಪಿಗಳಿಂದ ಬೆದರಿಕೆ?

ರಾಮಾರೂಢ ಮಠ ಬಾಗಲಕೋಟೆ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಮಠ. ಬಾಗಲಕೋಟೆ ತಾಲೂಕಿನ ಸೀಮಿಕೇರಿ ಪುನರ್ ವಸತಿ ಕೇಂದ್ರದಲ್ಲಿರುವ ಮಠಕ್ಕೆ ತನ್ನದೇ ಆದ ಇತಿಹಾಸ ಇದೆ. ಇದೇ ಮಠದ ಪರಮ ರಾಮಾರೂಢ ಶ್ರೀಗಳು ಇಲ್ಲಿನ ಪೀಠಾಧ್ಯಕ್ಷರು. ಅಂತಹ ಸ್ವಾಮೀಜಿಗಳಿಗೆ ಕೆಲವು ಪೊಲೀಸ್ ಅಧಿಕಾರಿಗಳ ಹೆಸರೇಳಿ ಉಂಡೇನಾಮ‌ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Advertisment

ಅದು ₹10 ಲಕ್ಷ ಅಲ್ಲ, ₹20 ಲಕ್ಷ ಅಲ್ಲ ಬರೋಬ್ಬರಿ 1 ಕೋಟಿ ಹಣವನ್ನು ಸ್ವಾಮೀಜಿ ಬಳಿ ಪೀಕಿದ್ದಾರೆ. ಇದೀಗ ಸ್ವಾಮೀಜಿಗಳು ಪೊಲೀಸರಿಗೆ ದೂರು ನೀಡಿದ್ದು, ಇದರ ಸುತ್ತ ಹಲವು ಅನುಮಾನಗಳು ಮೂಡಿವೆ.

ಇದನ್ನೂ ಓದಿ: ‘ಕರ್ಮ ಹಿಟ್​ ಬ್ಯಾಕ್ ಎಂದ್ರೆ ಇದೇ ಅಲ್ಲವೇ ಸಿದ್ದರಾಮಯ್ಯ’ -HD ಕುಮಾರಸ್ವಾಮಿ ಟಾಂಗ್

publive-image

ಏನಿದು ಆರೋಪ..?

ಆರೋಪಿಗಳು ಸ್ವಾಮೀಜಿ ಬಳಿ 9 ಬ್ಲಾಂಕ್ ಚೆಕ್, ಬಾಂಡ್ ಪಡೆದಿದ್ದರಂತೆ. ಬಾಕಿ ಹಣ ಕೊಟ್ಟಾಗ ಚೆಕ್, ಬಾಂಡ್ ಕೊಡೋದಾಗಿ ಹೇಳಿದ್ದಾರೆ. ಬಾಕಿ 39 ಲಕ್ಷ ನೀಡಿದ‌ ಮೇಲೂ ಚೆಕ್, ಬಾಂಡ್ ನೀಡಿರಲಿಲ್ಲ. ಪುನಃ ಆರೋಪಿ ಪ್ರಕಾಶ್‌ 25 ಲಕ್ಷ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾನೆ. 1 ಕೋಟಿ ಹಣನ ಎಡಿಜಿಪಿಗೆ ನೀಡಿದ್ದೇವೆ ಎಂದಿದ್ದ ಆರೋಪಿ, ನಮಗೆ 25 ಲಕ್ಷ ಕೊಡಿ ಎಂದು ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ. ಆರೋಪಿ ಬಳಿ ಖಾಲಿ ಚೆಕ್, ಬಾಂಡ್ ಇದ್ದ ಕಾರಣ ಮಠದ ಆಸ್ತಿ ಕಬಳಿಕೆ ಮಾಡುವ ಭೀತಿಗೆ ಹೆದರಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisment

ಆ ಬಲೆಗೆ ಬಿದ್ರಾ ಪರಮ ರಾಮಾರೂಢ ಶ್ರೀ?

ಬೆದರಿಕೆಗೆ ಹೆದರಿ 1 ಕೋಟಿ ಹಣವನ್ನು ಸ್ವಾಮೀಜಿ ಈಗಾಗಲೇ ನೀಡಿದ್ದಾರೆ. ಅಷ್ಟಕ್ಕೂ ಬೆದರಿಕೆ ಏನಂತ ಹಾಕಿದ್ರು ಅನ್ನೋದೇ ಪ್ರಶ್ನೆ. ಎಫ್ಐಆರ್​ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಮೂಲಗಳ ಪ್ರಕಾರ ಸ್ವಾಮೀಜಿಗಳಿಗೆ ಆರೋಪಿಗಳು ನಿಮ್ಮ ಸಿಡಿಗಳು ನಮ್ಮ ಬಳಿ ಇವೆ. ಈ ಬಗ್ಗೆ ದೂರು ಬಂದಿವೆ ಎಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು.. ಈ ಬಾರಿ ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್!

publive-image

ಇನ್ನೊಂದೆಡೆ ಪೊಲೀಸರು ಕೂಡಾ ಆರೋಪಿಗಳ ನಕಲಿ ಫೋನ್ ಕರೆಗೆ ಬಲಿಯಾಗಿದ್ದಾರೆ. ಪೊಲೀಸ್ ವಾಹನದ ರೀತಿ ತನ್ನ ವಾಹನ ಸಿದ್ಧಪಡಿಸಿ‌ ಮೋಸ ಮಾಡಿರುವ ಆರೋಪಿಗಳು, ತಮ್ಮ ವಾಹನದಲ್ಲಿ ವೈರ್ ಲೆಸ್, ಸೈರನ್ ಹಾಕಿ ನಿಜ ಪೊಲೀಸರಂತೆ ವರ್ತಿಸಿದ್ದಾರೆ. ಎಡಿಜಿಪಿ ಎಂದು ಕಲಾದಗಿ ಠಾಣೆಯ ನಿಜ ಪೊಲೀರಿಗೆ ಕರೆ ಮಾಡಿ ಬಳಿಕ ಮಠಕ್ಕೆ ಕಳಿಸಿ ಸ್ವಾಮೀಜಿ‌ ಜೊತೆಗೆ ನೈಜ ಎಡಿಜಿಪಿ ಎಂದು ನಂಬಿಕೆ ಬರುವಂತೆ ಆರೋಪಿ ಪ್ರಕಾಶ್ ಮುಧೋಳ ಮಾಡಿದ್ದಾನೆ. ಚಿತ್ರದುರ್ಗ ಮುರುಘಾಶರಣ ಸ್ವಾಮೀಜಿ ಗತಿ ಕಾಣಿಸ್ತೀನಿ ಎಂದು ಧಮ್ಕಿ ಹಾಕಿದ್ದು ಬೆಳಕಿಗೆ ಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment