BREAKING: ಕೋಲಾರದಲ್ಲಿ ಆಚಾರ್ಯ ಚಿನ್ಮಯಾನಂದ ಅವದೂರ್ ಭೀಕರ ಕೊಲೆ; ಕಾರಣವೇನು?

author-image
Veena Gangani
Updated On
BREAKING: ಕೋಲಾರದಲ್ಲಿ ಆಚಾರ್ಯ ಚಿನ್ಮಯಾನಂದ ಅವದೂರ್ ಭೀಕರ ಕೊಲೆ; ಕಾರಣವೇನು?
Advertisment
  • ಕಳೆದ ಹಲವು ವರ್ಷಗಳಿಂದ ಆ ವಿವಾದ ಕೋರ್ಟ್ ಮೆಟ್ಟಿಲೇರಿತ್ತು
  • ಜಿಲ್ಲೆಯ ಮಾಲೂರು ತಾಲೂಕಿನ ಸಂತಳ್ಳಿ ಗ್ರಾಮದಲ್ಲಿ ನಡೆದ ಘಟನೆ
  • ಮಾರಣಾಂತಿಕ ಹಲ್ಲೆಯಲ್ಲಿ ಸಾವನ್ನಪ್ಪಿದ್ದ ಆಚಾರ್ಯ ಚಿನ್ಮಯಾನಂದ ಅವದೂರ್

ಕೋಲಾರ: ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಸ್ವಾಮೀಜಿ ಕೊಲೆಯಾಗಿರೋ ಘಟನೆ ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದಲ್ಲಿ ನಡೆದಿದೆ. ಆಚಾರ್ಯ ಚಿನ್ಮಯಾನಂದ ಅವದೂರ್ (65) ಕೊಲೆಯಾದ ಸ್ವಾಮೀಜಿ.

publive-image

ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ? 

ಆಚಾರ್ಯ ಚಿನ್ಮಯಾನಂದ ಅವದೂರ್​ನನ್ನು ಆಚಾರ್ಯ ಧರ್ಮಪ್ರಾಣಾನಂದ ಸ್ವಾಮೀಜಿ ಎಂಬುವವರು ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದ ನಾಲ್ಕು ಎಕರೆ ಆಶ್ರಮದ ಜಾಗಕ್ಕಾಗಿ ವಿವಾದ ನಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಬೆಳಿಗ್ಗೆ ಕೋರ್ಟ್​ಗೆ ದಾಖಲೆ ಸಹಿತ ಹೋಗುವ ವೇಳೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.

[caption id="attachment_70729" align="aligncenter" width="800"]publive-image ಆರೋಪಿಗಳಾದ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಸಹಚರ ಅರುಣ್ ಆಚಾರ್ಯ[/caption]

ಇದೇ ಗಲಾಟೆಯಲ್ಲಿ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿಗೆ ಗಂಭೀರ ಗಾಯವಾಗಿತ್ತು. ಆ ಕೂಡಲೇ ಅವರನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಮೃತಪಟ್ಟಿದ್ದಾರೆ. ಈ ಕೊಲೆ ಸಂಬಂಧ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬುವವರನ್ನು ಮಾಲೂರು ಪೊಲೀಸ್​ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment