newsfirstkannada.com

ನಾನು ಸಾಯದಿದ್ರೆ ಹುಚ್ಚನಾಗ್ತೇನೆ.. ಹೊರಡುತ್ತಿದ್ದೇನೆ.. ಯಾರಿಗೂ ಹೇಳ್ಬೇಡ.. ನಟ ಚಂದು ಲಾಸ್ಟ್​ ಮೆಸೇಜ್​ ಇದು

Share :

Published May 18, 2024 at 2:02pm

Update May 18, 2024 at 2:05pm

  ಚಂದು ಆಕೆಯೊಂದಿಗೆ ಹಂಚಿಕೊಂಡ ಮೆಸೇಜ್​ನಲ್ಲಿ ಏನಿತ್ತು?

  ನಾನು ಸಾಯದೆ ಇಲ್ಲೇ ಇದ್ರೆ ಹುಚ್ಚನಾಗುತ್ತೇನೆ ಎಂದಿದ್ದ ನಟ

  ಆಕೆಯ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿಕೊಂಡ ಚಂದು

‘‘ನಾನು ಹೊರಡುವುದೇ ಸರಿ.. ನಾನು ಸಾಯದೆ ಇಲ್ಲೇ ಇದ್ರೆ ಹುಚ್ಚನಾಗುತ್ತೇನೆ. ಇಲ್ಲವೇ ಕುಡುಕನಾಗಿ ಮನೆಯವರಿಗೆ ತೊಂದರೆ ಕೊಡ್ತೇನೆ. ಹೋಗುತ್ತಿದ್ದೇನೆ.. ಯಾರಿಗೂ ಹೇಳ್ಬೇಡ’’

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​ ಅನ್ನು ಸ್ನೇಹಿತೆ, ನಟಿ ಕರಾಟೆ ಕಲ್ಯಾಣಿ ಹಂಚಿಕೊಂಡಿದ್ದಾರೆ.

ಪವಿತ್ರಾ ಜಯರಾಂ ಸಾವಿನ ಬಳಿಕ ಕುಗ್ಗಿ ಹೋಗಿದ್ದ ನಟ ಚಂದು ತನ್ನ ಸ್ನೇಹಿತೆ ಕರಾಟೆ ಕಲ್ಯಾಣಿ ಜೊತೆಗೆ ತನಗಾಗುವ ಸಂಕಟವನ್ನು, ಮಾನಸಿಕ ತೊಳಲಾಟವನ್ನು ಹೇಳಿಕೊಂಡಿದ್ದರು. ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್​ ಮಾಡಿದ್ದರು. ಆದರೀಗ ನಟಿ ಕಲ್ಯಾಣಿ ಚಂದು ಸಾವಿನ ಬಳಿಕ ತನ್ನೊಂದಿಗೆ ಹಂಚಿಕೊಂಡ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಂದುಗೆ ನಾವ್ಯಾರು ನೆನಪಾಗಿಲ್ವಾ? ಮಕ್ಕಳನ್ನು ಬಿಟ್ಟು ಹೋಗಿದ್ದು ನ್ಯಾಯನಾ? ತಮ್ಮನನ್ನು ಕಳೆದುಕೊಂಡ ಅಕ್ಕನ ಗೋಳಾಟ 

ಫೇಸ್​​ಬುಕ್​ನಲ್ಲಿ ಕಲ್ಯಾಣಿ, ‘ಅವಳಿಲ್ಲದೆ ನಾನು ಸಾಯುತ್ತೇನೆ ಎಂದು ಚಂದು ಈ ಮೊದಲೇ ಹೇಳಿದ್ದನು. ಆದರೆ ನಾನು ಅವನಿಗೆ ಧೈರ್ಯ ಹೇಳಿದೆ. ಚಂದು ಮನಸ್ಸಿನಲ್ಲಿ ಅಂತ ಯೋಚನೆ ಇದೆ ಎಂದು ನನಗೆ ಗೊತ್ತಾಯ್ತು. ಅವನನ್ನು ಆ ಯೋಚನೆಯಿಂದ ಹೊರತರಲು ನಾನು ಅವನ ಬಳಿ ಎಷ್ಟೋ ಸಲ ಮಾತನಾಡಿದೆ. ಆತ್ಮಹತ್ಯೆ ಪಾಪ ಬೇಡ ಎಂದು ಹೇಳಿದೆ. ಆದರೆ ನನಗೆ ಆತನನ್ನು ತಡೆಯಲಾಗಲಿಲ್ಲ. ಚಂದು ಯಾದವ್​ ಅಂತ ಕರೆದರೆ. ಪೂರ್ತಿ ಹೆಸರಿನಿಂದ ಕರೆ ಎಂದು ಹೇಳುತ್ತಿದ್ದ. ಚಂದು ಹಲವು ಧಾರವಾಹಿಗಳಲ್ಲಿ ನನ್ನ ಸಹಾಯಕನಾಗಿ ನಟಿಸಿದ್ದ. ತ್ರಿನಯನಿ ಒಟ್ಟಿಗೆ ಮಾಡಿದ್ದೆವು. ನಿನ್ನೆ ನಾನು ಜರ್ನಿಯಲ್ಲಿದ್ದೆ. ಕರೆ ಮಾಡಲು ಸಾಧ್ಯವಾಗಲಿಲ್ಲ. ಈ ದಾರಿಯನ್ನು ಹೇಗೆ ನಿರ್ಣಯಿಸಿದೆ. ಈ ಬಗ್ಗೆ ಯೋಚಿಸಲು ಆಗುತ್ತಿಲ್ಲ ನನ್ನ ಬಾಲ್ಯದ ಸಹೋದರ.. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನನ್ನು ಕಳೆದುಕೊಂಡಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಟಿ ಪವಿತ್ರಾ ಸಹವಾಸದಿಂದ ಹೆಂಡತಿ, ಮಕ್ಕಳಿಂದ ದೂರ ಇದ್ದ; ಚಂದು ಬಗ್ಗೆ ತಾಯಿಯ ಆರೋಪವೇನು?

ಸದ್ಯ ಇವರು ಹಂಚಿಕೊಂಡ ವಾಟ್ಸ್​ಆ್ಯಪ್​ ಸ್ಕ್ರೀನ್​ ಶಾಟ್​ಗಳು ವೈರಲ್​ ಆಗುತ್ತಿವೆ. ಅನೇಕ ಅಭಿಮಾನಿಗಳು ಚಂದು ಸಾವಿಗೆ ಶಾಂತಿ ಸಿಗಲಿ ಎಂದು ಕಾಮೆಂಟ್​ ಬರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಸಾಯದಿದ್ರೆ ಹುಚ್ಚನಾಗ್ತೇನೆ.. ಹೊರಡುತ್ತಿದ್ದೇನೆ.. ಯಾರಿಗೂ ಹೇಳ್ಬೇಡ.. ನಟ ಚಂದು ಲಾಸ್ಟ್​ ಮೆಸೇಜ್​ ಇದು

https://newsfirstlive.com/wp-content/uploads/2024/05/Karate-kalyani.jpg

Load More