newsfirstkannada.com

ಜಾರಕಿಹೊಳಿಗೆ ಪ್ರಾಮಾಣಿಕರೆಂದು ತೋರಿಸೋಕೆ ನಮ್ಮ ಸಿದ್ಧಾಂತ ಬೇಕು -ನಟ ಚೇತನ್ ವಾಗ್ದಾಳಿ

Share :

Published April 2, 2024 at 12:54pm

Update April 2, 2024 at 12:56pm

  ಕಲಬುರಗಿಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶ

  ಅವರಿಗೆ ಚುನಾವಣೆ ಗೆಲ್ಲಲು ದೇವಸ್ಥಾನ ಬೇಕೆಂದ ನಟ

  ನಿಮ್ಮ ಅವಕಾಶವಾದಿತನ ತೋರಿಸುತ್ತದೆ ಎಂದು ಗುಡುಗು

ಕಲಬುರಗಿ: ವೈಚಾರಿಕತೆ ಮಾತನಾಡುವವರು ಚುನಾವಣೆ ಸಂದರ್ಭದಲ್ಲಿ ಟೆಂಪಲ್ ರನ್ ಮಾಡೋದು ಅರ್ಥವಿಲ್ಲದ್ದು. ಬುದ್ದ, ಬಸವ, ಅಂಬೇಡ್ಕರ್ ವಾದ ಮತ್ತು ವೈಚಾರಿಕತೆಯ ಬಗ್ಗೆ ಮಾತನಾಡುವ ಸತೀಶ್ ಜಾರಕಿಹೊಳಿ ಟೆಂಪಲ್ ರನ್ ಮಾಡುತ್ತಿರುವುದು ದುರಂತ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿರುವ ಅವರು.. ರಾಮಮಂದಿರ ಸಂದರ್ಭದಲ್ಲಿ ವಾಲ್ಮೀಕಿ ಮಂದಿರ ಆಗಬೇಕು ಎಂದವರು ಸತೀಶ್ ಜಾರಕಿಹೊಳಿ. ಆದರೆ ವಾಲ್ಮಿಕಿ ಮಂದಿರವೂ ಮೌಢ್ಯವೇ. ಚುನಾವಣೆಗೋಸ್ಕರ ಇವರೆಲ್ಲ ಯಾವ ಹಂತಕ್ಕೆ ಬೇಕಾದರೂ ಹೋಗ್ತಾರೆ ಅನ್ನೋದಕ್ಕೆ ಇದು ಸಾಕ್ಷಿ. ರಾಜಕಾರಣದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು.

ಇದನ್ನೂ ಓದಿ: ಜೈಲಲ್ಲಿ ಮಲಗಿದ್ದಾಗ ಬಿದ್ದಿತ್ತು ಕನಸು, ರೆಡ್ಡಿ ಬದುಕಿಗೆ ಅದೇ ಮಹಾ ತಿರುವು- EXCLUSIVE ಸಂದರ್ಶನದಲ್ಲಿ ರೋಚಕ ಮಾಹಿತಿ

ಆದರೆ ರಾಜ್ಯದ ಪಕ್ಷಗಳಲ್ಲಿ ಮಕ್ಕಳು, ಅಳಿಯಂದಿರು, ಸೊಸೆಯಂದಿರಿಗೆ ಟಿಕೆಟ್ ಕೊಡಲಾಗುತ್ತಿದೆ. ಇದರಿಂದ ಆ ಪಕ್ಷಗಳಿಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ. ಸತೀಶ್ ಜಾರಕಿಹೊಳಿ ಅವರು ಪ್ರಾಮಾಣಿಕರು ಎಂದು ತೋರಿಸೋಕೆ ನಮ್ಮ ಸಿದ್ಧಾಂತ ಬೇಕು. ಆದರೆ ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ದೇವಸ್ಥಾನ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನುವಾದದ ರಾಜ್ಯ ಸರ್ಕಾರದ ಪಕ್ಷವನ್ನು, ಹಿಂದೂತ್ವದ ಕೇಂದ್ರ ಸರ್ಕಾರದ ಪಕ್ಷವನ್ನು ಬಿಟ್ಟು ನಮ್ಮ ಜೊತೆ ಬನ್ನಿ. ಆದಿವಾಸಿಗಳು, ಸಲಿಂಗ ಪ್ರೇಮಿಗಳು, ಶೂದ್ರರು, ಮಹಿಳೆಯರು, ಅಲ್ಪಸಂಖ್ಯಾತರ ಪರವಾಗಿ ನಿಂತು ಉತ್ತಮ ಸಮಾಜ ಕಟ್ಟಲು ಬನ್ನಿ. ಅದು ಬಿಟ್ಟು ಒಂದು ಕಡೆ ನಮ್ಮ ಸಿದ್ಧಾಂತ ಹೈಜಾಕ್ ಮಾಡ್ತೀರಿ, ಇನ್ನೊಂದು ಕಡೆ ಜೈ ಶ್ರೀರಾಮನ ಹೈಜಾಕ್ ಮಾಡಲು ಹೋಗ್ತಿರಾ. ಇದು ನಿಮ್ಮ ಅವಕಾಶವಾದಿತನ ತೋರಿಸುತ್ತದೆ ಎಂದು ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾರಕಿಹೊಳಿಗೆ ಪ್ರಾಮಾಣಿಕರೆಂದು ತೋರಿಸೋಕೆ ನಮ್ಮ ಸಿದ್ಧಾಂತ ಬೇಕು -ನಟ ಚೇತನ್ ವಾಗ್ದಾಳಿ

https://newsfirstlive.com/wp-content/uploads/2024/04/SATISH-JARKIHOLI.jpg

Load More