newsfirstkannada.com

ಜೈಲಲ್ಲಿ ಮಲಗಿದ್ದಾಗ ಬಿದ್ದಿತ್ತು ಕನಸು, ರೆಡ್ಡಿ ಬದುಕಿಗೆ ಅದೇ ಮಹಾ ತಿರುವು- EXCLUSIVE ಸಂದರ್ಶನದಲ್ಲಿ ರೋಚಕ ಮಾಹಿತಿ

Share :

Published April 2, 2024 at 9:19am

Update April 2, 2024 at 10:28am

    ನಿಮ್ಮ ನ್ಯೂಸ್​ಫಸ್ಟ್​ನಲ್ಲಿ ಜನಾರ್ದನ ರೆಡ್ಡಿಯ ಎಕ್ಸ್​ಕ್ಲೂಸಿವ್ ಸಂದರ್ಶನ

    ಜೈಲಿನಲ್ಲಿ ಅಂದು ಆಗಿದ್ದ ರೋಚಕ ಅನುಭವ ಹಂಚಿಕೊಂಡ ಜನಾರ್ದನ ರೆಡ್ಡಿ

    ರೆಡ್ಡಿ ಜೈಲು ವಾಸದ ವೇಳೆ ಯಾರೆಲ್ಲ ಫೋಟೋ ಇಟ್ಕೊಂಡಿದ್ದರು ಗೊತ್ತಾ..?

ಇತ್ತೀಚೆಗಷ್ಟೇ ಮಾತೃಪಕ್ಷ ಬಿಜೆಪಿಗೆ ಮರಳಿರೋ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ನ್ಯೂಸ್​ಫಸ್ಟ್ ನಡೆಸಿದ ಎಕ್ಸ್‌ಕ್ಲೂಸೀವ್ ಸಂದರ್ಶನದಲ್ಲಿ ಜೈಲುವಾಸದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಆಗರ್ಭ ಶ್ರೀಮಂತ ರೆಡ್ಡಿ ಜೈಲಲ್ಲಿ ಕಳೆದ ಆ 42 ತಿಂಗಳು ಹೇಗಿತ್ತು? ಜೈಲಲ್ಲಿ ಮಲಗಿದ್ದಾಗ ರೆಡ್ಡಿಗೆ ಬಿದ್ದಿದ್ದ ಆ ‘ಕನಸು’ ಬದುಕನ್ನೇ ಬದಲಾಯಿಸಿದ್ದೇಗೆ? ಎಂಬ ರೋಚಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಜನಾರ್ದನ ರೆಡ್ಡಿ ಹೇಳಿದ್ದೇನು..?

ನಾನು ಜೈಲಿನಲ್ಲಿದ್ದಾಗ ದೇವರುಗಳ ಸ್ಮರಣೆಯಲ್ಲಿದ್ದೆ. ಹನುಮಂತನನ್ನು ಹೆಚ್ಚಾಗಿ ಆರಾಧನೆ ಮಾಡುತ್ತಿದ್ದೆ. ಜೈಲಲ್ಲಿ ದೈವ ಭಕ್ತಿಗೆ ಸಂಬಂಧಿಸಿದ ಹಾಡುಗಳನ್ನು ಕೇಳುತ್ತಿದ್ದೆ. ಬರೆಯೋದು, ಓದೋದು ಎಲ್ಲವನ್ನೂ ಮಾಡುತ್ತಿದ್ದೆ. ಜನರು ನನಗೆ ಹೇಳುತ್ತಿದ್ದರು, ‘ಭಗವಂತ ಈ ರೀತಿಯಲ್ಲಿ ಕಾಣಿಸಿದ, ಹಾಗೆ ಕಾಣಿಸಿದ’ ಎಂದು. ಜೈಲಲ್ಲಿದ್ದಾಗ ಹನುಮಂತ ಮತ್ತು ಹೇಮರೆಡ್ಡಿ ಮಲ್ಲಮ್ಮಳ ಫೋಟೋವನ್ನು ನಾನು ಇಟ್ಕೊಂಡಿದ್ದೆ.

ಬಳ್ಳಾರಿಯಲ್ಲಿ ಒಂದು ಬ್ರಾಹ್ಮಣ ಕುಟುಂಬ ಇದೆ. ಅದು ನಮ್ಮ ಮನೆಗೆ ಆತ್ಮೀಯವಾಗಿದೆ. ಅವರ ಮನೆಯಲ್ಲಿ ಸುಮಾರು ವರ್ಷಗಳಿಂದ ಆಜನೇಯ ಸ್ವಾಮಿಯ ವಿಗ್ರಹ ಇತ್ತು. ಅದನ್ನು ಜೈಲಿಗೆ ಪೂಜೆ ಮಾಡಿಕೊಳ್ಳುವುದಕ್ಕೆ ಎಂದು ಕಳುಹಿಸಿ ಕೊಟ್ಟರು. ಅದಕ್ಕೆ ಮೂರು ದಿನ ಪೂಜೆ ಮಾಡಿದೆ. ಇದೇ ವೇಳೆ ಹನುಮ ಚಾಲೀಸವನ್ನೂ ಪಠಣ ಮಾಡುತ್ತಿದ್ದೆ.

ಇದನ್ನೂ ಓದಿ: ಆ ದೇವರೇ ವರ ಕೊಟ್ಟಂತೆ ಆಯ್ತು..’ ಕೊಹ್ಲಿ ಕಾಲಿಗೆ ಬಿದಿದ್ದ ರಾಯಚೂರಿನ ಯುವಕನಿಗೆ ಸಖತ್ ಡಿಮ್ಯಾಂಡ್​..!

ಮೂರು ದಿನ ಪೂಜೆ ಮಾಡಿದ ನಂತರ ಅದೇ ಟೈಂ ಅಲ್ಲೇ ಸುಪ್ರೀಂ ಕೋರ್ಟ್​ನಲ್ಲಿ ಬೇಲ್​ಗಾಗಿ ಅರ್ಜಿ ಹಾಕಿಕೊಂಡಿದ್ದೇವು. ನಾನು ಮಾಡುತ್ತಿದ್ದ ಪೂಜೆ 2015, ಜನವರಿ 19ಕ್ಕೆ ಮುಕ್ತಾಯ ಆಗಿತ್ತು. ಜನವರಿ 20 ರಂದು ನನಗೆ ಸುಪ್ರೀಂ ಕೋರ್ಟ್​ನಿಂದ ಜಾಮೀನು ಸಿಕ್ಕಿದೆ. ಜನವರಿ 20 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕನಸು ಬರುತ್ತಿತ್ತು. ಸುಮಾರು ವಯಸ್ಸಾಗಿರುವ ವೃದ್ಧ ಕೋತಿ ನನ್ನ ಪಕ್ಕದಲ್ಲಿ ಕೂತಿತ್ತು. ನಂತರ ಅದು ನನ್ನ ಮೇಲೆ ಕೈಹಾಕಿ ತಟ್ಟುತ್ತ ಇತ್ತು. ನನಗೆ ಅದು ಕನಸು ಎಂದು ಅನಿಸಲಿಲ್ಲ. ಆಗ ಕಣ್ಣಲ್ಲಿ ನೀರು ಹೋಗ್ತಾನೇ ಇತ್ತು. ನನ್ನ ಸಹಾಯಕ್ಕೆ ಹನುಮಂತ ಬಂದಿದ್ದಾನೆ. ನನ್ನನ್ನು ಜೋಪಾನ ಮಾಡುತ್ತಿದ್ದಾನೆ ಅನ್ನೋ ರೀತಿಯಲ್ಲಿ ಕಣ್ಣಲ್ಲಿ ನೀರು ಬರುತ್ತಿತ್ತು. ಎದ್ದು ನೋಡಿದಾಗ ಮುಂಜಾನೆ 4.30 ಆಗಿತ್ತು. ಎಚ್ಚರ ಆಗ್ತಿದ್ದಂತೆ ಕೈಕಾಲುಗಳೆಲ್ಲ ನಡುಗಲು ಶುರುವಾಗಿಬಿಟ್ಟಿತ್ತು.

ಹಾಗೆ ಎದ್ದು ಕೂತುಕೊಂಡು ಮೇಲೆ ‘ನೀನು ಬಂದಿದ್ದೀಯಾ..ನನ್ನನು ಕರೆದುಕೊಂಡು ಹೋಗು. ನನ್ನ ಮನೆಗೆ ಸೇರಿಸು, ಮಕ್ಕಳಿದ್ದಾರೆ, ಶ್ರೀಮತಿ ಜೊತೆ ಸೇರಿಸು. ನಾನು ಬದುಕಬೇಕು. ಅಂಜಾನಾದ್ರಿಗೆ ಬಂದು ಮತ್ತೆ ನಾನು ನಿನ್ನ ಸೇವೆ ಮಾಡುತ್ತೇನೆ ಎಂದು ಪ್ರಾರ್ಥನೆ ಮಾಡಿಕೊಂಡೆ. ಅದೇ ದಿನ ಹನ್ನಂದು ಗಂಟೆ ಸುಮಾರಿಗೆ ಸುಪ್ರೀಂ ಕೋರ್ಟ್​ನಿಂದ ಜಾಮೀನು ಸಿಕ್ಕಿತು ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ ಮಲಗಿದ್ದಾಗ ಬಿದ್ದಿತ್ತು ಕನಸು, ರೆಡ್ಡಿ ಬದುಕಿಗೆ ಅದೇ ಮಹಾ ತಿರುವು- EXCLUSIVE ಸಂದರ್ಶನದಲ್ಲಿ ರೋಚಕ ಮಾಹಿತಿ

https://newsfirstlive.com/wp-content/uploads/2024/04/JANARDANA-REDDY.jpg

Load More