newsfirstkannada.com

‘ಆ ದೇವರೇ ವರ ಕೊಟ್ಟಂತೆ ಆಯ್ತು..’ ಕೊಹ್ಲಿ ಕಾಲಿಗೆ ಬಿದ್ದಿದ್ದ ರಾಯಚೂರಿನ ಯುವಕನಿಗೆ ಸಖತ್ ಡಿಮ್ಯಾಂಡ್​..!

Share :

Published April 2, 2024 at 7:53am

Update April 2, 2024 at 9:43am

  ಮಾರ್ಚ್​ 25 ರಂದು ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ ಅಭಿಮಾನಿ

  ನಂತರ ಭದ್ರತಾ ಸಿಬ್ಬಂದಿಗೆ ಅಭಿಮಾನಿಗೆ ಸಿಕ್ಕಾಪಟ್ಟೆ ಹೊಡೆದಿದ್ದರು

  ಇನ್ನೂ ಕೊಹ್ಲಿ ಗುಂಗಲ್ಲೇ ಇದ್ದಾರಂತೆ ರಾಯಚೂರಿನ ಚಿನ್ನಾ

ರಾಯಚೂರು: ಮಾರ್ಚ್​ 25 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಮತ್ತು ಪಿಬಿಕೆಎಸ್​ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ, ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ.

ನಂತರ ಆತನನ್ನು ಬಾಡಿಗಾರ್ಡ್ಸ್​​ ಹಿಡಿದು, ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರು. ಕೊನೆಗೆ ಭದ್ರತಾ ಸಿಬ್ಬಂದಿ ಸಿಕ್ಕಾಪಟ್ಟೆ ಥಳಿಸಿರುವ ವಿಡಿಯೋ ವೈರಲ್ ಆಗಿತ್ತು. ಆತನಿಗೆ ಹೊಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಕ್ರಿಕೆಟ್ ಅಭಿಮಾನಿಗಳು ಆರ್​ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಂದು ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿ, ಕಾಲಿಗೆ ನಮಸ್ಕರಿಸಿ ಬಂದಿದ್ದ ರಾಯಚೂರಿನ ಯುವಕನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಅಂತೆ.

ರಾಯಚೂರು ನಗರದ LBS ನಗರದ ಚಿನ್ನಾ ಎಂಬ ಯುವಕ, ಕೊಹ್ಲಿಯ ಅಪ್ಪಟ ಅಭಿಮಾನಿ ಆಗಿದ್ದಾನೆ. ಮಾರ್ಚ್ 25 ರಂದು ಕೊಹ್ಲಿ ಕಾಲಿಗೆ ಬಿದ್ದು ಬಂದಾಗಿ‌ನಿಂದ ಯುವಕನಿಗೆ ಫುಲ್ ಡಿಮ್ಯಾಂಡ್ ಅಂತೆ. ಕೊಹ್ಲಿ ಅಭಿಮಾನಿ ಚಿನ್ನಾನನ್ನು ಭೇಟಿಯಾಗಿ ಅಭಿನಾನಿಗಳಿಂದ ಶುಭಾಶಯಗಳ ಸುರಿಮಳೆ ಹರಿದು ಬರ್ತಿದೆಯಂತೆ.

ಇದನ್ನೂ ಓದಿ: ನಿನ್ನೆಯ ಪಂದ್ಯದಲ್ಲೂ ಪ್ರಮಾದ.. ಮೈದಾನಕ್ಕೆ ನುಗ್ಗಿದ ಅಭಿಮಾನಿ ಕಂಡು ಹೌಹಾರಿದ ರೋಹಿತ್ ಶರ್ಮಾ -VIDEO

ಈ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಕೊಹ್ಲಿ ಅಭಿಮಾನಿ ಚಿನ್ನಾ ಮಾತನಾಡಿ.. ಕೊಹ್ಲಿ ಸರ್ ಆಶೀರ್ವಾದ ಪಡೆದಿದ್ದೀನಿ, ಇನ್ಮುಂದೆ ನಾನು ಸತ್ತರೂ ಪರ್ವಾಗಿಲ್ಲ. ಕೊಹ್ಲಿ ಕಾಲಿಗೆ ಬಿದ್ದಾಗ ನನಗೆ ಹೊಡೆಯಬೇಡಿ ಎಂದು ಬಾಡಿಗಾರ್ಡ್ಸ್​​ಗೆ ಹೇಳಿದ್ದರು. ಈ ವೇಳೆ ನಾನು ನಿಮ್ಮ ಬಿಗ್ ಫ್ಯಾನ್ ಸರ್ ಎಂದೆ, ಕೊಹ್ಲಿ ಥ್ಯಾಂಕ್ಸ್ ಎಂದರು. ಆಗ ದೇವರೇ ನನಗೆ ವರ ಕೊಟ್ಟಂತೆ ಆಯ್ತು. ಕೊಹ್ಲಿನಾ ಭೇಟಿಯಾಗಬೇಕು ಎಂದು ಚಿಕ್ಕವನಿದ್ದಾಗಿನಿಂದಲೂ ಆಸೆ ಇತ್ತು. ಹಾಗಾಗಿ ಮೀಟ್ ಆಗಲೇಬೇಕು ಎಂದು ಆವತ್ತಿನ ಪಂದ್ಯಕ್ಕೆ ಹೋಗಿದ್ದೆ. ಕೊನೆಗೂ ಕೊಹ್ಲಿ ಅವರನ್ನು ಭೇಟಿಯಾದೆ. ಭಯದಲ್ಲೇ ಕೊಹ್ಲಿಯನ್ನ ಹಗ್ ಮಾಡಿದೆ. ಭೇಟಿಯಾದ ಎರಡು ದಿನದಿಂದ ನಾನು ಕೊಹ್ಲಿ ಗುಂಗಲ್ಲೇ ಇದ್ದೇನೆ ಎಂದು ಚಿನ್ನಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆ ದೇವರೇ ವರ ಕೊಟ್ಟಂತೆ ಆಯ್ತು..’ ಕೊಹ್ಲಿ ಕಾಲಿಗೆ ಬಿದ್ದಿದ್ದ ರಾಯಚೂರಿನ ಯುವಕನಿಗೆ ಸಖತ್ ಡಿಮ್ಯಾಂಡ್​..!

https://newsfirstlive.com/wp-content/uploads/2024/04/KOHLI-FAN-CHINNA-1.jpg

Load More