newsfirstkannada.com

ನಿನ್ನೆಯ ಪಂದ್ಯದಲ್ಲೂ ಪ್ರಮಾದ.. ಮೈದಾನಕ್ಕೆ ನುಗ್ಗಿದ ಅಭಿಮಾನಿ ಕಂಡು ಹೌಹಾರಿದ ರೋಹಿತ್ ಶರ್ಮಾ -VIDEO

Share :

Published April 2, 2024 at 7:16am

Update April 2, 2024 at 7:18am

    ಐಪಿಎಲ್​ ಪಂದ್ಯಗಳಲ್ಲಿ ಪದೆ ಪದೇ ಭದ್ರತಾ ಲೋಪ ಆಗ್ತಿರೋದೇಕೆ?

    ಮೊನ್ನೆ ಬೆಂಗಳೂರಲ್ಲಿ ಹೈಡ್ರಾಮಾ ಸೃಷ್ಟಿಸಿದ್ದ ಕಿಂಗ್ ಕೊಹ್ಲಿಯ ಅಭಿಮಾನಿ

    ಕೊಹ್ಲಿ ಅಭಿಮಾನಿಗೆ ಬಿದ್ದಂತೆ ರೋಹಿತ್ ಫ್ಯಾನ್​ಗೂ ಬಿದ್ವಾ ಒದೆಗಳು..?

ಐಪಿಎಲ್​​ ಪಂದ್ಯಗಳ ವೇಳೆ ನಡೆಯುತ್ತಿರುವ ಭದ್ರತಾ ಲೋಪ ಮುಂದುವರಿದಿದೆ. ಮೊನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ. ಅದಾದ ನಂತರ ಆತನಿಗೆ ಬಿಸಿಬಿಸಿ ಬಾಸುಂಡೆಗಳು ಬಿದ್ದಿದ್ದವು. ಇದೀಗ ಮತ್ತೆ ಅಂತಹುದೇ ಒಂದು ಪ್ರಮಾದ ನಡೆದಿದೆ.

ಐಪಿಎಲ್​​ನ 14ನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​​ ನಡುವೆ ನಡೆದ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿಬಿಟ್ಟಿದ್ದಾನೆ. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್​ ಮಾಡ್ತಿದ್ದ ವೇಳೆ ಓಡಿ ಬಂದು ರೋಹಿತ್ ಶರ್ಮಾರನ್ನ ತಬ್ಬಿಕೊಂಡಿದ್ದಾರೆ.

ಇದನ್ನೂ ಓದಿ: ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

ಫ್ಯಾನ್ಸ್ ಓಡಿ ಬರ್ತಿರೋದು ಗೊತ್ತಾಗ್ತಿದ್ದಂತೆ ಒಂದು ಕ್ಷಣ ರೋಹಿತ್ ದಂಗಾಗಿದ್ದಾನೆ. ರೋಹಿತ್ ತಬ್ಬಿಕೊಂಡ ಆತ ಇಶಾನ್ ಕಿಶನ್​ರನ್ನೂ ತಬ್ಬಿಕೊಂಡಿದ್ದಾನೆ. ವಿಶೇಷ ಅಂದ್ರೆ ಇಶಾನ್ ಕಿಶನ್ ಕೂಡ ಆತನನ್ನು ತಬ್ಬಿ ಶೇಖ್​ ಹ್ಯಾಂಡ್ ಮಾಡಿದ್ದಾನೆ. ಅದೇ ಖುಷಿಯಲ್ಲಿ ಹುಚ್ಚು ಅಭಿಮಾನಿ, ಮೈದಾನದಲ್ಲಿ ಸಂಭ್ರಮಿಸುತ್ತ ಓಡಿ ಬಂದಿದ್ದಾನೆ. ಕೊನೆಗೆ ಭದ್ರತಾ ಸಿಬ್ಬಂದಿ ಅಲ್ಲಿಗೆ ಓಡಿ ಬಂದು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆಯ ಪಂದ್ಯದಲ್ಲೂ ಪ್ರಮಾದ.. ಮೈದಾನಕ್ಕೆ ನುಗ್ಗಿದ ಅಭಿಮಾನಿ ಕಂಡು ಹೌಹಾರಿದ ರೋಹಿತ್ ಶರ್ಮಾ -VIDEO

https://newsfirstlive.com/wp-content/uploads/2024/04/ROHIT-FANS.jpg

Load More