newsfirstkannada.com

ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

Share :

Published April 1, 2024 at 7:15am

  3 ಸಿಕ್ಸರ್, 4 ಬೌಂಡರಿ ಬಾರಿಸಿ ಮಿಂಚಿದ ಧೋನಿ

  ಧೋನಿ ಆಟ ಕಂಡು ಹುಚ್ಚೆದ್ದು ಕುಣಿದ ಅಭಿಮಾನಿಗಳು

  ಡೆಲ್ಲಿ ವಿರುದ್ಧ 20 ರನ್​ಗಳಿಂದ ಸೋತ ಸಿಎಸ್​​ಕೆ ತಂಡ

ನಿನ್ನೆ ಡಾ.ವೈ.ಎಸ್.ರಾಜಶೇಖರ್​​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ.

ಬ್ಯಾಕ್​ ಟು ಬ್ಯಾಕ್​​ 2 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್​​, ಚೆನ್ನೈ ವಿರುದ್ಧ ಮೊದಲ ಪಂದ್ಯ ಗೆದ್ದಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ, 20 ಓವರ್​ಗಳಲ್ಲಿ 5 ವಿಕೆಟ್​ಗೆ 191 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಚೆನ್ನೈ ತಂಡ, 6 ವಿಕೆಟ್​ ಕಳೆದುಕೊಂಡು 131 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯನಾ ಟ್ರೋಲ್​ ಮಾಡೋ ರೋಹಿತ್​​ ಫ್ಯಾನ್ಸ್​​ಗೆ ಎಚ್ಚರ! ಏನಿದು ಸ್ಟೋರಿ?

ಇತ್ತ ಸಿಎಸ್​ಕೆ ಮಾಜಿ ಕ್ಯಾಪ್ಟನ್​​ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೊನೆ ಕ್ಷಣದಲ್ಲಿ ಬಂದು ಒಟ್ಟು 16 ಬಾಲ್​ಗಳನ್ನು ಎದುರಿಸಿರುವ ಧೋನಿ, 231.25 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದರು. ಮೂರು ಅಮೋಘ ಸಿಕ್ಸರ್​, 4 ಅದ್ಭುತ ಬೌಂಡರಿಗಳನ್ನು ಚಚ್ಚಿದರು. ಒಟ್ಟು 37 ರನ್​ಗಳನ್ನು ಬಾರಿಸಿದ ಧೋನಿ, ಅಭಿಮಾನಿಗಳಿಗೆ ಸಖತ್​​ ಎಂಟರ್ಟೈನ್​ ಮಾಡಿದರು.

ಮೂರು ಪಂದ್ಯಗಳನ್ನು ಆಡಿದ್ದ ಧೋನಿಗೆ, ಕಳೆದ ಎರಡು ಪಂದ್ಯಗಳಲ್ಲಿ ಧೋನಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನಿನ್ನೆಯ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅಭಿಮಾನಿಗಳ ಆಸೆಗೆ ಧೋನಿ ನಿರಾಸೆ ಮಾಡಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

https://newsfirstlive.com/wp-content/uploads/2024/04/MS-DHONI-5.jpg

Load More