newsfirstkannada.com

ಹಾರ್ದಿಕ್​ ಪಾಂಡ್ಯನಾ ಟ್ರೋಲ್​ ಮಾಡೋ ರೋಹಿತ್​​ ಫ್ಯಾನ್ಸ್​​ಗೆ ಎಚ್ಚರ! ಏನಿದು ಸ್ಟೋರಿ?

Share :

Published March 31, 2024 at 8:33pm

    ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್​ ಟೀಮ್​​​

    ಹಾರ್ದಿಕ್​​, ರೋಹಿತ್​ ಮಧ್ಯೆ ಮುಂದುವರಿದ ಜಗಳ..!

    ಕ್ಯಾಪ್ಟನ್​ ಪಾಂಡ್ಯ ವಿರುದ್ಧ ಘೋಷಣೆ ಕೂಗಿದ್ರೆ ಶಿಕ್ಷೆ

ಕಳೆದ 2 ಪಂದ್ಯಗಳಲ್ಲೂ ಸ್ಟಾರ್​ ಆಲ್​ರೌಂಡರ್​​​​ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಬ್ಯಾಕ್​ ಟು ಬ್ಯಾಕ್​​ ಹೀನಾಯ ಸೋಲು ಕಂಡಿದೆ. ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿತು. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​​​ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಹೌದು, ಮುಂಬೈ ಇಂಡಿಯನ್ಸ್​​ ತಂಡವು ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್​ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್​ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್​ ಕೂಡ ಹಾರ್ದಿಕ್​ ಪರವೇ ಇದೆ.

ಕೊನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಹೈದರಾಬಾದ್ ವಿರುದ್ಧ 31 ರನ್​ಗಳಿಂದ ಸೋತಿದೆ. ಈ ಪಂದ್ಯಗಳಲ್ಲಿ ಹಾರ್ದಿಕ್​ ಬ್ಯಾಟಿಂಗ್​​, ಬೌಲಿಂಗ್​ ಎರಡು ವಿಭಾಗಗಳಲ್ಲೂ ಫೇಲ್ಯೂರ್​ ಆಗಿದ್ದಾರೆ. ಹೀಗಾಗಿ ಹಾರ್ದಿಕ್​​ ಅವರನ್ನು ಸಾಕಷ್ಟು ಟ್ರೋಲ್​ ಮಾಡಲಾಗುತ್ತಿದೆ. ಈ ಮಧ್ಯೆ ಮೈದಾನದಲ್ಲಿ ಯಾರಾದ್ರೂ ಹಾರ್ದಿಕ್​ ಪಾಂಡ್ಯರನ್ನು ನಿಂದಿಸುವ ಕೆಲಸ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಎಂಸಿಎ ಮುಂದಾಗಿದೆ. ಟ್ರೋಲ್ ಮಾಡುವವರನ್ನು ಹಾಗೂ ನಿಂದಿಸುವವರನ್ನು ಮೈದಾನದಿಂದ ಹೊರಹಾಕಲು ತೀರ್ಮಾನಿಸಿದೆ.

ಹಾರ್ದಿಕ್ ವಿರುದ್ಧ ಈ ರೀತಿ ಕೃತ್ಯ ಎಸಗುವವರನ್ನು ಪತ್ತೆ ಹಚ್ಚುವ ಸಲುವಾಗಿ ಎಂಸಿಎ ಭದ್ರತೆಯನ್ನು ಹೆಚ್ಚಿಸಿದೆ. ಪಂದ್ಯದ ವೇಳೆ ಹಾರ್ದಿಕ್ ವಿರುದ್ಧ ಕಾಮೆಂಟ್ ಮಾಡುವ, ಘೋಷಣೆ ಕೂಗುವ ಪ್ರೇಕ್ಷಕರನ್ನು ಕಸ್ಟಡಿಗೆ ತೆಗೆದುಕೊಂಡು ಮೈದಾನದಿಂದ ಹೊರಹಾಕಲಾಗುತ್ತದೆ.

ಇದನ್ನೂ ಓದಿ: VIDEO: ಹಾರ್ದಿಕ್​​ಗೆ ಚಪ್ಪಲಿ ಎಸೆದು ರೋಹಿತ್​​ ಫ್ಯಾನ್ಸ್​ ಆಕ್ರೋಶ; ಈ ಬಗ್ಗೆ ಸ್ಟಾರ್​ ಕ್ರಿಕೆಟರ್​​ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ದಿಕ್​ ಪಾಂಡ್ಯನಾ ಟ್ರೋಲ್​ ಮಾಡೋ ರೋಹಿತ್​​ ಫ್ಯಾನ್ಸ್​​ಗೆ ಎಚ್ಚರ! ಏನಿದು ಸ್ಟೋರಿ?

https://newsfirstlive.com/wp-content/uploads/2024/03/Hardik_Rohit-News1.jpg

Load More