/newsfirstlive-kannada/media/post_attachments/wp-content/uploads/2024/03/DENIAL-BALAJI.jpg)
ಹಠಾತ್ ಹೃದಯಾಘಾತದಿಂದ ನಿಧನರಾದ ಜನಪ್ರಿಯ ಖಳನಟ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಡೇನಿಯಲ್ ಬಾಲಾಜಿಗೆ ನೇತ್ರದಾನ ಮಾಡೋದು ಅವರ ಕನಸಾಗಿತ್ತು. ಅಂತೆಯೇ ನೇತೃದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರ ಆಸೆಯಂತೆ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣುಗಳನ್ನು ಸಂರಕ್ಷಣೆ ಮಾಡಲಾಗಿದೆ. ವರದಿಗಳ ಪ್ರಕಾರ, ಇಬ್ಬರು ವ್ಯಕ್ತಿಗಳ ಬದುಕಿಗೆ ಡೇನಿಯಲ್ ಬೆಳಕಾಗಿದ್ದಾರೆ ಎನ್ನಲಾಗಿದೆ. ಕಣ್ಣುಗಳ ಸಂರಕ್ಷಣೆ ಬೆನ್ನಲ್ಲೇ ಆಪರೇಷನ್ ಯಶಸ್ವಿಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/03/Balaji.jpg)
ಡೇನಿಯಲ್ ಬಾಲಾಜಿ ತಮಿಳು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. ಅವರು ಮೊದಲು ಧಾರಾವಾಹಿಗೆ ಪದಾರ್ಪಣೆ ಮಾಡಿದ್ದರು ಮತ್ತು ನಂತರ ಅನೇಕ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದರು. ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್​ವರ್ಲ್ಡ್​​​, ಡವ್ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲೂ ನಟಿಸಿದ್ದರು. ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟನಾಗಿ ಮಿಂಚಿದ್ದ ಡೇನಿಯಲ್ ಬಾಲಾಜಿಗೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಚಿಕಿತ್ಸೆಗಾಗಿ ಕೋಟಿವಾಕಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಅವರ ಜೀವ ಉಳಿಸಲು ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಹಠಾತ್​​ ಹೃದಯಾಘಾತ; ಕನ್ನಡ ನಟ ಡ್ಯಾನಿಯಲ್​​ ಬಾಲಾಜಿ ನಿಧನ
ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು. ಡೇನಿಯಲ್ ಬಾಲಾಜಿ ಅವರ ಹಠಾತ್ ಸಾವು ಚಿತ್ರರಂಗದಲ್ಲಿ ದುಃಖವನ್ನುಂಟು ಮಾಡಿದೆ. ಡೇನಿಯಲ್ ಬಾಲಾಜಿ ಅವರ ಹಠಾತ್ ನಿಧನವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರು ಸಂತಾಪ ಸೂಚಿಸ್ತಿದ್ದಾರೆ. #RIPDanielBalaji#DanielBalaji
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us